ಬರ ಪರಿಹಾರ: ಕೇಳಿದ್ದು 4701 ಕೋಟಿ, ಕೊಟ್ಟಿದ್ದು ರು 1782 ಕೋಟಿ

Posted By:
Subscribe to Oneindia Kannada

ಜನವರಿ 5: ರಾಜ್ಯ ಸರಕಾರ ಅನೇಕ ಬಾರಿ ಬರ ಪರಿಶೀಲನೆ ನಡೆಸಿ, ಕೇಂದ್ರದೊಂದಿಗೆ ಪತ್ರ ವ್ಯವಹಾರ, ಪ್ರತ್ಯಕ್ಷ ನಿಯೋಗ ಹೊಗಿದ್ದು ಫಲಕೊಟ್ಟಂತಿದೆ ಅಂದರೆ ಕೇಂದ್ರ ಸರ್ಕಾರ ಬರಪರಿಹಾರವನ್ನು ರಾಜ್ಯಕ್ಕೆ ಕರುಣಿಸಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ನೀಡಿಲ್ಲ.

ಅನೇಕ ಬರಪರಿಶೀಲನೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ನಿಯೋಗ ಹೋಗಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಬೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿಯನ್ನು ವಿವರಿಸಿ ರು 4701 ಕೋಟಿ ಬರಪರಿಹಾರವನ್ನು ನೀಡಬೇಕೆಂದು ಕೇಳಿಕೊಂಡಿದ್ದರು, ಈ ಬಗ್ಗೆ ಪರಿಶೀಲನೆ ನಡೆಸಿರುವ ರು 1782 ಕೋಟಿ ಬರ ಪರಿಹಾರವನ್ನು ಬಿಡುಗಡೆಗೊಳಿಸಿರುವುದಾಗಿ ರಾಜನಾಥ್ ಸಿಂಗ್ ದೆಹಲಿಯಲ್ಲಿ ಗುರುವಾರ ತಿಳಿಸಿದರು.['ಪ್ರಧಾನಿ ಸಂಸತ್ ಗೂ ಬರಲ್ಲ, ಭೇಟಿಗೆ ಅವಕಾಶವೂ ನೀಡಲ್ಲ']

1472 crore, the central government declared for state of drought compensation

ಇದು ಸಂತಸದ ವಿಷಯವಾದರೂ, ಈ ಪರಿಹಾರದ ಹಣ ರಾಜ್ಯ ಕೇಳಿಕೊಂಡಿದ್ದ ಪರಿಹಾರಕ್ಕೆ ಅರ್ಧದಷ್ಟೂ ಇಲ್ಲ ಎಂಬುದು ರಾಜ್ಯದ ಮುಖಂಡರಲ್ಲಿ ಬೇಸರ ಮೂಡಿಸಿದೆ. ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಕಾಂಗ್ರೆಸ್ ಮುಖಂಡರು ಒಂದು ಬಾರಿ, ಸಿಎಂ ಸಿದ್ದರಾಮಯ್ಯ ಒಂದು ಬಾರಿ, ಕೇಂದ್ರ ಸರಕಾರ ಒಂದು ಬಾರಿ ಬರ ಪರಿಶೀಲನೆಗೆ ನಡೆಸಲಾಗಿತ್ತು.[ಸಚಿವರಿಂದ ರಾಜ್ಯ ಬರ ಅಧ್ಯಯನ ಪ್ರವಾಸ]

1472 crore, the central government declared for state of drought compensation

ಅಲ್ಲದೆ ಪ್ರಧಾನಿಯವರಿಗೆ ಅನೇಕ ಬಾರಿ ಬರ ಪರಿಸ್ಥಿತಿ ಕುರಿತು ಪತ್ರವನ್ನು ಬರೆಯಲಾಗಿತ್ತು. ಈ ಹಿನ್ನೆಲೆ ಸಿದ್ದರಾಮಯ್ಯ 'ಮೋದಿಯವರಿಗೆ ರಾಜ್ಯದ ಬಗ್ಗೆ ಚರ್ಚಿಸಲು ಸಮಯವಿಲ್ಲ' ಎಂದು ಹೇಳಿಕೆ ನೀಡಿ ಅನೇಕ ಆರೋಪಗಳಿಗೆ ಕಾರಣವಾಗಿದ್ದರು.[ಬರ : ಪ್ರಧಾನಿ ಭೇಟಿಗೆ ತೆರಳಲಿರುವ ಸಿದ್ದರಾಮಯ್ಯ ನೇತೃತ್ವದ ನಿಯೋಗ]

ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಾಲ್ಕು ತಂಡ ರಚಿಸಿ ರಾಜ್ಯದೆಲ್ಲೆಡೆ ಬರ ಅಧ್ಯಯನವನ್ನೂ ನಡೆಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
1472 crore, the central government declared for state of drought compensation. 4701 crore sought by the state. But central government give only for 1782 crore.
Please Wait while comments are loading...