ಎಬಿಪಿ-ಸಿಎಸ್ ಡಿಎಸ್ ಸಮೀಕ್ಷೆ: ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ
ನವದೆಹಲಿ, ನವೆಂಬರ್ 8: ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಿದರೂ, ರಾಜಸ್ಥಾನದಲ್ಲಿನ ತನ್ನ ಹಿಡಿತವನ್ನು ಕಳೆದುಕೊಳ್ಳಲಿದೆ ಎಂದು ಎಬಿಪಿ ನ್ಯೂಸ್ ಮತ್ತು ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ (ಸಿಎಸ್‌ಡಿಎಸ್) ಜಂಟಿಯಾಗಿ ನಡೆಸಿರುವ ಸಮೀಕ್ಷೆ ತಿಳಿಸಿದೆ.
ಎಬಿಪಿ-ಸಿಎಸ್‌ಡಿಎಸ್ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯು ಗುರುವಾರ (ನ.8) ರಂದು ಬಹಿರಂಗವಾಗಿದೆ. ಇದರಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದ ಸಮೀಕ್ಷೆಯನ್ನು ಪ್ರಕಟಿಸಲಾಗಿದೆ.
ಸಮೀಕ್ಷೆ ಪ್ರಕಾರ, ಛತ್ತೀಸ್ ಗಢದಲ್ಲಿ ಬಿಜೆಪಿ ಸತತ ನಾಲ್ಕನೆಯ ಬಾರಿಗೆ ಗದ್ದುಗೆಗೆ ಏರಲಿದೆ. ಮಧ್ಯ ಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆಯಲಿದ್ದರೂ ಆಡಳಿತಾರೂಢ ಬಿಜೆಪಿ ತುಸು ಮುನ್ನಡೆ ಪಡೆದುಕೊಳ್ಳಲಿದೆ.
ಆದರೆ, ರಾಜಸ್ಥಾನದಲ್ಲಿ ವಸುಂಧರಾ ರಾಜೆ ಸರ್ಕಾರವನ್ನು ಕಾಂಗ್ರೆಸ್ ಮಣ್ಣುಮುಕ್ಕಿಸಲಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಅಕ್ಟೋಬರ್ ಅಂತ್ಯದವರೆಗೂ ಈ ಸಮೀಕ್ಷೆ ನಡೆದಿದ್ದು, 14 ಸಾವಿರ ಮಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ.
ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ಸಿ-ವೋಟರ್ ಸಹಯೋಗದಲ್ಲಿ ಎಬಿಪಿ ನಡೆಸಿದ್ದ ಸಮೀಕ್ಷೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಬಿಜೆಪಿ ಸೋಲು ಅನುಭವಿಸಲಿದೆ ಎಂದು ಹೇಳಲಾಗಿತ್ತು.

ಎಲ್ಲೆಲ್ಲಿ ಎಷ್ಟೆಷ್ಟು ಮತ?
ಮಧ್ಯಪ್ರದೇಶ (230 ಸೀಟುಗಳು)
ಬಿಜೆಪಿ: 116
ಕಾಂಗ್ರೆಸ್: 105
ಇತರೆ: 9
ಛತ್ತೀಸ್‌ಗಢ (90 ಸೀಟುಗಳು)
ಬಿಜೆಪಿ: 56
ಕಾಂಗ್ರೆಸ್: 25
ಇತರೆ: 4
ರಾಜಸ್ಥಾನ (200 ಸೀಟುಗಳು)
ಬಿಜೆಪಿ: 84
ಕಾಂಗ್ರೆಸ್: 110
ಇತರೆ: 6

ಮೋದಿಯೇ ಹೆಚ್ಚು ಜನಪ್ರಿಯ
ಮೂರೂ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ರಾಹುಲ್ ಗಾಂಧಿ ಅವರಿಗಿಂತ ಹೆಚ್ಚು ಜನಪ್ರಿಯರು ಎಂದು ಸಮೀಕ್ಷೆ ತಿಳಿಸಿದೆ.
ನರೇಂದ್ರ ಮೋದಿ
ಮಧ್ಯಪ್ರದೇಶ: 39%
ಛತ್ತೀಸ್ ಗಢ: 48%
ರಾಜಸ್ಥಾನ: 52%
ರಾಹುಲ್ ಗಾಂಧಿ
ಮಧ್ಯಪ್ರದೇಶ: 33%
ಛತ್ತೀಸ್ ಗಢ: 28%
ರಾಜಸ್ಥಾನ: 18%

ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ
ಶೇಕಡಾವಾರು ಮತ ಹಂಚಿಕೆ
ಬಿಜೆಪಿ: 41%
ಕಾಂಗ್ರೆಸ್: 45%
ಇತರೆ: 14%
ಸೀಟು ಹಂಚಿಕೆ
ಬಿಜೆಪಿ: 84
ಕಾಂಗ್ರೆಸ್: 110
ಇತರೆ: 6

ಛತ್ತೀಸ್ ಗಢದಲ್ಲಿ ಬಿಜೆಪಿ ಸರ್ಕಾರ
ಶೇಕಡಾವಾರು ಮತ ಹಂಚಿಕೆ
ಬಿಜೆಪಿ: 43%
ಕಾಂಗ್ರೆಸ್: 36%
ಇತರೆ: 15%
ಸೀಟು ಹಂಚಿಕೆ
ಬಿಜೆಪಿ: 56
ಕಾಂಗ್ರೆಸ್: 25
ಇತರೆ: 4

ಮಧ್ಯಪ್ರದೇಶದಲ್ಲಿ ನಿಕಟ ಪೈಪೋಟಿ
ಶೇಕಡಾವಾರು ಮತ ಹಂಚಿಕೆ
ಬಿಜೆಪಿ: 41%
ಕಾಂಗ್ರೆಸ್: 40%
ಇತರೆ: 19%
ಸೀಟು ಹಂಚಿಕೆ
ಬಿಜೆಪಿ: 116
ಕಾಂಗ್ರೆಸ್: 105
ಇತರೆ: 9












Click it and Unblock the Notifications