ರಾಷ್ಟ್ರಪತಿ ನಿರ್ಧಾರದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಎಎಪಿ

ನವದೆಹಲಿ, ಜನವರಿ 23: ತನ್ನ 20 ಶಾಸಕರನ್ನು ಅನರ್ಹಗೊಳಿಸಿರುವ ಕ್ರಮವನ್ನು ರದ್ದುಗೊಳಿಸುವಂತೆ ಕೋರಿ ಎಎಪಿ ಇಂದು ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.

ಸಂಸದೀಯ ಕಾರ್ಯದರ್ಶಿಗಳಾಗಿದ್ದ ದೆಹಲಿಯ 20 ಎಎಪಿ ಶಾಸಕರನ್ನು 'ಲಾಭದಾಯಕ ಹುದ್ದೆ' ಹೊಂದಿದ ಆರೋಪದಲ್ಲಿ ಅನರ್ಹಗೊಳಿಸುವಂತೆ ಶುಕ್ರವಾರ ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿತ್ತು. ಈ ವೇಳೆಯೇ ಎಎಪಿ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು.

ಆದರೆ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ್ದರಿಂದ ಎಎಪಿ ಶಾಸಕರ ಆತಂಕ ಮುಂದುವರಿದಿತ್ತು.

AAP moves HC against disqualification of MLAs

ಈ ಆತಂಕದ ನಡುವೆ ಚುನಾವಣಾ ಆಯೋಗದ ಶಿಫಾರಸ್ಸಿಗೆ ಭಾನುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದರು. ಈ ಮೂಲಕ ಎಎಪಿಯ 20 ಶಾಸಕರು ಶಾಸಕತ್ವ ಕಳೆದುಕೊಂಡಿದ್ದರು.

ಎಎಪಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ದೆಹಲಿ ಹೈಕೋರ್ಟ್ ನಾಳೆ ಅಂದರೆ ಬುಧವಾರಕ್ಕೆ ವಿಚಾರಣೆ ನಿಗದಿಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+