ದೆಹಲಿಯಲ್ಲಿ 20 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ

ನವದೆಹಲಿ, ಜನವರಿ 08: ದೆಹಲಿಯಲ್ಲಿ 20 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೆಹಲಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು 20 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಕಳೆದ ಎಂಟು ತಿಂಗಳಲ್ಲೇ ಅತಿ ಹೆಚ್ಚಿನ ಪ್ರಕರಣ ಇದಾಗಲಿದೆ, ದೆಹಲಿಯಲ್ಲಿ ಪಾಸಿಟಿವಿಟಿ ದರ ಶೇ.17ಕ್ಕಿಂತ ಹೆಚ್ಚಿದೆ. ಶುಕ್ರವಾರ ದೆಹಲಿಯಲ್ಲಿ 17,335 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು, ಗುರುವಾರ 15,095 ಪ್ರಕರಣಗಳು ದಾಖಲಾಹಗಿ, ಕೊರೊನಾ ಪಾಸಿಟಿವಿಟಿ ದರ ಶೇ.15.34 ಇತ್ತು, ಅದು ಶುಕ್ರವಾರ 17.73ಕ್ಕೆ ಏರಿಕೆಯಾಗಿತ್ತು.

20,000 Covid Cases In Delhi Likely Today: State Health Minister

ಮೇ 8ರಂದು ದೆಹಲಿಯಲ್ಲಿ 17,364 ಪ್ರಕರಣಗಳು ದಾಖಲಾಗಿ, ಪಾಸಿಟಿವಿಟಿ ದರ 23.34ರಷ್ಟಿತ್ತು. 332 ಮಂದಿ ಮೃತಪಟ್ಟಿದ್ದರು. ಸಿಲುಕುವಂತೆ ಮಾಡಿದೆ.
ಸೋಂಕು ತಡೆಗೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಲಾಗಿದೆ.

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಆಸ್ಪತ್ರೆಗಳಲ್ಲಿ ದಾಖಲಾಗುವ ಸಂಖ್ಯೆಯೂ ಹೆಚ್ಚುತ್ತಿದೆ ಇದರಿಂದ ಐಸಿಯು ಸೇರಿದಂತೆ ಇನ್ನಿತರ ಆರೋಗ್ಯ ಮೂಲಸೌಕರ್ಯಗಳ ಕೊರತೆ ಎದುರಾಗುವ ಸಾಧ್ಯತೆಗಳಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಮತ್ತು ಓಮಿಕ್ರಾನ್ ಸೋಂಕು ಗಣನೀಯವಾಗಿ ಹೆಚ್ಚಳವಾಗುತ್ತಿದೆ..
ಅದರಲ್ಲಿಯೂ ರೂಪಾಂತರಿ ಸೋಂಕು ಹೆಚ್ಚಾಗುತ್ತಿದ್ದು ಇದುವರೆಗೂ ಯಾರೊಬ್ಬರೂ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿಲ್ಲ ಮತ್ತು ಸೋಂಕಿನಿಂದ ಸಾವನ್ನಪ್ಪಿಲ್ಲ ಎಂದು ದೆಹಲಿ ಸರ್ಕಾರ ತಿಳಿಸಿದೆ.

