ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಕ್ಕೆ ಬಲಿಯಾದರೆ ಜೀವ ವಿಮೆ‌ ಕೊಡಬೇಕು; ವಿಮಾ ಮಂಡಳಿ

|
Google Oneindia Kannada News

ನವದೆಹಲಿ, ಏಪ್ರಿಲ್‌ 7: ಕೊರೊನಾ ಮಹಾಮಾರಿ ಜನರಲ್ಲಿ ತೀವ್ರ ಆತಂಕ ಹುಟ್ಟಿಹಾಕಿದೆ. ಒಂದು ವೇಳೆ ಕೊರೊನಾ ಸೋಂಕು ತಗುಲಿ ಮೃತಪಟ್ಟರೇ ಜೀವವಿಮೆ ಸಿಗುತ್ತಾ ಎನ್ನುವುದು ಹಲವರ ಪ್ರಶ್ನೆಯಾಗಿದೆ.

ಈ ಬಗ್ಗೆ ಇರುವ ಅನುಮಾನಗಳಿಗೆ ಜೀವ ವಿಮೆ ಮಂಡಳಿ ತೆರೆ ಎಳೆದಿದ್ದು, ಜೀವ ವಿಮೆ ಮಾಡಿಸಿದವರು ಕೊರೊನಾದಿಂದ ಮೃತಪಟ್ಟರೇ ಅವರಿಗೆ ವಿಮೆ ಸಿಗಲಿದೆ ಎಂದು ಮಂಡಳಿ ಖಚಿತಪಡಿಸಿದೆ.

ಜೀವ ವಿಮೆ ಪಾಲಿಸಿ ಖರೀದಿಸಿದವರು ಒಂದು ವೇಳೆ 'ಕೋವಿಡ್‌-19'ನಿಂದಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಮರಣ ಪರಿಹಾರ ಕೊಡುವುದು ಎಲ್ಲ ಜೀವ ವಿಮೆ ಕಂಪನಿಗಳ ಕರ್ತವ್ಯವಾಗಿದೆ ಎಂದು ಜೀವ ವಿಮೆ ಮಂಡಳಿಯು ತಿಳಿಸಿದೆ.

Life Insurance Is Apply For In case Of Coronavirus Deaths

'ಕೋವಿಡ್‌-19' ಪ್ರಕರಣಗಳಲ್ಲಿನ ಯಾವುದೇ ಸಾವಿನ ಪ್ರಕರಣಗಳ ಕ್ಲೇಮ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಪರಿಹಾರ ಧನ ವಿತರಿಸಲು ಸರ್ಕಾರಿ ಮತ್ತು ಖಾಸಗಿ ವಿಮೆ ಕಂಪನಿಗಳು ಬದ್ಧವಾಗಿರಬೇಕು. ಇಂತಹ ಸಾವಿನ ಪ್ರಕರಣಗಳಲ್ಲಿ ಅನಿರೀಕ್ಷಿತ ಸಂದರ್ಭ ಎಂಬುವ ನಿಯಮ ಅನ್ವಯಗೊಳ್ಳುವುದಿಲ್ಲ ಎಂದು ಮಂಡಳಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಎಲ್ಲ ವಿಮೆ ಕಂಪನಿಗಳು ತಮ್ಮ ಗ್ರಾಹಕರಿಗೆ ವೈಯಕ್ತಿಕವಾಗಿ ಈ ಮಾಹಿತಿ ನೀಡಬೇಕು ಮತ್ತು ಯಾವುದೇ ವಿಮಾ ಕಂಪೆನಿಗಳು ಗ್ರಾಹಕರಲ್ಲಿ ಗೊಂದಲ ಉಂಟು ಮಾಡಬಾರದು ಎಂದು ಮಂಡಳಿ ಸೂಚಿಸಿದೆ.

English summary
Life Insurance Is Apply For In case Of Coronavirus Deaths Insurance Bord orders it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X