ಪ್ರಯೋಗಕ್ಕೆ ಯಾರೂ ಬರ್ತಿಲ್ಲ; ಕೊರೊನಾ ಲಸಿಕೆ ಸಿಗೋದು ತಡವಾಗುತ್ತಾ?

ನವದೆಹಲಿ, ಡಿಸೆಂಬರ್ 18: ಕೊರೊನಾ ವೈರಸ್ ಲಸಿಕೆ ದೊರೆಯುವ ದಿನ ಶೀಘ್ರವೇ ಬರುವ ನಂಬಿಕೆಯಲ್ಲಿ ಇಡೀ ದೇಶವಿದೆ. ಆದರೆ ಅಂದುಕೊಂಡಿದ್ದಕ್ಕಿಂತ ಲಸಿಕೆಯ ಪ್ರಕ್ರಿಯೆ ತಡವಾಗುವ ಲಕ್ಷಣಗಳು ಕಂಡುಬರುತ್ತಿವೆ.

ಇದಕ್ಕೆ ಕಾರಣ ಲಸಿಕೆಯ ಪ್ರಯೋಗ. ಭಾರತದಲ್ಲಿ ಲಸಿಕೆಯ ಪ್ರಯೋಗಗಳಿಗೆ ಸ್ವಯಂಸೇವಕರ ಕೊರತೆ ಕಾಡುತ್ತಿದೆಯಂತೆ. ಲಸಿಕೆಯ ಪ್ರಯೋಗಕ್ಕೆ ಒಳಗಾಗಲು ಜನರು ಹಿಂದೇಟು ಹಾಕುತ್ತಿದ್ದು, ಲಸಿಕೆಯ ಪ್ರಯೋಗವನ್ನು ಸಂಪೂರ್ಣಗೊಳಿಸಲು ತಡವಾಗುತ್ತಿದೆ ಎಂದು ತಿಳಿದುಬಂದಿದೆ. ಭಾರತ್ ಬಯೋಟೆಕ್ ನ ಲಸಿಕೆ ಕೊವಾಕ್ಸಿನ್ ದೇಶಾದ್ಯಂತ ಮೂರನೇ ಪ್ರಾಯೋಗಿಕ ಹಂತದಲ್ಲಿದೆ. ಲಸಿಕೆಯ ತುರ್ತು ಬಳಕೆಗೆ ಅಧೀಕೃತ ಅನುಮೋದನೆ ನೀಡುವಂತೆಯೂ ಮನವಿ ಮಾಡಿದೆ. ಆದರೆ ಪ್ರಯೋಗದ ಹಂತವೇ ತಡವಾಗುತ್ತಿದೆ. ಮುಂದೆ ಓದಿ...

 ಪ್ರಯೋಗಕ್ಕೆ ಒಳಗಾಗಲು ಮುಂದೆ ಬರುತ್ತಿಲ್ಲ

ಪ್ರಯೋಗಕ್ಕೆ ಒಳಗಾಗಲು ಮುಂದೆ ಬರುತ್ತಿಲ್ಲ

ಪ್ರಯೋಗದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೆಲವೇ ಸಂಖ್ಯೆಯಲ್ಲಿ ಸ್ವಯಂಸೇವಕರಿದ್ದು, ಪ್ರಯೋಗ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ದೆಹಲಿಯ ಏಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೂರನೇ ಹಂತದ ಪ್ರಯೋಗಕ್ಕೆ ಅವಶ್ಯಕ ಸಂಖ್ಯೆಯಲ್ಲಿ ಸ್ವಯಂಸೇವಕರು ಬರುತ್ತಿಲ್ಲ ಎಂದು ಕೋವಾಕ್ಸಿನ್ ಲಸಿಕೆ ಪ್ರಯೋಗ ಕೈಗೊಂಡಿರುವ ಏಮ್ಸ್ ತಿಳಿಸಿದೆ.

 ಪ್ರಯೋಗಕ್ಕೆ 2000 ಸ್ವಯಂಸೇವಕರ ಅಗತ್ಯ

ಪ್ರಯೋಗಕ್ಕೆ 2000 ಸ್ವಯಂಸೇವಕರ ಅಗತ್ಯ

ಪ್ರಯೋಗಕ್ಕೆ ನಮಗೆ 1,500-2,000 ಸ್ವಯಂಸೇವಕರ ಅಗತ್ಯವಿದೆ. ಆದರೆ ಕೇವಲ 200 ಜನ ಮುಂದೆ ಬಂದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆ ಸಿಗುತ್ತಿರುವಾಗ ನಾವೇಕೆ ಪ್ರಯೋಗದಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಏಮ್ಸ್ ನ ಪ್ರೊ. ಡಾ. ಸಂಜಯ್ ರಾಯ್ ತಿಳಿಸಿದ್ದಾರೆ. ಭಾರತದಲ್ಲಿ ಶೀಘ್ರದಲ್ಲೇ ಕೊರೊನಾ ಲಸಿಕೆ ಸಿಗುತ್ತದೆ. ಕೆಲವೇ ವಾರಗಳಲ್ಲಿ ಲಸಿಕೆ ಸಿಗಲಿದೆ ಎಂಬ ಭಾವನೆ ಜನರಲ್ಲಿದೆ ಎಂದಿದ್ದಾರೆ.

