ದೆಹಲಿ ಸರ್ಕಾರದ ಯೋಜನೆಗೆ ನಟ ಸೋನುಸೂದ್ ರಾಯಭಾರಿ

ನವದೆಹಲಿ, ಆಗಸ್ಟ್ 27: ದೆಹಲಿ ಸರ್ಕಾರದ ಯೋಜನೆಗಳಿಗೆ ನಟ ಸೋನುಸೂದ್ ರಾಯಭಾರಿಯಾಗಿದ್ದಾರೆ. ನಟ ಸೋನು ಸೂದ್ ಅವರು ದೆಹಲಿ ಎಎಪಿ ಸರ್ಕಾರದ 'ದೇಶ್ ಕಾ ಮೆಂಟರ್ಸ್' ಕಾರ್ಯಕ್ರಮದ ಬ್ರಾಂಡ್ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ವಿಶೇಷ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಆಯ್ಕೆಗಳನ್ನು ಮಾಡಲು ಮಾರ್ಗದರ್ಶನ ನೀಡಲಾಗುವುದು ಎಂದು ಶುಕ್ರವಾರ ಹೇಳಿದ್ದಾರೆ.

ಕೇಜ್ರಿವಾಲ್ ಮತ್ತು ಸೋನು ಸೂದ್ ಇಬ್ಬರೂ ಬೆಳಿಗ್ಗೆ ಭೇಟಿಯಾದಾಗ ರಾಜಕೀಯ ವಿಚಾರವಾಗಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಹೇಳಿದರು.

Actor Sonu Sood, Arvind Kejriwal Meet For A Delhi Scheme

"ನಾವು ಈ ಕಾರ್ಯಕ್ರಮದ ಬಗ್ಗೆ ಚರ್ಚಿಸಿದ್ದೇವೆ ಮತ್ತು ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ" ಎಂದು ಕೇಜ್ರಿವಾಲ್ ಸೂದ್ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

"ಸರ್ಕಾರಿ ಶಾಲೆಗಳಲ್ಲಿ ಕೆಲವು ವಿದ್ಯಾರ್ಥಿಗಳು ತೀರಾ ಬಡತನದ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಅವರಿಗೆ ಮಾರ್ಗದರ್ಶನ ಮಾಡಲು ಕೆಲವೇ ಜನರಿದ್ದಾರೆ. ಈ ಮಕ್ಕಳಿಗೆ ಮಾರ್ಗದರ್ಶಕರಾಗಲು ನಾವು ವಿದ್ಯಾವಂತರಿಗೆ ಮನವಿ ಮಾಡುತ್ತಿದ್ದೇವೆ. ಕಾರ್ಯಕ್ರಮಕ್ಕೆ ಸೋನು ಸೂದ್ ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ" ಎಂದು ಕೇಜ್ರಿವಾಲ್ ಹೇಳಿದರು .

ಸೋನು ಸೂದ್ ಪಂಜಾಬ್‌ನ ಮೊಗಾ ಜಿಲ್ಲೆಯ ನಿವಾಸಿ. ಸೋನು ಸೂದ್ ಆಮ್ ಆದ್ಮಿ ಪಕ್ಷಕ್ಕೆ ಸೇರಿದರೆ, ವಿರೋಧ ಪಕ್ಷಗಳು ಕೂಡ ಅವರ ಹೆಸರಿನಲ್ಲಿ ಪ್ರಶ್ನೆ ಎತ್ತುವದಿಲ್ಲ. ಆಮ್ ಆದ್ಮಿ ಪಕ್ಷವು ಪಂಜಾಬ್‌ ಚುನಾವಣೆಯನ್ನ ಸೋನು ಸೂದ್ ಮುಂದಿಟ್ಟುಕೊಂಡು ಎದುರಿಸಲಿದೆ ಎಂಬ ಮಾತು ಕೇಳಿ ಬರುತ್ತಿವೆ. ಪಂಜಾಬ್‌ನಲ್ಲಿ ಎಎಪಿಯ ಸರ್ಕಾರ ಬಂದರೆ ಸೋನು ಸೂದ್ ಅವರನ್ನು ಸಿಎಂ ಮಾಡಬಹುದೆಂಬ ಊಹಾಪೋಹಗಳು ಹರಿದಾಡುತ್ತಿವೆ.

