ಸೇಡು ತೀರಿಸಿಕೊಳ್ಳೋಣ: ಹತ್ತರ ಬಾಲಕಿ ಪ್ರಧಾನಿ ಮೋದಿಗೆ ಬರೆದ ಪತ್ರ ವೈರಲ್!

Recommended Video

      Pulwama : ನರೇಂದ್ರ ಮೋದಿಗೆ ಪತ್ರ ಬರೆದ 10 ವರ್ಷದ ಬಾಲಕಿ | Oneindia Kannada

      ನವದೆಹಲಿ, ಫೆಬ್ರವರಿ 20: ಪುಲ್ವಾಮಾದಲ್ಲಿ ನಡೆದ ಘೋರ ದಾಳಿ ಈ ದೇಶದ ಪ್ರತಿ ವ್ಯಕ್ತಿಯ ಮನಸ್ಸಿನಲ್ಲೂ ಉಗ್ರವಾದದ ಬಗ್ಗೆ, ಪಾಕಿಸ್ತಾನದ ಬಗ್ಗೆ ಎಂಥ ರೋಷ ಹುಟ್ಟಿಸಿದೆ ಎಂಬುದಕ್ಕೆ ಇದೊಂದು ಅತ್ಯತ್ತಮ ಉದಾಹರಣೆ.

      ಗುಜರಾತಿನ ಸೂರತ್ತಿನ ಹತ್ತು ವರ್ಷ ವಯಸಿನ ಬಾಲಕಿಯೊಬ್ಬಳು ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ. 'ನಮ್ಮ ಯೋಧರ ಸಾವಿಗೆ ಕಾರಣವಾದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳೋಣ. ಅಂಥ ಪಾಪಿಗಳನ್ನು ಕೊಲ್ಲುವುದು ಖಂಡಿತ ಪಾಪವಲ್ಲ. ನನಗೆ ಗೊತ್ತು ಮೋದಿ ಅಂಕಲ್, ನೀವು ಏನೇ ಮಾಡಿದ್ರೂ ಒಳ್ಳೆಯದನ್ನೇ ಮಾಡುತ್ತೀರಿ. ಆದ್ದರಿಂದ ಆ ಉಗ್ರರಿಗೂ ನೀವು ಪಾಠ ಕಲಿಸುತ್ತೀರಿ ಎಂಬ ನಂಬಿಕೆ ನಮಗಿದೆ' ಎಂದು ಮನಾಲಿ ಎಂಬ ಪುಟ್ಟ ಬಾಲಕಿ ಪತ್ರ ಬರೆದಿದ್ದಾಳೆ.

      10 year old girl writes PM Modi to take revenge for Pulwama attack

      ಮುಗ್ಧ ಬಾಲಕಿ ಹಿಂದಿಯಲ್ಲಿ ಬರೆದ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'ಫೆಬ್ರವರಿ 14 ರಂದು ಜೈಷ್ ಇ ಮೊಹಮ್ಮದ್ ಉಗ್ರರು ಸಿಆರ್ ಪಿಎಫ್ ಯೋಧರ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿ, 44 ಯೋಧರು ಹುತಾತ್ಮರಾದ ಸುದ್ದಿ ಹೊರಬಿದ್ದಾಗ ನಾನು ಹೋಂವರ್ಕ್ ಮಾಡುತ್ತಿದ್ದೆ. ಯೋಧರ ಬಲಿದಾನದ ಸುದ್ದಿ ನನ್ನನ್ನು ತೀವ್ರವಾಗಿ ಘಾಸಿಗೊಳಿಸಿತು' ಎಂದು ಮನಾಲಿ ಹೇಳಿಕೊಂಡಿದ್ದಾಳೆ.

      10 year old girl writes PM to take revenge for Pulwama attack
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+