ಮಾಧ್ಯಮಕ್ಕೆ ಆಮ್ ಆದ್ಮಿ ಅರವಿಂದ್ ಕೇಜ್ರಿವಾಲ್ ಪ್ರಲೋಭೆ

ಆದರೆ ನಾಜೂಕಯ್ಯನಾಗಲು ಹೊರಟ ಕೇಜ್ರಿವಾಲ್, ತನ್ನನ್ನು ಸಂದರ್ಶಿಸಿದ ಟಿವಿ ವಾಹಿನಿಯ ಆ್ಯಂಕರ್ ಗೆ ಪ್ರಲೋಭೆ ಒಡ್ಡಿ, ನನ್ನ ಸಂದರ್ಶನದ ಇಂತಿಂತಹ ಮಾತುಗಳನ್ನು ನಿರ್ದಿಷ್ಟವಾಗಿ ಹೈಲೈಟ್ ಮಾಡು ಎಂದಿದ್ದಾರೆ. ಇದು ಈಗ ತೀವ್ರ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ.
ಇದು ಕ್ಯಾಮರಾದಲ್ಲಿ ದಾಖಲಾಗಿದ್ದು, ಸದರಿ ವಿಡಿಯೋ ಭಾನುವಾರ ರಾತ್ರಿ Youtubeಗೆ ಅಪ್ ಲೋಡ್ ಆಗಿದ್ದು, ಜನ ಮುಗಿಬಿದ್ದು ನೋಡುತ್ತಿದ್ದಾರೆ.
ಸುಮಾರು 1 ನಿಮಿಷಕ್ಕಿಂತ ಹೆಚ್ಚು ಅವಧಿಯ ಈ ವಿಡಿಯೋದಲ್ಲಿ ಕೇಜ್ರಿವಾಲ್ ಮತ್ತು ಆತನನ್ನು interview ಮಾಡಿದ ಆ್ಯಂಕರ್, ಇಬ್ಬರೂ ಸಂದರ್ಶನ ಮುಗಿದ ಮೇಲೆ ಸೌಹಾರ್ಧ ಮಾತುಕತೆ ನಡೆಸುವುದು ಕಂಡುಬರುತ್ತದೆ. ಆದರೆ ಕೇಜ್ರಿವಾಲ್ ಇದಕ್ಕಿದ್ದಂತೆ ಬೇಡಿಕೆಯ ಧ್ವನಿಯಲ್ಲಿ ಸಂದರ್ಶನದ ಇಂತಿಂಥ ಭಾಗಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವಂತೆ (Please play it up more) ಮೊರೆಹೋಗುತ್ತಾರೆ.
ಅರವಿಂದ್ ಕೇಜ್ರಿವಾಲಾ ಅವರು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಈ ಸಂದರ್ಶನ ಮಾಡಲಾಗಿದೆ. ಆದರೆ ಮಾಧ್ಯಮಗಳು ತನ್ನ ವಿರುದ್ಧ ಪಕ್ಷಪಾತ ಧೋರಣೆ ಅನುಸರಿಸುತ್ತಿವೆ ಎಂದು ಕೇಜ್ರಿವಾಲ್ ಮಾಧ್ಯಮಗಳ ಮೇಲೆ ಶನಿವಾರ ಗೂಬೆ ಕೂರಿಸಿದ್ದರು. ಅದಾಗುತ್ತಿದ್ದಂತೆ 'ಅರವಿಂದ್ ಕೇಜ್ರಿವಾಲಾ ಸಂದರ್ಶನ' Youtubeನಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿದೆ. (ಪಿಟಿಐ)












Click it and Unblock the Notifications