Breaking: ಇದೇ ಮೊದಲ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ಪತ್ತೆ

ದೆಹಲಿ, ಜುಲೈ 16: ಭಾರತದಲ್ಲಿ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ 30 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಕೇಸ್ ವರದಿಯಾಗಿದೆ. ಕಳೆದ 24 ಗಂಟೆಗೆ ಬರೋಬ್ಬರಿ 32,695 ಜನರಿಗೆ ಕೊವಿಡ್ ಸೋಂಕು ತಗುಲಿದೆ. ಇದು ಭಾರತದ ಪಾಲಿಗೆ ಕೆಟ್ಟ ದಾಖಲೆ.

Recommended Video

      3 ತಿಂಗಳ ಬಳಿಕ ತಾಯ್ನಾಡಿಗೆ ಬಂದಿಳಿದ ಕರ್ನಾಟಕದ ವಿದ್ಯಾರ್ಥಿಗಳು | Oneindia Kannada

      24 ಗಂಟೆಯಲ್ಲಿ 606 ಜನರು ಕೊವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಇಂದು ಬೆಳಗ್ಗಿನ ವರದಿಯಲ್ಲಿ ತಿಳಿಸಿದೆ.

      ಇಂದಿನ ವರದಿ ಬಳಿಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,68,876ಕ್ಕೆ ಏರಿಕೆಯಾಗಿದೆ. ಈ ಪೈಕಿ 6,12,815 ಜನರು ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. 3,31,146 ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ದೇಶದಲ್ಲಿ 24,915 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.

      32,695 COVID19 cases reported in the last 24 hours in India

      ನಿನ್ನೆ ಸಂಜೆವರೆಗೂ ರಾಜ್ಯಗಳಲ್ಲಿ ವರದಿಯಾದ ಕೊರೊನಾ ಸೋಂಕಿತರ ಸಂಖ್ಯೆ ನೋಡುವುದಾದರೆ ನಿರೀಕ್ಷೆಯಂತೆ ಮಹಾರಾಷ್ಟ್ರದಲ್ಲಿ ಹೆಚ್ಚು ಕೇಸ್ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ನಿನ್ನೆ 7975 ಜನರಿಗೆ ಕೊವಿಡ್ ದೃಢವಾಗಿದೆ.

      ತಮಿಳುನಾಡಿನಲ್ಲಿ 4496 ಕೇಸ್, ಕರ್ನಾಟಕದಲ್ಲಿ 3176 ಕೇಸ್, ಆಂಧ್ರಪ್ರದೇಶದಲ್ಲಿ 2432 ಪ್ರಕರಣ, ದೆಹಲಿಯಲ್ಲಿ 1647 ಕೇಸ್, ಪಶ್ಚಿಮ ಬಂಗಾಳದಲ್ಲಿ 1589 ಕೇಸ್, ಉತ್ತರ ಪ್ರದೇಶದಲ್ಲಿ 1659 ಕೇಸ್, ತೆಲಂಗಾಣದಲ್ಲಿ 1597 ಜನರಿಗೆ ಕೊರೊನಾ ತಗುಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+