• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ: ತಿಳಿಯಬೇಕಾದ 7 ಸಂಗತಿ

|

ನವದೆಹಲಿ, ಅಕ್ಟೋಬರ್ 08: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗ ಸೆ.06 ರಂದು ಘೋಷಿಸಿದೆ.

ಈ ಎಲ್ಲಾ ರಾಜ್ಯಗಳ ಮುಂದಿನ ಐದು ವರ್ಷಗಳ ಹಣಬರಹವ ಡಿ.11 ರ ಫಲಿತಾಂಶದ ದಿನದಂದು ತಿಳಿಯಲಿದೆ.

5 ರಾಜ್ಯಗಳ ವಿಧಾನಸಭೆ ಚುನಾವಣೆ: ದಿನಾಂಕ ಘೋಷಿಸಿದ ಚು.ಆಯೋಗ

ಛತ್ತೀಸ್ ಗಢದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಉಳಿದೆಲ್ಲ ರಾಜ್ಯಗಳಲ್ಲೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳೂ ಆರಂಭವಾಗಿದ್ದು, ಪ್ರಮುಖ ಪಕ್ಷಗಳ ಜಿದ್ದಾಜಿದ್ದಿ ಶುರುವಾಗಿದೆ. 2019 ರ ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿ ಎಂದೇ ಕರೆಯಲಾಗುತ್ತಿರುವುದರಿಂದ ಮತ್ತಷ್ಟು ಕುತೂಹಲ ಸೃಷ್ಟಿಸಿದೆ.

ಐದು ರಾಜ್ಯಗಳ ಚುನಾವಣೆಯ ಕುರಿತು ತಿಳಿದುಕೊಳ್ಳಬೇಕಾದ ಕೆಲವು ಮಹತ್ವದ ಸಂಗತಿಗಳು ನಿಮಗಾಗಿ, ಇಲ್ಲಿವೆ...

ಐದು ರಾಜ್ಯಗಳು

ಐದು ರಾಜ್ಯಗಳು

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ಮಿಜೋರಾಂ ಮತ್ತು ತೆಲಂಗಾಣ ಈ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ರಾಜಸ್ಥಾನ ವಿಧಾನಸಭೆ ಕಾಲಾವಧಿ ಜನವರಿ 20 ರಂದು ಅಂತ್ಯವಾಗಲಿದ್ದರೆ, ಮಧ್ಯಪ್ರದೇಶ ವಿಧಾನಸಭೆ ಯ ಕಾಲಾವಧಿ ಜನವರಿ 7, ಛತ್ತೀಸ್ ಗಢ ಜನವರಿ 5, ಮಿಜೋರಾಂ ವಿಧಾನಸಭೆ ಕಾಲಾವಧಿ ಜನವರಿ 15ಕ್ಕೆ ಅಂತ್ಯವಾಗಲಿವೆ. ತೆಲಂಗಾಣದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಲಾಗಿದ್ದು, ಜೂನ್ 2019 ರವರೆಗೂ ವಿಧಾನಸಭೆಯ ಕಾಲಾವಧಿ ಇತ್ತು. ಆದರೆ ವಿಧಾನಸಭೆ ವಿಸರ್ಜಿಸಿದ ಕಾರಣ ಆರು ತಿಂಗಳೊಳಗಾಗಿ ಚುನಾವಣೆ ನಡೆಸುವ ಅಗತ್ಯ ಬಂದಿತ್ತು.

ರಾಜಸ್ಥಾನ

ರಾಜಸ್ಥಾನ

ರಾಜಸ್ಥಾನದಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 200. 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ 163 ಸ್ಥಾನಗಳನ್ನು ಬಿಜೆಪಿ ಗೆದ್ದು ಸರ್ಕಾರ ರಚಿಸಿತ್ತು. ವಸುಂಧರಾ ರಾಜೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ರಾಜಸ್ಥಾನಲ್ಲಿ ಕಾಂಗ್ರೆಸ್ 21 ಕ್ಷೇತ್ರಗಳನ್ನಷ್ಟೇ ಗೆದ್ದು ಮುಖಭಂಗ ಅನುಭವಿಸಿತ್ತು.

ಎಬಿಪಿ ನ್ಯೂಸ್ ಸಮೀಕ್ಷೆ : 3 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ!

ಮಧ್ಯಪ್ರದೇಶ

ಮಧ್ಯಪ್ರದೇಶ

230 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ 2013 ರಲ್ಲಿ ಬಿಜೆಪಿ 165 ಸ್ಥಾನಗಳನ್ನು ಗೆದ್ದು, ಬಹುಮತ ಪಡೆದು ಸರ್ಕಾರ ರಚಿಸಿತ್ತು. ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸತತ ಮೂರನೇ ಬಾರಿಗೆ ಮುಂದುವರಿದರು. ಆದರೆ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಕೇವಲ 58 ಸ್ಥಾನಗಳನ್ನಷ್ಟೇ ಗೆದ್ದಿತ್ತು.

