ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆ

ನವದೆಹಲಿ, ಡಿಸೆಂಬರ್ 11: ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.
ಜಿಂಬಾಬ್ವೆಯಿಂದ ದೆಹಲಿಗೆ ಬಂದಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ದೆಹಲಿ ಶನಿವಾರ ತನ್ನ ಎರಡನೇ ಓಮಿಕ್ರಾನ್ ರೂಪಾಂತರದ ಪ್ರಕರಣವನ್ನು ದಾಖಲಿಸಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.

ವ್ಯಕ್ತಿಯು ಸಂಪೂರ್ಣವಾಗಿ ಲಸಿಕೆಯನ್ನು ಹಾಕಿಸಿದ್ದಾನೆ ಮತ್ತು ಜಿಂಬಾಬ್ವೆಯಿಂದ ಪ್ರಯಾಣಿಸಿದ್ದಾನೆ. ಆ ವ್ಯಕ್ತಿ ದಕ್ಷಿಣ ಆಫ್ರಿಕಾಕ್ಕೂ ಪ್ರಯಾಣ ಬೆಳೆಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಕೊರೊನಾವೈರಸ್‌ನ ಹೆಚ್ಚು ರೂಪಾಂತರಿತ ರೂಪಾಂತರದ ಏಳು ಹೊಸ ಸೋಂಕುಗಳು ಮಹಾರಾಷ್ಟ್ರದಲ್ಲಿ ಮತ್ತು ಎರಡು ಗುಜರಾತ್‌ನಲ್ಲಿ ಪತ್ತೆಯಾದ ನಂತರ ಭಾರತವು 33 ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

33 Omicron Cases In India, Zimbabwe Traveller Tests Positive In Delhi

ಕಳೆದ ಮೂರು ದಿನಗಳಿಂದ ದೇಶದಲ್ಲಿ ಓಮಿಕ್ರಾನ್ ರೂಪಾಂತರದ ಯಾವುದೇ ಹೊಸ ಪ್ರಕರಣ ಕಂಡುಬಂದಿರಲಿಲ್ಲ.ಆದರೆ ಇಂದು ದೆಹಲಿಯಲ್ಲಿ ಪ್ರಕರಣ ದಾಖಲಾಗಿದೆ.ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವು ಮಹಾರಾಷ್ಟ್ರದಲ್ಲಿ 17, ರಾಜಸ್ಥಾನದಲ್ಲಿ ಒಂಬತ್ತು, ಗುಜರಾತ್‌ನಲ್ಲಿ ಮೂರು, ಕರ್ನಾಟಕದಲ್ಲಿ ಎರಡು ಮತ್ತು ದೆಹಲಿಯಲ್ಲಿ ಎರಡು ಪ್ರಕರಣ ದಾಖಲಾಗಿದೆ.

ದೇಶದಲ್ಲಿ ಓಮಿಕ್ರಾನ್ಪ್ರಕರಣ ತನ್ನ ಆರ್ಭಟ ಹೆಚ್ಚಿಸುತ್ತಿದೆ. ಆತಂಕ ವಾತಾರವಣ ನಿರ್ಮಾಣವಾಗುತ್ತಿದೆ. ಇದೀಗ ಪುಣೆಯಲ್ಲಿ 3 ವರ್ಷದ ಪುಟ್ಟ ಕಂದಮ್ಮನಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಹೊಸ 7 ಪ್ರಕರಣ ಖಚಿತಗೊಂಡಿದ್ದರೆ, ದೇಶದಲ್ಲಿ ಓಟ್ಟು ಓಮಿಕ್ರಾನ್ ರೂಪಾಂತರಿ ತಳಿ ಪ್ರಕರಣ 25ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿಂದು ಹೊಸ 7 ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಮುಂಬೈನಲ್ಲಿ 3 ಪ್ರಕರಣ ಪತ್ತೆಯಾಗಿದೆ. ಇತ್ತ ಪುಣೆಯಲ್ಲಿ ನಾಲ್ಕು ಪ್ರಕರಣ ಪತ್ತೆಯಾಗಿದೆ. ಮುಂಬೈನಲ್ಲಿ 24 ವರ್ಷ, 37 ಹಾಗೂ 48 ವರ್ಷದ ವ್ಯಕ್ತಿಗಳಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಪುಣೆಯಲ್ಲಿ ಖಚಿತಗೊಂಡ 3 ವರ್ಷದ ಮಗುವಿನಲ್ಲಿನ ಓಮಿಕ್ರಾನ್ ಪ್ರಕರಣ ಇದೀಗ ಪೋಷಕರ ಆತಂಕ ಹೆಚ್ಚಿಸಿದೆ. ಕಳೆದ ಭಾನುವಾರ ಪುಣೆಯಲ್ಲಿ ನೈಜಿರಿಯನ್ ಮಹಿಳೆಯಲ್ಲಿ ಓಮಿಕ್ರಾನ್ ಪತ್ತೆಯಾಗಿತ್ತು. ಈ ಮಹಿಳೆಯ ಸಂಪರ್ಕದಲ್ಲಿದ್ದ 3 ವರ್ಷದ ಕಂದಮ್ಮಗೂ ಓಮಿಕ್ರಾನ್ ಅಂಟಿಕೊಂಡಿದೆ.

