ಕೇಜ್ರಿವಾಲ್ ಪತ್ನಿ ಸುನೀತಾ ರಾಜಕೀಯಕ್ಕೆ? ನೋ ಚಾನ್ಸ್!

Posted By:
Subscribe to Oneindia Kannada

ನವದೆಹಲಿ, ಜುಲೈ 15: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಕುಟುಂಬ ರಾಜಕೀಯ ನಾವು ಮಾಡಲ್ಲ ಎಂದು ಎಎಪಿ ಹಿರಿಯ ಮುಖಂಡರು ಘೋಷಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಕೇಜ್ರಿವಾಲ್ ಕುಟುಂಬದ ಬಗ್ಗೆ ಭರಪೂರ ಚರ್ಚೆ ಸಾಗಿದೆ.

ಆದಾಯ ತೆರಿಗೆ ಇಲಾಖೆಯಲ್ಲಿ 22 ವರ್ಷಗಳ ಸೇವೆ ಕರ್ತವ್ಯ ನಿರ್ವಹಿಸಿದ ಮೇಲೆ ಸ್ವಯಂ ನಿವೃತ್ತಿ ಪಡೆದ ಸುನೀತಾ ಅವರು ರಾಜಕೀಯಕ್ಕೆ ಕಾಲಿಡುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಆದರೆ, ಈ ಬಗ್ಗೆ ಕೇಜ್ರಿವಾಲ್ ಕೂಡಾ ಮೌನವಹಿಸಿದ್ದಾರೆ. ಪಂಜಾಬ್, ಗೋವಾ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಸಿದ್ಧವಾಗುತ್ತಿದೆ.

ದೆಹಲಿ ಸರ್ಕಾರದ ಮೊಹಲ್ಲಾ ಕ್ಲಿನಿಕ್ ಯೋಜನೆಯ ಸಲಹೆ ಗಾರ್ತಿ ಹುದ್ದೆಯಿಂದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಪುತ್ರಿ ಸೌಮ್ಯಾ ಜೈನ್ ಗುರುವಾರ ರಾಜೀನಾಮೆ ನೀಡುವ ಮೂಲಕ ಕುಟುಂಬ ರಾಜಕೀಯದ ಕಳಂಕ ತಗುಲದಂತೆ ಎಎಪಿ ನೋಡಿಕೊಂಡಿದೆ.

ಈಗ ಕೇಂದ್ರ ಸರ್ಕಾರದ ಹುದ್ದೆಯಿಂದ ಸ್ವಯಂನಿವೃತ್ತಿ ಪಡೆದರೂ ನಿಯಮದ ಪ್ರಕಾರ ಒಂದು ವರ್ಷಗಳ ಕಾಲ ಸರ್ಕಾರದ ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಿತ ಹುದ್ದೆಯನ್ನು ವಹಿಸಿಕೊಳ್ಳುವಂತಿಲ್ಲ.

ಆದಾಯ ತೆರಿಗೆ ಇಲಾಖೆ ಅಧಿಕಾರಿಯಾಗಿದ್ದ ಸುನೀತಾ

ಆದಾಯ ತೆರಿಗೆ ಇಲಾಖೆ ಅಧಿಕಾರಿಯಾಗಿದ್ದ ಸುನೀತಾ

51 ವರ್ಷ ವಯಸ್ಸಿನ ಸುನೀತಾ ಅವರು 1993ನೇ ಬ್ಯಾಚಿನ ಐ ಆರ್ ಎಸ್ ಅಧಿಕಾರಿಯಾಗಿದ್ದು, 1995ರ ಬ್ಯಾಚಿನ ಅಧಿಕಾರಿ ಅರವಿಂದ್ ಕೇಜ್ರಿವಾಲ್ ರನ್ನು ಮೊದಲಿಗೆ ಭೋಪಾಲ್ ನಲ್ಲಿ ಭೇಟಿ ಮಾಡಿದರು. ನಂತರ ಇಬ್ಬರು ಮದುವೆಯಾದರು. ಸುನೀತಾ ಅವರು ಪ್ರಾಣಿಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಸುನೀತಾರನ್ನು ಹೊಗಳುವ ಎಎಪಿ ಭಕ್ತರಿಗೆ ಟಾಂಗ್

ಸುನೀತಾರನ್ನು ಹೊಗಳುವ ಎಎಪಿ ಭಕ್ತರಿಗೆ ಟಾಂಗ್ ನೀಡಿದ ಸಾರ್ವಜನಿಕರು. ಮಿಚೆಲ್ ಒಬಾಮಾಗೆ ಹೋಲಿಸುವುದು ಎಷ್ಟು ಸರಿ?

ಕೇಜ್ರಿವಾಲ್ ಅವರಿಗೆ ಅಸೂಯೆಯಾಗುತ್ತಿತ್ತೇ?

ತನ್ನ ಪತ್ನಿ ಇನ್ನೂ ಸರ್ಕಾರಿ ಹುದ್ದೆಯಲ್ಲಿರುವುದು ಕೇಜ್ರಿವಾಲ್ ರಿಗೆ ಅಸೂಯೆ ತರಿಸಿತ್ತೆ?

ಎಎಪಿ ಪಂಜಾಬ್ ಪರ ಸುನೀತಾ ಪ್ರಚಾರ

ಎಎಪಿ ಪಂಜಾಬ್ ಪರ ಸುನೀತಾ ಪ್ರಚಾರಕ್ಕೆ ಬರಬಹುದು ಎಂಬ ನಿರೀಕ್ಷೆಯಿದೆ. ಆದರೆ, ಪಂಜಾಬ್ ನಲ್ಲಿ ಮುಖಂಡರ ಬರ ಬಂದಿದೆಯೆ?

ದೆಹಲಿಯ ರಾಜ್ಯಸಭಾ ಟಿಕೆಟ್ ಮೇಲೆ ಕಣ್ಣು

ಸುನೀತಾ ಆವರು ದೆಹಲಿಯ ರಾಜ್ಯಸಭಾ ಟಿಕೆಟ್ ಮೇಲೆ ಕಣ್ಣು ಇಟ್ಟಿರಬಹುದು. ಆದರೆ, 2018ರ ತನಕ ಎಎಪಿ ಸರ್ಕಾರ ಉಳಿಯುವುದೆ?

ಲಾಲೂ ಹಾಗೂ ರಾಬ್ಡಿ ದೇವಿ ನೆನಪಾಗುತ್ತಾರೆ

ಲಾಲೂ ಹಾಗೂ ರಾಬ್ಡಿ ದೇವಿ ನೆನಪಾಗುತ್ತಾರೆ. ಅರವಿಂದ್ ಕೇಜ್ರಿವಾಲ್ ಗೂ ಚಾನ್ಸ್ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi CM Arvind Kejriwal’s wife Sunita opted for voluntary retirement scheme after serving for nearly 22 years in the Income Tax Department on Tuesday night, twitterati wasted no time in trolling her.
Please Wait while comments are loading...