ಸೋನು ಸೂದ್ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ಅವರ ಭೇಟಿಯಿಂದ ಅನೇಕ ರಾಜಕೀಯ ಅರ್ಥಗಳು ಹುಟ್ಟಿಕೊಂಡಿವೆ. ಈ ಸಭೆಯು ಪಂಜಾಬ್ ವಿಧಾನಸಭಾ ಚುನಾವಣೆಯೊಂದಿಗೆ ಸಂಬಂಧ ಹೊಂದಿದೆ.

ಇನ್ನು ಸ್ವಲ್ಪ ದಿನದಲ್ಲಿ ದೇಶದ 5 ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಆ ರಾಜ್ಯಗಳಲ್ಲಿ ಪಂಜಾಬ್ ಕೂಡ ಒಂದು. ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ರಾಜಕೀಯ ನೆಲೆಯನ್ನು ಹುಡುಕುವಲ್ಲಿ ತೊಡಗಿದೆ. ಕೇಜ್ರಿವಾಲ್ ಶಿರೋಮಣಿ ಅಕಾಲಿ ದಳದ ನಾಯಕ ಸೇವಾ ಸಿಂಗ್ ಶೇಖ್ವಾನ್ ಅವರನ್ನು ಕೂಡ ಭೇಟಿಯಾಗಿದ್ದಾರೆ.

ದೇಶ್ ಕೆ ಮೆಂಟರ್' ಉಪಕ್ರಮದ ಅಡಿಯಲ್ಲಿ ತಮ್ಮ ವೃತ್ತಿಯಲ್ಲಿ ಅನುಭವ ಹೊಂದಿರುವ ಜನರನ್ನು ದೆಹಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾದ ಮಕ್ಕಳ ಮಾರ್ಗದರ್ಶಕರ ಗುಂಪಿಗೆ ಪ್ರೋತ್ಸಾಹಿಸಲಾಗುವುದು ಎಂದು ಸಿಎಂ ಅರವಿಂದ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು, ಈ ಉಪಕ್ರಮವನ್ನು ಸೆಪ್ಟೆಂಬರ್ ಮಧ್ಯದಲ್ಲಿ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸೋನು ಸೂದ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜನ ಕಲ್ಯಾಣ ಉಪಕ್ರಮಗಳಿಗಾಗಿ ಪ್ರಶಂಸಿಸಿದರು ಮತ್ತು ರಾಷ್ಟ್ರ ರಾಜಧಾನಿ ಶಿಕ್ಷಣಕ್ಕೆ ಆದರ್ಶ ಮಾದರಿ ಎಂದು ಹೇಳಿದರು. ಸಾಮಾಜಿಕ ಸೂಚಕಗಳಲ್ಲಿ ಪ್ರಗತಿಯು ಶಿಕ್ಷಣದಿಂದ ಮಾತ್ರ ಬರುತ್ತದೆ ಎಂದು ಹೇಳಿದ ನಟ ಮಕ್ಕಳ ಉಜ್ವಲ ಭವಿಷ್ಯದ ಕಡೆಗೆ ಮಾರ್ಗದರ್ಶನ ಮಾಡುವ 'ಮಾರ್ಗದರ್ಶಕರ' ಅಗತ್ಯತೆ ಇದೆ ಎಂದು ಹೇಳಿದರು.

ವಲಸೆಗಾರರ ಬಿಕ್ಕಟ್ಟಿನ ಸಮಯದಲ್ಲಿ ಕೆಲಸ ಮಾಡುವಾಗ ಸೂದ್ ಎದುರಿಸಿದ ಸಮಸ್ಯೆ ಇದಾಗಿದ್ದು, ಪ್ರಸ್ತುತ ಸುಮಾರು 20,000 ವಲಸಿಗ ಮಕ್ಕಳಿಗೆ ಚಾರಿಟಿ ಸಂಸ್ಥೆಗಳ ಅಡಿಯಲ್ಲಿ ಕಲಿಸಲಾಗುತ್ತಿದೆ. ಆದರೆ ಶಾಲಾ ಮಕ್ಕಳಿಗಾಗಿ ದೆಹಲಿ ಸರ್ಕಾರದ ಉಪಕ್ರಮದ ಅಡಿಯಲ್ಲಿ ಇದನ್ನು ಔಪಚಾರಿಕಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+