 ಪ್ರಯೋಗಕ್ಕೆ ನಿರಾಕರಿಸುವವರ ಸಂಖ್ಯೆ ಹೆಚ್ಚುತ್ತಿದೆ

ಪ್ರಯೋಗಕ್ಕೆ ನಿರಾಕರಿಸುವವರ ಸಂಖ್ಯೆ ಹೆಚ್ಚುತ್ತಿದೆ

ಪ್ರಯೋಗಕ್ಕೆ ಒಳಗಾಗುವುದನ್ನು ನಿರಾಕರಿಸುವವರ ಸಂಖ್ಯೆಯು ಹೆಚ್ಚುತ್ತಿದೆ. ಪ್ರಯೋಗದ ಮೂರನೇ ಹಂತದಲ್ಲಿ ಈ ನಿರಾಕರಣ ಮಟ್ಟವು 70-80 % ಇದೆ. ಮೊದಲ ಹಂತದಲ್ಲಿ ಪ್ರಯೋಗಕ್ಕೆ ನಿರಾಕರಿಸಿದವರು 10%ಗಿಂತ ಕಡಿಮೆಯಿದ್ದರು. ಆಗ ಲಸಿಕೆ ಕುರಿತು ಸ್ಪಷ್ಟ ಮಾಹಿತಿ, ಅದರ ಪರಿಣಾಮದ ಕುರಿತು ಅರಿವಿಲ್ಲದಿದ್ದರೂ ಪ್ರಯೋಗಕ್ಕೆ ಒಳಪಟ್ಟವರ ಸಂಖ್ಯೆ ಹೆಚ್ಚಿದ್ದರು. ಇನ್ನಿತರ ಕೊರೊನಾ ಲಸಿಕೆಯ ಪ್ರಯೋಗಗಳಿಗೂ ಇದೇ ಸಮಸ್ಯೆಯಾಗಿರುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ.

 ಪ್ರಾಯೋಗಿಕ ಹಂತದಲ್ಲಿ ಹಲವು ಲಸಿಕೆಗಳು

ಪ್ರಾಯೋಗಿಕ ಹಂತದಲ್ಲಿ ಹಲವು ಲಸಿಕೆಗಳು

ಮೊದಲ ಹಂತದಲ್ಲಿ 100 ಸ್ವಯಂ ಸೇವಕರ ಜಾಗದಲ್ಲಿ 4,500 ಅರ್ಜಿಗಳು ಬಂದಿದ್ದವು. ಎರಡನೇ ಹಂತದಲ್ಲಿ 50ರ ಜಾಗದಲ್ಲಿ 4,000 ಅರ್ಜಿಗಳು ಬಂದಿದ್ದವು. ಮೂರನೇ ಹಂತದಲ್ಲಿ 2,500 ಸ್ವಯಂಸೇವಕರ ಅವಶ್ಯಕತೆಯಿದೆ. ಆದರೆ ಕೇವಲ 200- 300 ಮಂದಿ ಪ್ರಯೋಗಕ್ಕೆ ಬರಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಸದ್ಯಕ್ಕೆ ದೇಶದಲ್ಲಿ ಭಾರತ್ ಬಯೋಟೆಕ್ 18 ಕಡೆಗಳಲ್ಲಿ 22,000 ಸ್ವಯಂ ಸೇವಕರೊಂದಿಗೆ ವೈದ್ಯಕೀಯ ಪ್ರಯೋಗ ನಡೆಸುತ್ತಿದೆ. ಈಚೆಗೆ ಪುಣೆ ಮೂಲದ ಜೆನೊವಾ ಬಯೋ ಫಾರ್ಮ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯ ಮೊದಲನೇ ಹಂತದ ಪ್ರಯೋಗಕ್ಕೆ ಅನುಮತಿ ಪಡೆದುಕೊಂಡಿದೆ. ಹೈದರಾಬಾದ್ ಮೂಲದ ಬಯೊಲಾಜಿಕಲ್ ಇ ಲಿಮಿಟೆಡ್ ನ ಕೊರೊನಾ ಲಸಿಕೆ ಅಭಿವೃದ್ಧಿಕಾರರು 1/2 ಹಂತದ ಪ್ರಯೋಗದಲ್ಲಿದ್ದಾರೆ. ಸ್ಫುಟ್ನಿಕ್ ವಿ 2/3 ಪ್ರಯೋಗದ ಹಂತದಲ್ಲಿದೆ.

Recommended Video

      ದೀದಿಗೆ ಶಾಕ್ ಮೇಲೆ ಶಾಕ್! | Didi | west bengal | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+