ದೆಹಲಿಯಲ್ಲಿ ಕೊರೊನೊ ಸೋಂಕಿನ ಸರಾಸರಿ ಪ್ರಮಾಣ ಶೇಕಡ 11.8ರಿಂದ ಶೇಕಡ 15.34 ಕ್ಕೆ ಏರಿಕೆಯಾಗಿದೆ ಇದು ಸಹಜವಾಗಿ ಆತಂಕಕ್ಕೆ ಮಾಡಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 31498ಕ್ಕೆ ಏರಿಕೆಯಾಗಿದ್ದು ಕಳೆದ ವರ್ಷ ಮೇ ತಿಂಗಳ ಬಳಿಕ ಅತ್ಯಧಿಕ ಸಕ್ರಿಯ ಪ್ರಕರಣಗಳ ಸಂಖ್ಯೆ ಇದಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ. ದೆಹಲಿಯಲ್ಲಿ ಜನವರಿ 07ರಂದು 17 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಹೆಚ್ಚಿನ ಸಂದರ್ಭಗಳಲ್ಲಿ, ಓಮಿಕ್ರಾನ್ ರೂಪಾಂತರದ ಲಕ್ಷಣಗಳು ಸಾಮಾನ್ಯ ಶೀತದಂತೆಯೇ ಇರುತ್ತವೆ. ಅದಕ್ಕಾಗಿಯೇ ಅನೇಕ ಜನರು ತಾವು ಅಥವಾ ಅವರ ಕುಟುಂಬದ ಸದಸ್ಯರು ನೆಗಡಿಗೆ ಒಳಗಾಗಿದ್ದಾರೆಯೇ ಅಥವಾ ಅವರು ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆಯೇ ಎಂಬುದನ್ನು ಪ್ರತ್ಯೇಕಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನಮ್ಮ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನೀವು ಅವುಗಳನ್ನು ಪ್ರತ್ಯೇಕಿಸಬಹುದು.

ವೈದ್ಯರ ಪ್ರಕಾರ, ಒಬ್ಬ ವ್ಯಕ್ತಿಯು ನಿರಂತರವಾಗಿ ಒಂದು ಗಂಟೆ ಕೆಮ್ಮಿದರೆ, ಆಗ ಅದು ಕರೋನದ ಲಕ್ಷಣವಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ನೆಗಡಿ ಎಂದುಕೊಳ್ಳಬೇಡಿ ಮತ್ತು ನೆಗಡಿ ಬಂದಿದೆ ಎಂದುಕೊಂಡು ನೀವೇ ಮನೆಮದ್ದು ತೆಗೆದುಕೊಳ್ಳುವ ಬದಲಿಗೆ ವೈದ್ಯರನ್ನು ಸಂಪರ್ಕಿಸಿ.

ಎರಡನೆಯದಾಗಿ, ಓಮಿಕ್ರಾನ್ (Omicron) ನಲ್ಲಿ ಎರಡು ಹೊಸ ಲಕ್ಷಣಗಳು ಕಂಡುಬಂದಿವೆ. ಮೊದಲನೆಯದು ರಾತ್ರಿ ಮಲಗುವಾಗ ಬೆವರುವುದು ಮತ್ತು ಎರಡನೆಯದು ದಿನಕ್ಕೆ ಹಲವಾರು ಬಾರಿ ವಾಂತಿ ಮಾಡುವುದು. ಆದ್ದರಿಂದ, ನೀವು ಈ ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೆ, ನಂತರ ಖಂಡಿತವಾಗಿಯೂ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ.

ಸಾಮಾನ್ಯ ಶೀತದಲ್ಲಿ, ನಿಮಗೆ ಜ್ವರ ಬರುತ್ತದೆ ಮತ್ತು ಅದು ಶೀಘ್ರದಲ್ಲೇ ಹೋಗುತ್ತದೆ. Omicron ನ ಅನೇಕ ರೋಗಿಗಳಲ್ಲಿ, ರೋಗಿಯು ಕೆಲವು ದಿನಗಳವರೆಗೆ ಜ್ವರದಿಂದ ಬಳಲುತ್ತಿರುವುದು ಕಂಡುಬಂದಿದೆ, ಆದ್ದರಿಂದ ನೀವು ನಿಮ್ಮ ದೇಹದ ಉಷ್ಣತೆಯನ್ನು ಆಗಾಗ್ಗೆ ಪರೀಕ್ಷಿಸುತ್ತಿರಿ. ನಾಲ್ಕು ದಿನಗಳ ನಂತರವೂ ಸ್ವಲ್ಪ ಜ್ವರ ಕಾಣಿಸಿಕೊಂಡರೆ, ನೀವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ಕರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+