ಸಮೀಕ್ಷೆ, ಸಿಎಂಗೆ ಹುದ್ದೆಗೆ ಯಾರು ಬೆಸ್ಟ್? ಕಿರಣ್ ಬೇಡಿ Vs ಕೇಜ್ರಿವಾಲ್
ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ಆಯ್ಕೆಯಾದ ನಂತರ ಅವರ ಹೆಚ್ಚಿನ ರಾಜಕೀಯ ನಡೆಗಳು ಪಕ್ಷಕ್ಕೆ ಲಾಭ ತಂದಿದೆಯೇ ಹೊರತು, ಪಕ್ಷ ಮುಜುಗರ ಅನುಭವಿಸಿದ ಉದಾಹರಣೆಗಳು ಕಮ್ಮಿ.
ಕಳೆದ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ (2013) ಬಿಜೆಪಿ, ಸರಕಾರ ರಚಿಸುವ ಹೊಸ್ತಿಲಲ್ಲಿ ಎಡವಿದ್ದು ಈಗ ಇತಿಹಾಸ. ಬರುವ ತಿಂಗಳು ನಡೆಯಲಿರುವ ದೆಹಲಿ ಅಸೆಂಬ್ಲಿ ಚುನಾವಣೆಗೆ ಮುನ್ನ ಬಿಜೆಪಿ ಕಿರಣ್ ಬೇಡಿಯವರನ್ನು ಪಕ್ಷದ ಸಿಎಂ ಅಭ್ಯರ್ಥಿ ಎಂದು ಘೋಷಿಸಿದೆ. (ಕಿರಣ್ ಬೇಡಿ : ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿ)
ಈ ವರ್ಷ ದೇಶದ ಕೆಲವು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತನ್ನ ಮುಖ್ಯಮಂತ್ರಿಗಳ ಹೆಸರನ್ನು ಪ್ರಕಟಿಸಿರಲಿಲ್ಲ, ಶಾಸಕಾಂಗ ಸಭೆಯಲ್ಲಿ ಅದು ನಿರ್ಧಾರವಾಗಿತ್ತು, ಆ ಮೂಲಕ ಬಿಜೆಪಿ ದೆಹಲಿ ಚುನಾವಣೆಗಾಗಿಯೇ ತನ್ನ ತಂತ್ರಗಾರಿಕೆಯನ್ನು ಬದಲಾಯಿಸಿರುವುದು ಸ್ಪಷ್ಟವಾಗುತ್ತಿದೆ.
ಅದಕ್ಕೆ ಕಾರಣ ಇಲ್ಲದಿಲ್ಲ, ಎರಡು ತಿಂಗಳ ಇದ್ದ ಬಿಜೆಪಿಯ ಸ್ಥಿತಿ ಮತ್ತು ಮೋದಿ ಜನಪ್ರಿಯತೆ ಈಗ ಸ್ವಲ್ಪ ಮಟ್ಟಿಗೆ ಮಂಕಾಗಿರುವುದು. ಇನ್ನೊಂದೆಡೆ ಆಮ್ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿಯ ಜನತೆ ಮುಖ್ಯಮಂತ್ರಿ ಹುದ್ದೆಗೆ ಸೂಕ್ತ (ವಿವಿಧ ಸಮೀಕ್ಷೆಗಳ ಪ್ರಕಾರ) ಎನ್ನುವ ಒಲವು ತೋರಿಸಿರುವುದು. (ಸಮೀಕ್ಷೆ: ಬದಲಾಯಿತೇ ಮತದಾರನ ಮೂಡ್)
ಬಿಜೆಪಿಯಿಂದ ದೆಹಲಿ ಸಿಎಂ ಹುದ್ದೆಗೆ ಡಾ. ಹರ್ಷವರ್ಧನ್, ಸತೀಶ್ ಉಪಾಧ್ಯಾಯ ಅವರ ಹೆಸರು ಕೇಳಿ ಬರುತ್ತಿತ್ತು. ಆದರೆ ಚಾಣಾಕ್ಷ ನಡೆಗೆ ಹೆಸರಾಗಿರುವ ಅಮಿತ್ ಶಾ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿಯವರನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿ ಆಮ್ ಆದ್ಮಿ ಪಕ್ಷಕ್ಕೆ ಸಡ್ದು ಹೊಡಿದಿದ್ದಾರೆ.
70 ಶಾಸಕರ ದೆಹಲಿ ಅಸೆಂಬ್ಲಿಗೆ ಚುನಾವಣೆ ಫೆಬ್ರವರಿ ಏಳರಂದು ನಡೆಯಲಿದ್ದು, ಫೆಬ್ರವರಿ ಹತ್ತಕ್ಕೆ ಫಲಿತಾಂಶ ಹೊರಬೀಳಲಿದೆ.
ದೆಹಲಿಯ ಜನತೆ ಕಿರಣ್ ಬೇಡಿ ಆಯ್ಕೆ ಬಗ್ಗೆ ಏನನ್ನುತ್ತಾರೆ, ಜೀ ಟಿವಿಯ ಚುನಾವಣಾಪೂರ್ವ ಸಮೀಕ್ಷೆ ಏನನ್ನುತ್ತೆ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಬಿಜೆಪಿ ನಿರ್ಧಾರಕ್ಕೆ ದೆಹಲಿ ಮತದಾರರ ಸ್ವಾಗತ
ಎಬಿಪಿ ನ್ಯೂಸ್ - ನೀಲ್ಸನ್ ಜಂಟಿ ಸಮೀಕ್ಷೆ ಪ್ರಕಾರ ಕಿರಣ್ ಬೇಡಿಯವರನ್ನು ಸಿಎಂ ಆಗಿ ಆಯ್ಕೆ ಮಾಡಿ ಬಿಜೆಪಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಕಿರಣ್ ಬೇಡಿ ಸಿಎಂ ಸ್ಥಾನಕ್ಕೆ ಸೂಕ್ತ ಎಂದು ಶೇ. 44ರಷ್ಟು ಜನ ಹೇಳಿದರೆ, ಕೇಜ್ರಿವಾಲ್ ಶೇ. 47ರಷ್ಟು ಜನ ಸೂಕ್ತ ಎಂದಿದ್ದಾರೆ. ಇಲ್ಲಿ ಕೇಜ್ರಿ ಜನಪ್ರಿಯತೆ ಕುಗ್ಗುತ್ತಿರುವುದು ಸ್ಪಷ್ಟವಾಗುತ್ತಿದೆ.

