ಒತ್ತಡಕ್ಕೆ ಮಣಿದು ಬಂಗ್ಲೆ ಬೇಡವೆಂದ ಆಮ್ ಆದ್ಮಿ!

New Delhi Chief Minister Arvind Kejriwal shuns govt bunglow wants to be in common man abode,
ನವದೆಹಲಿ, ಜ.4-ಐಷಾರಾಮಿ ಜೀವನ ನಡೆಸದೆ ಪಕ್ಷದ ಹೆಸರಿಗೆ ತಕ್ಕಂತೆ ಜನಸಾಮಾನ್ಯನಾಗಿ ಉಳಿಯುತ್ತೇನೆ ಎಂದು ಆಶ್ವಾಸನೆ ನೀಡಿದ್ದ ಆಮ್‌ ಆದ್ಮಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾ ಅವರು ಸರಳ ಬಹುಮತ ಸಾಬೀತು ಪಡಿಸುತ್ತಿದ್ದಂತೆ ಸರಕಾರಿ ಬಂಗ್ಲೆಯತ್ತ ಹೆಜ್ಜೆಹಾಕಲು ಮನಸು ಮಾಡಿದ್ದರು.

ಆದರೆ ಇದಕ್ಕೆ ವ್ಯಾಪಕ ವಿರೋಧ ಮತ್ತು ಕಟು ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಅರವಿಂದ ಕೇಜ್ರಿವಾಲಾ ಅವರು ಇದೀಗ ಟ್ವೀಟ್ ಮಾಡಿದ್ದು, ತಾನು ಸರಕಾರಿ ಬಂಗಲೆಯತ್ತ ತಲೆ ಹಾಕಿಯೂ ಮಲಗುವುದಿಲ್ಲ. ಏನಿದ್ದರೂ ಸಾದಾಸೀದಾ ಮನೆಯಷ್ಟೇ ಸಾಕು ಎಂದು ಹೇಳಿದ್ದಾರೆ.

ಈ ಸಂಬಂಧ ಸರಕಾರಕ್ಕೆ ಪತ್ರ ಬರೆದಿರುವ ಅವರು ತನಗೆ ಸಾಮಾನ್ಯ ಮನೆಯೊಂದು ನೋಡಿ ಸಾಕು . ದೊಡ್ಡ/ಭವ್ಯ ಬಂಗಲೇಯೇನೂ ಬೇಡವೆಂದು ಕೋರಿದ್ದಾರೆ.

ಅಂದಹಾಗೆ, Bhagwan Das Road ರಸ್ತೆಯಲ್ಲಿರುವ 5 ಬೆಡ್ ರೂಂಗಳಿರುವ ಚೆಂದದ ಮನೆಗೆ ನಿನ್ನೆ ಶುಕ್ರವಾರ ಅರವಿಂದ ಕೇಜ್ರಿವಾಲಾ ಅವರ ಅಪ್ಪ-ಅಮ್ಮ ಅವರುಗಳು ಭೇಟಿ ನೀಡಿ ಎಲ್ಲೆಲ್ಲಿ ಯಾವುದ್ಯಾವುದು ಹೇಗ್ಹೇಗೆ ಇರಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಕೆಲಸಗಾರರು ಸಹ ಸಮರೋಪಾದಿಯಲ್ಲಿ ಕೇಜ್ರಿವಾಲಾರ ಕುಟುಂಬದ ಆಶಯದಂತೆ ಮನೆಯನ್ನು ಸಜ್ಜುಗೊಳಿಸುತ್ತಿದ್ದರು. ಆದರೆ ಈಗ ಅದಕ್ಕೆಲ್ಲಾ ಬ್ರೇಕ್ ಬಿದ್ದಿದೆ.

ಬಂಗಲೆ ಆಯ್ತು ಇನ್ನು ಸರಕಾರಿ ಕಾರಿನ ಬಗ್ಗೆ ಆಮ್ ಆದ್ಮಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾ ಅವರು ಏನು ಹೇಳ್ತಾರೆಂದರೆ ನಾನೆಂದಿಗೂ ಸರಕಾರಿ ವಾಹನ ಬಳಸೋಲ್ಲ ಅಂತ ಹೇಳಿಯೇ ಇಲ್ಲ. ಕೇವಲ ಕೆಂಪು ಗೂಟದ ಕಾರು ಬಳಸೋಲ್ಲ ಎಂದಷ್ಟೇ ಹೇಳಿದ್ದೆ. ಮತ್ತು ಆ ಮಾತಿಗೆ ನಾನು ಈಗಲೂ ಬದ್ದನಾಗಿದ್ದೇನೆ.

'ಆದರೆ ಸ್ನೇಹಿತರೇ ನಿಮಗಿನ್ನೂ ಒಂದು ಮಾತು ಹೇಳಬೇಕು... ಏನಪ್ಪ ಅಂದರೆ ಸಚಿವರುಗಳು ಸರಕಾರಿ ವಾಹನ ಬಳಸುವುದು ವಿರುದ್ಧ ಎದ್ದಿರುವ ವಿವಾದ ಸಲ್ಲದು. ಸಚಿವರುಗಳು ತಮ್ಮ ಸರಕಾರಿ ಕೆಲಸ ಮಾಡಬೇಕು ಅಂದರೆ ಸರಕಾರಿ ವಾಹನ ಬಳಸಲೇಬೇಕಲ್ಲವಾ?' ಎಂದೂ ಆಮ್ ಆದ್ಮಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾ ಟ್ವಿಟ್ಟರಿನಲ್ಲಿ ಸಮಜಾಯಿಷಿ ನೀಡಿದ್ದಾರೆ.


ಇನ್ನು ಸರಕಾರಿ ಬಂಗಲೆ ಬಗ್ಗೆಯೂ ಗೊಣಗಿರುವ ಆಮ್ ಆದ್ಮಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾ ಅವರು ನನಗೆ ಎರಡು ಅಕ್ಕಪಕ್ಕದ ಮನೆಗಳು ಬೇಕೇಬೇಕು. ಅದರಲ್ಲಿ ಒಂದನ್ನು ಕಚೇರಿಯಾಗಿ ಪರಿವರ್ತಿಸಿಕೊಂಡು ಕೆಲಸ ಮಾಡಬೇಕು. ಇಲ್ಲವಾದಲ್ಲಿ ನಾನು ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಗುವುದಿಲ್ಲ, ತಿಳಿಯಿತಾ? ಎಂದೂ ಟ್ವಿಟ್ಟರಿನಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ಆದರೆ ಈಗ ಜನ ಬೇಡ ಅನ್ತಿದ್ದಾರೆ, ಅದ್ಕೆ ಸರಕಾರಿ ಬಂಗಲೆ ಬೇಡ ಬಿಡಿ, ಸಾದಾ ಸೀದಾ ಮನೆಯಲ್ಲೇ ಇರುವೆ ಎಂದು ಕೇಜ್ರಿವಾಲಾರು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+