ಛತ್ತೀಸ್ ಗಢ

ಛತ್ತೀಸ್ ಗಢ

ಛತ್ತೀಸ್ ಗಢದಲ್ಲಿ 2013 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 49 ಕ್ಷೇತ್ರಗಳಲ್ಲಿ ಗೆದ್ದು ಬಹುಮತ ಪಡೆದಿತ್ತು. ಈ ರಾಜ್ಯದಲ್ಲಿರುವ ಒಟ್ಟೂ ವಿಧಾನಸಭಾ ಕ್ಷೇತ್ರಗಳು 90. ಬಿಜೆಪಿಯ ರಮಣ್ ಸಿಂಗ್ ಛತ್ತೀಸ್ ಗಢದ ಮುಖ್ಯಮಂತ್ರಿಯಾದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ 39 ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿಗೆ ತೀವ್ರ ಪೈಪೋಟಿ ನೀಡಿತ್ತು.

ಸಚಿತ್ರ ವರದಿ : ಪಂಚ ರಾಜ್ಯಗಳ ಚುನಾವಣೆ ದಿನಾಂಕ, ಮತ ಎಣಿಕೆ

ಮಿಜೋರಾಂ

ಮಿಜೋರಾಂ

2008 ರಿಂದಲೂ ಮಿಜೋರಾಂನಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸುತ್ತಿದೆ. 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿ 36 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಮಿಜೋ ನ್ಯಾಶನಲ್ ಫ್ರಂಟ್ ಮತ್ತು ಫೀಪಲ್ಸ್ ಕಾನ್ಫಿರೆನ್ಸ್ ಗಳು ಈ ರಾಜ್ಯದ ಇನ್ನಿತರ ಪ್ರಮುಖ ಪಕ್ಷಗಳಾಗಿವೆ. ಕಾಂಗ್ರೆಸ್ ನ ಲಾಲ್ ಥಾನ್ಹಾವಾಲಾ ಈ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಚಿತ್ರ : 3 ಲೋಕಸಭೆ, 2 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ

ತೆಲಂಗಾಣ

ತೆಲಂಗಾಣ

ಸೆ.6 ರಂದು ವಿಸರ್ಜನೆಯಾದ ತೆಲಂಗಾಣ ವಿಧಾನಸಭೆಗೂ ಈ ವರ್ಷದ ಕೊನೆಯ ತಿಂಗಳಿನಲ್ಲೇ ಚುನಾವಣೆ ನಡೆಯುತ್ತಿದೆ. ಒಟ್ಟು 119 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಪ್ರಾಬಲ್ಯ ಪಡೆದಿದೆ. ಪ್ರಸ್ತುತ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್(ಉಸ್ತುವಾರಿ) ನೇತೃತ್ವದ ಟಿಆರ್ ಎಸ್ 2014 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಬಹುಮತ ಪಡೆದಿತ್ತು. ಈ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಹೆಚ್ಚು ಪ್ರಾಬಲ್ಯ ಪಡೆದಿಲ್ಲ.

ಚುನಾವಣೆ ಯಾವಾಗ? ಫಲಿತಾಂಶ ಯಾವತ್ತು?

ಚುನಾವಣೆ ಯಾವಾಗ? ಫಲಿತಾಂಶ ಯಾವತ್ತು?

ಛತ್ತೀಸ್ ಗಢ- ನವೆಂಬರ್ 12 ಮತ್ತು 20 (ಎರಡು ಹಂತ)

ಮಧ್ಯಪ್ರದೇಶ- ನವೆಂಬರ್ 28 (ಒಂದು ಹಂತ)

ಮಿಜೋರಾಂ- ನವೆಂಬರ್ 28 (ಒಂದು ಹಂತ)

ರಾಜಸ್ಥಾನ - ಡಿಸೆಂಬರ್ 07 (ಒಂದು ಹಂತ)

ತೆಲಂಗಾಣ - ಡಿಸೆಂಬರ್ 07 (ಒಂದು ಹಂತ)

ಫಲಿತಾಂಶ: ಡಿಸೆಂಬರ್ 11, ಮಂಗಳವಾರ

English summary
Election commission announced dates for upcomming assembly elections for 5 states. Rajastan, Madhya Pradesh, Telangana, Chhattisgarh, Mizoram will be facing elections in November and December. Here are 7 things to know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X