ಬೇಡಿ ಆಪ್ ಸೇರಬೇಕಿತ್ತು
ಜನವರಿ 17-19ರ ಅವಧಿಯಲ್ಲಿ 1,489 ಜನರನ್ನು ಸಂಪರ್ಕಿಸಿ ನಡೆಸಲಾದ ಸಮೀಕ್ಷೆಯಲ್ಲಿ ಶೇ.43.8 ಜನ ಕಿರಣ್ ಬೇಡಿ ಆಮ್ ಆದ್ಮಿ ಪಕ್ಷಕ್ಕೆ ಸೇರಬೇಕಿತ್ತು ಎಂದು ಬಯಸಿದರೆ, ಶೇ. 32.9ರಷ್ಟು ಬಿಜೆಪಿ ಸೇರಿದ ಅವರ ನಿರ್ಧಾರ ಸರಿ ಎಂದಿದ್ದಾರೆ.

ಕಿರಣ್ ಬೇಡಿ ಸೇರ್ಪಡೆ ಬಿಜೆಪಿಗೆ ಲಾಭವಾಗಲಿದೆಯೇ?
ಕಿರಣ್ ಬೇಡಿ ಸೇರ್ಪಡೆಯಿಂದ ಬಿಜೆಪಿಗೆ ಅಂತಹ ಲಾಭವೇನೂ ಆಗುವುದಿಲ್ಲ ಎನ್ನುತ್ತದೆ ಎಬಿಪಿ ನ್ಯೂಸ್ - ನೀಲ್ಸನ್ ಸಮೀಕ್ಷೆ. ಬಿಜೆಪಿ ಮತ್ತು ಆಮ್ ನಡುವಿನ ಗೆಲುವಿನ ಅಂತರ ಶೇ.1 (ಶೇ.46 ಬಿಜೆಪಿ, ಆಪ್ ಶೇ. 45)

ಜೀ ನ್ಯೂಸ್ ಸರ್ವೇ
ಜೀ ನ್ಯೂಸ್, ತಲೀಂ ರಿಸರ್ಚ್ ಫೌಂಡೇಶನ್ ಜೊತೆ ನಡೆಸಿದ ಜಂಟಿ ಸರ್ವೇ ಪ್ರಕಾರ ಬಿಜೆಪಿಗೆ 37, ಆಮ್ ಆದ್ಮಿಗೆ 29 ಮತ್ತು ಕಾಂಗ್ರೆಸ್ ಪಕ್ಷಕ್ಕೆ 4 ಸ್ಥಾನ ಸಿಗುವ ಸಾಧ್ಯತೆಯಿದೆ.

ಶೇಕಡಾವಾರು ಅಭಿಪ್ರಾಯ
ಜೀ ಸಮೀಕ್ಷೆ ಪ್ರಕಾರ ಬಿಜೆಪಿ ಶೇ. 45, ಆಪ್ ಶೇ. 34.2 ಮತ್ತು ಕಾಂಗ್ರೆಸ್ ಶೇ. 13.7 ಪಕ್ಷಗಳ ಸರಕಾರ ದೆಹಲಿಯಲ್ಲಿ ಬರಬೇಕೆಂದು ಜನಾಭಿಪ್ರಾಯ ವ್ಯಕ್ತವಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸೂಕ್ತ ಎಂದು ಶೇ. 54.1 ಜನ ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications