ಭಾರತದಲ್ಲಿ ಒಂದೇ ದಿನ 3967 ಕೇಸ್ ಪತ್ತೆ, 100 ಮಂದಿ ಸಾವು

ದೆಹಲಿ, ಮೇ 15: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81 ಸಾವಿರ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 3967 ಕೇಸ್ ಪತ್ತೆಯಾಗಿದ್ದು, 100 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈವರೆಗೂ ದೇಶದಲ್ಲಿ 81,970 ಜನರಿಗೆ ಕೊವಿಡ್ ಸೋಂಕು ತಗುಲಿದೆ. ಇದರಲ್ಲಿ 51,401 ಪ್ರಕರಣಗಳು ಸಕ್ರಿಯವಾಗಿದೆ. 27,920 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೂ ದೇಶದಲ್ಲಿ ಒಟ್ಟು 2,649 ಜನ ಮರಣ ಹೊಂದಿದ್ದಾರೆ.

ಅತಿ ಹೆಚ್ಚು ಕೊರೊನಾ ಕೇಸ್‌ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 12ನೇ ಸ್ಥಾನದಲ್ಲಿದೆ. ಚೀನಾ ದೇಶಕ್ಕಿಂತ ಸುಮಾರು 900 ಕೇಸ್‌ಗಳು ಮಾತ್ರ ಭಾರತ ಹಿಂದೆ ಇದೆ. ಬಹುಶಃ ಇನ್ನೊಂದು ದಿನದಲ್ಕಿ ಚೀನಾವನ್ನು ಭಾರತ ಹಿಂದಿಕ್ಕಲಿದೆ.

3967 New COVID19 Cases Reported In Last 24 Hours

ಇನ್ನುಳಿದಂತೆ ಜಗತ್ತಿನಲ್ಲಿ ಒಟ್ಟು 45 ಲಕ್ಷ (4,526,850) ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 303,405 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 1,704,268 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+