ಸೋದರಿಯನ್ನು ಚುಡಾಯಿಸಿದ್ದಕ್ಕೆ ವರ್ಷದ ನಂತರ ಇಬ್ಬರನ್ನು ಹತ್ಯೆ ಮಾಡಿದ ಬಾಲಕ

Posted By:
Subscribe to Oneindia Kannada

ನವದೆಹಲಿ, ಮೇ 18: ಹದಿನೇಳು ವರ್ಷದ ಹುಡುಗನೊಬ್ಬ ತನ್ನ ಸಹೋದರಿಯನ್ನು ಚುಡಾಯಿಸಿದ ಇಬ್ಬರು ಹುಡುಗರನ್ನು, ಘಟನೆ ನಡೆದ ಒಂದು ವರ್ಷದ ನಂತರ ಇರಿದು ಕೊಂದಿದ್ದಾನೆ. ಆತ ಬಾಲಾಪರಾಧಿಯಾಗಿರುವುದರಿಂದ ಆತನ ಹೆಸರನ್ನು ಬಹಿರಂಗಗೊಳಿಸಲಾಗಿಲ್ಲ.

ಅದು ಸುಮಾರು ವರ್ಷದ ಹಿಂದೆ ನಡೆದಿದ್ದ ಘಟನೆ. ದೆಹಲಿಯ ಖಾಲ್ಯದಲ್ಲಿರುವ ಸುನಿಲ್ ಎಂಬಾತ ಹಾಗೂ ಆತನ ಮಿತ್ರ ಕುಲ್ದೀಪ್ ಎಂಬುವರು ಆರೋಪಿಯ ಸಹೋದರಿಯನ್ನು ಚುಡಾಯಿಸಿದ್ದರು. ಇದನ್ನು ಆ ಹುಡುಗ ಪ್ರತಿಭಟಿಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಆ ಯುವಕರು ಆ ಹುಡುಗನನ್ನು ಇರಿದಿದ್ದರು.[ದೆಹಲಿಯಲ್ಲಿ ಮತ್ತೊಬ್ಬ ಯುವತಿಯ ಮೇಲೆ ಅತ್ಯಾಚಾರ!]

17-year-old kills 2 in 1 night for revenge in Delhi

ದೀರ್ಘಾವಧಿವರೆಗೆ ಆಸ್ಪತ್ರೆಯಲ್ಲಿದ್ದ ಆತ, ನಿಧಾನವಾಗಿ ಚೇತರಿಸಿಕೊಂಡು ಗುಣಮುಖನಾದ. ಆದರೆ, ಆ ಸೇಡು ಮಾತ್ರ ಆತನಲ್ಲಿ ಹಾಗೇ ಉಳಿಯಿತು. ಸಮಯ ಬಂದಾಗ ಆ ಇಬ್ಬರನ್ನೂ ಮುಗಿಸುವ ಸಂಚು ಹೂಡಿದ್ದ ಆ ಹುಡುಗ.

ಬಾಲಕನನ್ನು ಇರಿದಿದ್ದ ಪ್ರಕರಣದಲ್ಲಿ ಸುನಿಲ್ ಜೈಲು ಹಕ್ಕಿಯಾಗಿದ್ದ. ಇತ್ತೀಚೆಗಷ್ಟೇ ಪೆರೋಲ್ ಮೇಲೆ ಸುನಿಲ್ ಹೊರಗೆ ಬಂದಿದ್ದ. ಇದನ್ನು ತಿಳಿದ ಆ ಬಾಲಕ, ಭಾನುವಾರ (ಮೇ 18) ಸೇಡು ತೀರಿಸಿಕೊಳ್ಳಲು ಮನೆಯಿಂದ ಹೊರಬಿದ್ದಿದ್ದಾನೆ.

ಮೊದಲಿಗೆ ನಗರದ ಖ್ಯಾಲ್ಯ ಪ್ರಾಂತ್ಯದಲ್ಲಿರುವ ಸುನಿಲ್ ಮನೆಗೆ ಬಂದ ಆತ, ಸುನಿಲ್ ನನ್ನು ಮಾತನಾಡಬೇಕೆಂದು ಹೊರಗೆ ಕರೆದಿದ್ದಾನೆ. ಹಾಗೆ ಹೊರಗೆ ಬಂದ ಸುನಿಲ್ ಜತೆಗೆ ಸ್ವಲ್ಪ ಮಾತನಾಡಿದಂತೆ ನಟಿಸಿ, ನೋಡನೋಡುತ್ತಿದ್ದಂತೆ ಜೇಬಿನಲ್ಲಿ ತಾನು ತಂದಿದ್ದ ಬಟನ್ ಚಾಕುವಿನಿಂದ ಸುನಿಲ್ ನನ್ನು ಇರಿದು ಹತ್ಯೆ ಮಾಡಿದ್ದಾನೆ.

ಅಲ್ಲಿಂದ ನಬೀ ಕರೀಂ ನಲ್ಲಿರುವ ತನ್ನ ಮನೆಗೆ ವಾಪಸ್ ಬಂದ ಆ ಹುಡುಗ ಅಲ್ಲಿಂದ ಕುಲ್ದೀಪ್ ಮನೆಗೆ ಹೋಗಿ ಅಲ್ಲಿ ಆತನನ್ನು ಹತ್ಯೆಗೈದಿದ್ದಾನೆ.

ಈ ಎರಡೂ ಕೊಲೆಗಳ ಜಾಡನ್ನು ಹಿಡಿದಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಕುಕೃತ್ಯಗಳಿಗೆ ಸಹಾಯ ಮಾಡಿರುವ ಮನೋರ್ (22) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A juvenile stood up against those who harassed his sister and in the bargain was stabbed. A year later he decided to seek out revenge and on Sunday night he killed those two.
Please Wait while comments are loading...