ಮತ್ತೆ ಭ್ರಷ್ಟಾಚಾರದ ಕೂಪದಲ್ಲಿ ಏರ್ ಇಂಡಿಯಾ
ನವದೆಹಲಿ, ಫೆ.22: ಈಗಾಗಲೇ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿ ಆರ್ಥಿಕವಾಗಿ ಪತರಗುಟ್ಟಿರುವ ಸರಕಾರಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಮತ್ತೊಂದು ಅಪವಾದ ತಗುಲಿದೆ.
ಹೌದು, Air Indiaದಲ್ಲಿ ಭಾರಿ ಪ್ರಮಾಣದ ಹಗರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಭ್ರಷ್ಟಾಚಾರವನ್ನು ಪೋಷಿಸಿಕೊಂಡು ಬಂದಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯಲ್ಲಿನ ಉನ್ನತಾಧಿಕಾರಿಗಳು LTC ಹಗರಣದಲ್ಲಿ ಭಾಗಿಯಾಗಿದ್ದು ಇತ್ತೀಚೆಗೆ ವರದಿಯಾಗಿತ್ತು.

ಈಗ ಅಂತಹುದೇ ಸ್ವರೂಪದ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಸಂಸ್ಥೆಯ ನೌಕರರು ಕುಟುಂಬ ಸದಸ್ಯರೊಂದಿಗೆ ವರ್ಷಕ್ಕೊಮ್ಮೆ ರಿಯಾಯಿತಿ ದರದಲ್ಲಿ ವಿದೇಶ ಪ್ರವಾಸ ಕೈಗೊಳ್ಳಲು family fare scheme (FFS) ಏರ್ ಇಂಡಿಯಾದಲ್ಲಿ ಅವಕಾಶವಿದೆ. ಇದರಲ್ಲಿಯೇ ಸುಮಾರು 20 ಕೋಟಿ ರೂ. ಅಕ್ರಮ ನಡೆದಿರುವುದು ಇದೀಗ ಗಮನಕ್ಕೆ ಬಂದಿರುವುದು.
ವಾಮ ಮಾರ್ಗದಲ್ಲಿ ವಾಯುಯಾನ ಸಂಸ್ಥೆ:
ಭ್ರಷ್ಟಾಚಾರ ಭಾರಿ ಪ್ರಮಾಣದಲ್ಲಿ ನಡೆದಿರುವುದು ಆಂತರಿಕ ಲೆಕ್ಕ ಪರಿಶೋಧನೆಯಿಂದ ತಿಳಿದುಬಂದಿದ್ದು, ತಕ್ಷಣ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ. ಖೊಟ್ಟಿ ಫಲಾನುಭವಿಗಳನ್ನು ಸೃಷ್ಟಿಸಿ ವಾಮ ಮಾರ್ಗದಲ್ಲಿ ಹಣ ಲಪಾಟಿಯಿಸಿರುವುದು ಲೆಕ್ಕ ಪರಿಶೋಧನೆಯಿಂದ ಪತ್ತೆಯಾಗಿದೆ. ಇದು ಇಡೀ ದೇಶದಾದ್ಯಂತ ಎಲ್ಲ Air India ಕಚೇರಿಗಳಲ್ಲೂ ವ್ಯವಸ್ಥಿತವಾಗಿ ನಡೆದಿದೆ.
ಒಂದೇ ಟ್ರಾವೆಲ್ ಏಜೆನ್ಸಿಯ ಸಹಭಾಗಿತ್ವದಲ್ಲಿ ನಡೆದಿರುವ ಪ್ರಕರಣದಲ್ಲಂತೂ ಸಂಸ್ಥೆಗೆ 6 ಕೋಟಿ ರೂ. ನಷ್ಟವುಂಟಾಗಿದೆ ಎಂದು Chief vigilance officer ಬಿಕೆ ಮೌರ್ಯ ತಿಳಿಸಿದ್ದಾರೆ. ಇನ್ನೂ ಅನೇಕ ಟ್ರಾವೆಲ್ ಏಜೆನ್ಸಿಗಳು ಈ ಅಕ್ರಮದಲ್ಲಿ ಶಾಮೀಲಾಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. (ಪಿಟಿಐ)












Click it and Unblock the Notifications