ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಇನ್ನಷ್ಟು ದೇಶಗಳಿಗೆ ಕೊರೊನಾ ಲಸಿಕೆ ಸರಬರಾಜು; ಆರೋಗ್ಯ ಸಚಿವ

|
Google Oneindia Kannada News

ನವದೆಹಲಿ, ಫೆಬ್ರುವರಿ 15: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಭಾರತದಲ್ಲಿ ಇನ್ನೂ 18ರಿಂದ 19 ಲಸಿಕೆಗಳು ಸಿದ್ಧವಾಗುತ್ತಿವೆ. ಎಲ್ಲವೂ ಕ್ಲಿನಿಕಲ್ ಪ್ರಯೋಗದ ಭಿನ್ನ ಹಂತಗಳಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಸೋಮವಾರ ಮಾಧ್ಯಮ ಹೇಳಿಕೆ ನೀಡಿದ ಅವರು, "ಮುಂದಿನ ಎರಡರಿಂದ ಮೂರು ವಾರಗಳಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಗಳನ್ನು ನೀಡಲಾಗುತ್ತದೆ" ಎಂದು ಮಾಹಿತಿ ನೀಡಿದರು. ಭಾರತದಿಂದ 20 ರಿಂದ 25 ದೇಶಗಳಿಗೆ ಕೊರೊನಾ ಲಸಿಕೆಗಳನ್ನು ಸರಬರಾಜು ಮಾಡುವ ಯೋಜನೆಯಿದೆ ಎಂದು ತಿಳಿಸಿದರು.

"ಕೊರೊನಾ ಲಸಿಕಾ ಅಭಿಯಾನಕ್ಕೆ ಪಿಎಂ ಪರಿಹಾರ ನಿಧಿ ಬಳಕೆ"

ಕಳೆದ ಏಳು ದಿನಗಳಿಂದ 188 ಜಿಲ್ಲೆಗಳಲ್ಲಿ ಯಾವುದೇ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿಲ್ಲ. 21 ದಿನಗಳಿಂದ 21 ಜಿಲ್ಲೆಗಳಲ್ಲಿ ಶೂನ್ಯ ಕೊರೊನಾ ಪ್ರಕರಣ ದಾಖಲಾಗಿದೆ ಎಂದು ಹೇಳಿದರು. ಆದರೆ ಕೊರೊನಾ ಸೋಂಕು ತಗ್ಗುತ್ತಿದೆ ಎಂದು ಮೈ ಮರೆಯಬೇಡಿ. ಕೊರೊನಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಮನವಿ ಮಾಡಿದ್ದಾರೆ.

18 To19 Vaccine Candidates Against COVID-19 In Pipeline Said Harsh Vardhan

ಸದ್ಯಕ್ಕೆ ಭಾರತದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದೆ. ಎರಡು ಲಸಿಕೆಗಳು ಸುರಕ್ಷಿತವಾಗಿದ್ದು, ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗುತ್ತಿದೆ. ಶೀಘ್ರವೇ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆರಂಭಿಸಲಾಗುತ್ತದೆ ಎಂದು ಹೇಳಿದರು.

English summary
About 18-19 vaccine candidates against COVID-19 are in the pipeline and in different clinical trial stages, said Health Minister Harsh Vardhan on Monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X