ಇವರೇ ದಿಲ್ಲಿ ನೂತನ ಮುಖ್ಯಮಂತ್ರಿ ಕೇಜ್ರಿವಾಲ್!
ನವದೆಹಲಿ, ಡಿ. 23: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ AAP ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಡಿಸೆಂಬರ್ 26ರಂದು ಗುರುವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ಈ ಸಂದರ್ಭದಲ್ಲಿ ದೆಹಲಿಯ ನಿಯೋಜಿತ ಮುಖ್ಯಮಂತ್ರಿ ಅರವಿಂದರ ಸ್ಥಳ ವ್ಯಕ್ತಿಚಿತ್ರಣ ಇಲ್ಲಿದೆ:

1. 45 ವರ್ಷದ ಅರವಿಂದ್ ಕೇಜ್ರಿವಾಲ್ ಅವರು ಮೂಲತಃ ಹರ್ಯಾಣದವರು. IIT-Kharagpurದಲ್ಲಿ ಇಂಜಿನಿಯರಿಂಗ್ ಪದವೀಧರ. Indian Revenue Service ಸೇವೆಯಲ್ಲಿದ್ದವರು.
2. ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಸಹ Indian Revenue Serviceಯಲ್ಲಿದ್ದಾರೆ. ದಂಪತಿಗೆ ಒಬ್ಬ ಪುತ್ರ ಮತ್ತೊಬ್ಬ ಪುತ್ರಿ ಇದ್ದಾರೆ.
3. ಮಾಹಿತಿ ಹಕ್ಕು ಕಾಯಿದೆ ಜಾರಿಯಾಗುವಂತೆ ಮಾಡವಲ್ಲಿ ಮಹತ್ವದ ಪಾತ್ರ ವಹಸಿದ್ದರು. ಇದಕ್ಕಾಗಿ ರಾಮೊನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೂ (2006ರಲ್ಲಿ) ಭಾಜನರಾದರು.
4. Indian Revenue Serviceನಲ್ಲಿರುವಾಗಲೇ 'ಪರಿವರ್ತನ' ಎಂಬ ಸರಾಕಾರೇತರ ಸಂಸ್ಥೆಯ (NGO) ಮೂಲಕ ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಸಕ್ರಿಯರಾಗತೊಡಗಿದರು. ಆನಂತರ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಪ್ರವರ್ಧನಮಾನಕ್ಕೆ ಬಂದ ಬಳಿಕ ಸಾವಕಾಶವಾಗಿ ಸರಕಾರಿ ಹುದ್ದೆಗೆ ರಾಜೀನಾಮೆ ನೀಡಿದರು.
5 ಭಾರತೀಯ ಕಂದಾಯ ಸೇವೆಯಲ್ಲಿ (1995ರಲ್ಲಿ) ಕೆಲಸಕ್ಕೆ ಸೇರಿಕೊಳ್ಳುವ ಮುನ್ನ Tataದಲ್ಲಿ ಕೆಸಲ ಮಾಡಿದ್ದರು. ಅದಕ್ಕೂ ಮುನ್ನ Mother Teresa ಅವರ NGO ಸಂಸ್ಥೆಯಲ್ಲಿ ಕೆಲ ಕಾಲ ದುಡಿದಿದ್ದರು. (ಕೃಪೆ: https://twitter.com/babublogger)


Click it and Unblock the Notifications
