ನಿರ್ಭಯಾ ಅತ್ಯಾಚಾರ ಪ್ರಕರಣ: ತಿಹಾರ್ ಜೈಲಿನಲ್ಲಿ ನಾಲ್ಕು ಗೊಂಬೆಗೆ ಗಲ್ಲುಶಿಕ್ಷೆ

ನವದೆಹಲಿ, ಜನವರಿ.12: ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ವಿಧಿಸಿದೆ. ಜನವರಿ.22ರ ಬೆಳಗ್ಗೆ 7 ಗಂಟೆಗೆ ಅಪರಾಧಿಗಳನ್ನು ಗಲ್ಲಿಗೇರಿಸಲು ಎಲ್ಲ ತಯಾರಿ ನಡೆಯುತ್ತಿದೆ. ಈ ಸಂಬಂಧ ದೆಹಲಿಯ ತಿಹಾರ್ ಜೈಲಿನಲ್ಲಿ ಪ್ರಾಯೋಗಿಕವಾಗಿ ಗೊಂಬೆಗಳಿಗೆ ಮರಣದಂಡನೆ ಶಿಕ್ಷೆಯನ್ನು ಭಾನುವಾರ ಜಾರಿಗೊಳಿಸಲಾಯಿತು.
ನಾಲ್ಕು ಗೊಂಬೆಗಳನ್ನು ಪ್ರಾಯೋಗಿಕವಾಗಿ ಬಳಸಿಕೊಂಡು ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಯಿತು. ಇಂದು ಅವಶೇಷಗಳು ಹಾಗೂ ಕಲ್ಲನ್ನು ತುಂಬಿದ ನಾಲ್ಕೂ ಗೊಂಬೆಗಳನ್ನು ನೇಣುಗಂಬಕ್ಕೆ ಏರಿಸಲಾಯಿತು.

ನಿರ್ಭಯಾ ಅತ್ಯಾಚಾರ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜ.22ರಂದು ಗಲ್ಲು
ಇದಕ್ಕೂ ಮೊದಲು ನಾಲ್ವರು ಅಪರಾಧಿಗಳ ತೂಕವನ್ನು ದಾಖಲಿಸಿಕೊಂಡು, ಅಷ್ಟೇ ತೂಕದ ಕಲ್ಲುಗಳನ್ನು ಗೊಂಬೆಗಳಲ್ಲಿ ತುಂಬಲಾಗಿತ್ತು. ಭಾನುವಾರ ಪ್ರಾಯೋಗಿಕವಾಗಿ ನಡೆದ ಗಲ್ಲುಶಿಕ್ಷೆ ಅವಧಿಯಲ್ಲಿ ಹ್ಯಾಂಗ್ ಮ್ಯಾನ್ ಪವನ್ ಗೆ ಹಾಜರಾಗುವಂತೆ ಯಾವುದೇ ಸೂಚನೆ ನೀಡಿರಲಿಲ್ಲ. ಬದಲಿಗೆ ಜೈಲಿನ ಅಧಿಕಾರಿಗಳೇ ಮುಂದೆ ನಿಂತು ಗಲ್ಲುಶಿಕ್ಷೆಯ ಕ್ರಮವನ್ನು ನೋಡಿಕೊಂಡರು ಎಂದು ತಿಳಿದು ಬಂದಿದೆ.

2012 Delhi Nirbhaya Rape case: Dummy Execution Of The Convicts

ಇನ್ನೆರೆಡು ದಿನಗಳಲ್ಲಿ ಕ್ಯುರೇಟಿವ್ ಅರ್ಜಿಗಳ ವಿಚಾರಣೆ:
ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮುಕೇಶ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31) ಅಪರಾಧಿಗಳಾಗಿದ್ದಾರೆ. ಜನವರಿ.22ರ ಬೆಳಗ್ಗೆ 7 ಗಂಟೆಗೆ ನಾಲ್ವರಿಗೆ ಗಲ್ಲುಶಿಕ್ಷೆ ವಿಧಿಸುವಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ತೀರ್ಪು ಹೊರಡಿಸಿದೆ. ಇದರ ಮಧ್ಯೆ ಸುಪ್ರೀಂಕೋರ್ಟ್ ಗೆ ಅಪರಾಧಿ ವಿನಯ್ ಕುಮಾರ್ ಶರ್ಮಾ ಹಾಗೂ ಮುಕೇಶ್ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+