• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕಾಂಗ್ರೆಸ್ ವೆಂಟಿಲೇಟರ್‌ನಲ್ಲಿದೆ, ಪ್ಲಾಸ್ಮಾ, ಲಸಿಕೆಯಿಂದಲೂ ಉಳಿಸೋಕಾಗಲ್ಲ'

|

ನವದೆಹಲಿ, ಜುಲೈ 17: ರಾಜಸ್ಥಾನದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಗರಿಗೆದರಿದೆ. 'ಕಾಂಗ್ರೆಸ್ ವೆಂಟಿಲೇಟರ್‌ನಲ್ಲಿದ್ದು, ಪ್ಲಾಸ್ಮಾ, ರೆಮ್‌ಡೆಸಿವಿರ್ ಲಸಿಕೆಗಳಿಂದಲೂ ಉಳಿಸಲು ಸಾಧ್ಯವಿಲ್ಲ' ಎಂದು ಆಮ್‌ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಹೇಳಿದ್ದಾರೆ.

   ತಂದೆಯ ಸೇವೆ ಮಾಡುತ್ತ ಮನೆಯಲ್ಲೇ ಕಾಲ ಕಳೆದ ಶಿವರಾಜ್ ಕನ್ನಡ ಆರ್ ಪೇಟೆ.

   ಎರಡೂ ರಾಜಕೀಯ ಪಕ್ಷಗಳು ಕೊಳಕು ರಾಜಕೀಯ ಮಾಡುತ್ತಿವೆ. ಏನೇ ಪ್ರಯತ್ನ ಮಾಡಿದರೂ ಕಾಂಗ್ರೆಸ್ ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎಂದಿದ್ದಾರೆ. ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಅಥವಾ ಕಾಂಗ್ರೆಸ್ ದೇಶದ ಭವಿಷ್ಯವನ್ನೂ ರೂಪಿಸು ವುದಿಲ್ಲ, ಅಥವಾ ತನ್ನ ಪಕ್ಷದ ಭವಿಷ್ಯವನ್ನೂ ಉಳಿಸುವುದಿಲ್ಲ.

   ಸಚಿನ್ ಪೈಲಟ್ ಅಮಾನತು: ಕೊನೆಗೂ ಮೌನ ಮುರಿದ ರಾಹುಲ್ ಗಾಂಧಿ

   ಇದಕ್ಕೂ ಮುನ್ನ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌದರಿ ಟ್ವೀಟ್ ಮಾಡಿ, ಕೇಜ್ರಿವಾಲ್‌ಗೆ ನಿಮ್ಮ ಮತ ನೀಡಿದರೆ, ಅಮಿತ್ ಶಾ ಅಧಿಕಾರಕ್ಕೆ ಬರುತ್ತಾರೆ, ಕಾಂಗ್ರೆಸ್ ಯಾವತ್ತೂ ಅಂತಹ ಎರಡು ಆಫರ್‌ಗಳನ್ನು ನೀಡುವುದಿಲ್ಲ ಎಂದು ಟೀಕೆ ಮಾಡಿದ್ದರು.

   ರಾಜಕೀಯ ಪಕ್ಷಗಳು ಹೊಸಲು ರಾಜಕೀಯ ಮಾಡುವುದಲ್ಲಿ ನಿರತವಾಗಿವೆ, ಇದೇ ಸಂದರ್ಭದಲ್ಲಿ ಕೊರೊನಾ ವೈರಸ್‌ ಬಗ್ಗೆಯೂ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ರಾಘವ್ ಹೇಳಿದ್ದಾರೆ. ಕೊವಿಡ್ 19 ರೋಗದ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕು. ರಾಜ್ಯದ ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಮತದಾರರು ಬೇಸರ ವ್ಯಕ್ತಪಡಿಸಿದ್ದಾರೆ. ಮತದಾರರು ಆಮ್‌ ಆದ್ಮಿ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾರೆ.

   ಬೇರೆ ಪಕ್ಷಗಳಂತೆ ನಮ್ಮ ಪಕ್ಷದಲ್ಲಿ ದೇಶಾದ್ಯಂತ ಹೆಚ್ಚಿನ ಕಾರ್ಯಕರ್ತರು ಕೆಲಸ ಮಾಡುತ್ತಿಲ್ಲ. ಆದರೆ ಜನರ ನೋವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ.

   125 ವರ್ಷಗಳಷ್ಟು ಕಾಂಗ್ರೆಸ್ ಹಳೆಯದಾಗಿದೆ, ಕುಸಿದುಬಿದ್ದಿದೆ. ಪಕ್ಷಕ್ಕೆ ಗೆಲುವು ಸಾಧಿಸುವುದು ಇನ್ನುಮುಂದೆ ಕಷ್ಟವಾಗಲಿದೆ. ಜನರ ಮುಂದೆ ಇದೀಗ ಆಮ್ ಆದ್ಮಿ ಪಕ್ಷ ಮಾತ್ರ ಉಳಿದುಕೊಂಡಿದೆ. ಹಾಗಾಗಿ ಜನರು ಒಪ್ಪಿಕೊಳ್ಳುತ್ತಾರೆ ಎನ್ನುವ ಭರವಸೆಯೂ ಇದೆ ಎಂದಿದ್ದಾರೆ.

   English summary
   Amid the political turmoil in Rajasthan, the AAP on Thursday sought to project itself as an alternative, saying the Congress is on "ventilator" and is unlikely to survive while accusing the political parties of playing "dirty politics" at a time when the focus should be on battling the COVID-19 pandemic.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X