ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎಪಿಗೆ ಆಘಾತ, ಶಾಸಕ ಮನೋಜ್ ಬಂಧನ, ಟ್ವಿಟ್ಟರಿನಲ್ಲಿ ಕಾಲೆಳೆತ

By Mahesh
|
Google Oneindia Kannada News

ನವದೆಹಲಿ, ಜುಲೈ 09: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ. ವಂಚನೆ ಪ್ರಕರಣವೊಂದರಲ್ಲಿ ಎಎಪಿ ಮುಖಂಡರೊಬ್ಬರನ್ನು ಬಂಧಿಸಿದ್ದಾರೆ. ದೆಹಲಿ ಪೊಲೀಸರು ಆಮ್ ಆದ್ಮಿ ಪಕ್ಷದ ಶಾಸಕ ಮನೋಜ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದು ಎರಡು ದಿನಗಳ ಕಾಲ ವಿಚಾರಣೆ ಕೈಗೊಳ್ಳಲಿದ್ದಾರೆ.

ದೆಹಲಿ ಕೊಂಡ್ಲಿ ಶಾಸಕ ಮನೋಜ್ ಕುಮಾರ್ ವಿರುದ್ಧ ಭೂ ಕಬಳಿಕೆ, ಬೆದರಿಕೆ ಸೇರಿದಂತೆ ನಾಲ್ಕಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡು ಎಫ್‌ಐಆರ್‌ಗಳನ್ನು ಹಾಕಲಾಗಿದೆ. ವಂಚನೆ, ನಕಲಿ ದಾಖಲೆ ಸೃಷ್ಟಿ, ಮಹಿಳೆಯೊಂದಿಗೆ ಅಸಭ್ಯ ವರ್ತನೆ ಮುಂತಾದ ಆರೋಪಗಳಿವೆ. [ಆಮ್ ಆದ್ಮಿ ಪಕ್ಷದ ಗ್ರಹಗತಿ ಯಾಕೋ ಸರಿಯಿದ್ದಂತಿಲ್ಲ]

ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರು ನಕಲಿ ಪದವಿ ಪ್ರಮಾಣ ಪತ್ರ ಪಡೆದ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ್ದಾರೆ. ಕುಮಾರ್ ವಿಶ್ವಾಸ್ ವಿರುದ್ಧ ಆಗಾಗ ಪ್ರಕರಣಗಳು ದಾಖಲಾಗುತ್ತಲೇ ಇದೆ. ಈ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿವೆ...

ಮನೋಜ್ ವಿರುದ್ಧ ಎಫ್‌ಐಆರ್‌ಗಳನ್ನು ಹಾಕಲಾಗಿದೆ

ಮನೋಜ್ ವಿರುದ್ಧ ಎಫ್‌ಐಆರ್‌ಗಳನ್ನು ಹಾಕಲಾಗಿದೆ

ದೆಹಲಿ ಕೊಂಡ್ಲಿ ಶಾಸಕ ಮನೋಜ್ ಕುಮಾರ್ ವಿರುದ್ಧ ಭೂ ಕಬಳಿಕೆ, ಬೆದರಿಕೆ ಸೇರಿದಂತೆ ನಾಲ್ಕಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡು ಎಫ್‌ಐಆರ್‌ಗಳನ್ನು ಹಾಕಲಾಗಿದೆ

ಹಳೆ ಡೈಲಾಗ್ ಯಾಕೋ ನೆನಪಾಯಿತು

ಎಎಪಿಗೆ ಆಘಾತ, ಶಾಸಕ ಮನೋಜ್ ಬಂಧನ, ಹಳೆ ಡೈಲಾಗ್ ಯಾಕೋ ನೆನಪಾಯಿತು.

ಬರ್ಖಾದತ್ ಈಗ ಹೇಗೆ ವರದಿ ಮಾಡುತ್ತಾರೆ

ಬರ್ಖಾದತ್ ಈಗ ಹೇಗೆ ವರದಿ ಮಾಡುತ್ತಾರೆ ನೋಡೋಣ.

ತೋಮಾರ್ ನಂತರ ಮತ್ತೊಬ್ಬ ಪಟ್ಟಿಗೆ ಸೇರ್ಪಡೆ

ತೋಮಾರ್ ನಂತರ ಮತ್ತೊಬ್ಬ ಪಟ್ಟಿಗೆ ಸೇರ್ಪಡೆ, ದೆಹಲಿವಾಲರಿಗೆ ಶುಭವಾಗಲಿ.

ಎಎಪಿಯ ಕ್ರಿಮಿನಲ್ಸ್ ಪಟ್ಟಿ ದೊಡ್ಡದಿದೆ

ಎಎಪಿಯ ಕ್ರಿಮಿನಲ್ಸ್ ಪಟ್ಟಿ ದೊಡ್ಡದಿದೆ, ಎಲ್ಲಾ 18 ಶಾಸಕರನ್ನು ಬಂಧಿಸಿಬಿಡಿ.

English summary
In a fresh embarrassment for ruling AAP government in Delhi, police on Thursday arrested MLA from Kondli, Manoj Kumar, under charges of cheating and forgery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X