ಭಾರತದಲ್ಲಿ ಸಿದ್ಧವಾದ ಕೊರೊನಾ ಲಸಿಕೆಗೆ 25 ದೇಶಗಳಿಂದ ಬೇಡಿಕೆ: ಜೈಶಂಕರ್

ಅಮರಾವತಿ,ಫೆಬ್ರವರಿ 06: ಭಾರತದಲ್ಲಿ ಸಿದ್ಧವಾಗಿರುವ ಕೊರೊನಾ ಲಸಿಕೆಗಳಿಗಾಗಿ 25 ದೇಶಗಳು ಕಾಯುತ್ತಿವೆ ಎಂದು ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಕೇಂದ್ರವು ಈಗಾಗಲೇ ಎರಡು ಕೋವಿಡ್19 ಲಸಿಕೆಗಳಿಗೆ ಅನುಮತಿ ನೀಡಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಮತ್ತು ಆಕ್ಸ್‌ಫರ್ಡ್‌ನ ಕೋವಿಶೀಲ್ಡ್ ಗೆ ಅನುಮತಿ ಸಿಕ್ಕಿದೆ.

ಈ ಎರಡೂ ಲಸಿಕೆಗಳನ್ನು ಜನವರಿ 16 ರಿಂದ ತುರ್ತು ಪರಿಸ್ಥಿತಿಯಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ.

25 Countries In Queue For Made In India COVID-19 Vaccine: Jaishankar

ಭಾರತದಿಂದ ಲಸಿಕೆ ಪಡೆಯಲು ಉತ್ಸುಕರಾಗಿರುವ ಮೂರು ವರ್ಗಗಳ ದೇಶಗಳಿವೆ- ಬಡ ರಾಷ್ಟ್ರಗಳು, ಬೆಲೆ ಸೂಕ್ಷ್ಮ ರಾಷ್ಟ್ರಗಳು ಮತ್ತು ಇತರ ದೇಶಗಳು ನೇರವಾಗಿ ಲಸಿಕೆಯನ್ನು ತಯಾರಿಸುವ ಔಷಧೀಯ ಕಂಪನಿಗಳೊಂದಿಗೆ ಅವು ವ್ಯವಹರಿಸುತ್ತವೆ.

ಕೆಲವು ದೇಶಗಳು ಭಾರತೀಯ ಲಸಿಕೆ ಉತ್ಪಾದಿಸುವ ಕಂಪನಿಗಳೊಂದಿಗೆ ನೇರ ಒಪ್ಪಂದಗಳನ್ನು ಹೊಂದಿವೆ ಮತ್ತು ವಾಣಿಜ್ಯ ಮಾತುಕತೆ ನಡೆಸಿವೆ ಎಂದು ಅವರು ಹೇಳಿದರು. ಈಗಾಗಲೇ ಸುಮಾರು 15 ದೇಶಗಳಿಗೆ ಲಸಿಕೆ ಸರಬರಾಜು ಮಾಡಿದ್ದೇವೆ.

ಸರದಿಯಲ್ಲಿ ವಿವಿಧ ಹಂತಗಳಲ್ಲಿರುವ ಸುಮಾರು 25 ದೇಶಗಳು ಇದೆ. ಈ ನಮ್ಮ ಸಾಧನೆ ಭಾರತವನ್ನು ಜಗತ್ತಿನ ಭೂಪಟದಲ್ಲಿ ಉತ್ತುಂಗಕ್ಕೆ ಏರಿಸಿದೆ. ಎಂದು ಜೈಶಂಕರ್ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ದೇಶೀಯ ಸಾಮರ್ಥ್ಯಗಳ ಲಾಭ ಮತ್ತು ಭಾರತ ಐಟಿ ನಾಯಕರಾಗಿ ಹೊರಹೊಮ್ಮಿದ ರೀತಿಯನ್ನು ಬಳಸಿಕೊಂಡು ದೇಶವನ್ನು"ಜಾಗತಿಕ ಫಾರ್ಮಸಿ" ಆಗಿ ಸ್ಥಾಪಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಆಲೋಚನೆ ಎಂದು ಜೈಶಂಕರ್ ಹೇಳಿದರು.

ಕೆಲವು ಬಡ ದೇಶಗಳಿಗೆ ಲಸಿಕೆಯನ್ನು ಅನುದಾನದ ಆಧಾರದಲ್ಲಿ ಸರಬರಾಜು ಮಾಡಲಾಗುತ್ತಿದೆ ಮತ್ತು ಕೆಲವು ರಾಷ್ಟ್ರಗಳು ಲಸಿಕೆ ತಯಾರಕರಿಗೆ ಭಾರತ ಸರ್ಕಾರ ಪಾವತಿಸುವ ಬೆಲೆಗೆ ಸಮಾನವಾಗಿ ಬೇಡಿಕೆ ಇಟ್ಟಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+