ಇಂದು ಮಹಾರಾಷ್ಟ್ರದಲ್ಲಿ ಖಚಿತಗೊಂಡ 7 ಓಮಿಕ್ರಾನ್ ಪ್ರಕರಣಗಳಲ್ಲಿ ಮೂವರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನು ಓರ್ವ ಒಂದು ಡೋಸ್ ಪಡೆದಿದ್ದಾರೆ. ಇದರಲ್ಲಿ ಮೂವರಲ್ಲಿ ಮೈಲ್ಡ್ ರೋಗಲಕ್ಷಣಗಳು ಕಾಣಿಸಿಕೊಂಡಿದೆ. ಇನ್ನುಳಿದವರಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ.

ಇಂದು ಪತ್ತೆಯಾಗಿರುವ 7 ಪ್ರಕರಣಗಳಿಂದ ಇದೀಗ ಮಹಾರಾಷ್ಟ್ರದಲ್ಲಿಓಮಿಕ್ರಾನ್ ಪ್ರಕರಣ 17ಕ್ಕೆ ಏರಿಕೆಯಾಗಿದೆ. ಹೈ ರಿಸ್ಕಿ ದೇಶಗಳಿಂದ ಮಹಾರಾಷ್ಟ್ರಕ್ಕೆ 9,678 ಪ್ರಯಾಣಿಕರು ಆಗಮಿಸಿದ್ದಾರೆ. ಇವರಲ್ಲಿ ಇದರಲ್ಲಿ 25 ಮಂದಿ ಮಾದರಿಯನ್ನು ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗಿದೆ.

ಭಾರತದಲ್ಲಿ ಡಿಸೆಂಬರ್ 1 ರವರೆಗಿನ ವರದಿ ಪ್ರಕಾರ ದೇಶದಿಂದ ಬಂದ 93 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಲ್ಲಿ 83 ಮಂದಿ ಹೈ ರಿಸ್ಕ್ ದೇಶದಿಂದ ಭಾರತಕ್ಕೆ ಆಗಮಿಸಿದವರಾಗಿದ್ದಾರೆ.

ಸದ್ಯ 59 ರಾಷ್ಟ್ರಗಳಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. 59 ದೇಶಗಲ್ಲಿ ಓಟ್ಟು 2,936 ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. 78,054 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದ್ದು ಇವರ ಮಾದರಿಯನ್ನು ಜಿನೋಮ್ ಸೀಕ್ವೆನ್ಸ್‌ಗೆ ಕಳುಹಿಸಲಾಗಿದೆ.

ಕರ್ನಾಟಕದ ಮೂಲಕ ದೇಶಕ್ಕೆ ಕಾಲಿಟ್ಟ ಓಮಿಕ್ರಾನ್ ಇದೀಗ ಹಲವು ರಾಜ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೀಗ ಕರ್ನಾಟಕದಲ್ಲಿ ಓಮಿಕ್ರಾನ್ ಆತಂಕಕ್ಕಿಂತ ಕೊರೋನಾ ವೈರಸ್ ಆತಂಕ ಹೆಚ್ಚಾಗಿದೆ. ಕಾರಣ ಹೈ ರಿಸ್ಕ್ ದೇಶಗಳಿಂದ ಬಂದವರಲ್ಲಿ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಇತ್ತ ವಿದ್ಯಾರ್ಥಿಗಳುಲ್ಲಿ ಹೆಚ್ಚಿನ ಕೊರೋನಾ ಪತ್ತೆಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+