ಭಾರತದಲ್ಲಿ ಇಂದು ದಾಖಲೆ ಪ್ರಮಾಣದ ಕೊರೊನಾ ಕೇಸ್
ನವ ದೆಹಲಿ, ಮೇ 25: ಭಾರತದಲ್ಲಿ ಇಂದು ದಾಖಲೆ ಪ್ರಮಾಣದ ಕೊರೊನಾ ಕೇಸ್‌ಗಳು ಪತ್ತೆಯಾಗಿದೆ. ದಿನೇ ದಿನೇ ಕೊರೊನಾ ಹೆಚ್ಚಾಗುತ್ತಲೇ ಇದ್ದು, ಇಂದು 6977 ಕೇಸ್‌ಗಳು ಕಂಡು ಬಂದಿದೆ.
ಬಸ್ ಸಂಚಾರ, ವಿಮಾನ ಸಂಚಾರ ಎಲ್ಲವೂ ಶುರುವಾಗಿದೆ. ಲಾಕ್‌ಡೌನ್ ಬಹುತೇಕ ಸಡಿಲಿಕೆಯಾಗಿದೆ. ಇದರ ಪರಿಣಾಮವೋ ಏನೋ ಪ್ರತಿ ದಿನವೂ ಪತ್ತೆಯಾಗುವ ಕೊರೊನಾ ಕೇಸ್‌ಗಳು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಇಂದು ದೇಶದ 6977 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. 154 ಮಂದಿ ಕೊರೊನಾ ಸೋಂಕು ತಗುಲಿ ಮೃತರಾಗಿದ್ದಾರೆ. ಇಂದು ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ. ತಮಿಳುನಾಡಿನಲ್ಲಿ ಇಂದು 805 ಪ್ರಕರಣಗಳು ದೃಢವಾಗಿವೆ.

ಕರ್ನಾಟಕದಲ್ಲಿ ಇಂದು 93 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 2182ಕ್ಕೆ ಏರಿಕೆಯಾಗಿದೆ.
ಇಂದಿಗೆ ಭಾರತದಲ್ಲಿ ಒಟ್ಟು 1,38,845 ಕೊರೊನಾ ಸೋಂಕಿತ ಪ್ರಕರಣಗಳಾಗಿವೆ. 77103 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 57720 ಮಂದಿ ಗುಣಮುಖರಾಗಿದ್ದಾರೆ. 4021 ಜನರ ಮಹಾಮಾರಿಯಿಂದ ಮರಣ ಹೊಂದಿದ್ದಾರೆ.












Click it and Unblock the Notifications