• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

10 ಕೇಂದ್ರ ಸಂಸ್ಥೆಗಳಿಗೆ ವಿಶೇಷ ಅಧಿಕಾರ, ಕಂಪ್ಯೂಟರ್ ಮಾಹಿತಿಗಳಿಗೂ ಕೈ ಇಡಬಹುದು

|

ನವದೆಹಲಿ, ಡಿಸೆಂಬರ್ 21: ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ದಾಖಲಿಸಿಟ್ಟ ಮಾಹಿತಿಗಳ ಮೇಲೆ ನಿಗಾ ವಹಿಸಲು ಹಾಗೂ ತನಿಖೆ ಮಾಡಲು ತನಿಖಾ ಸಂಸ್ಥೆಗಳಿಗೆ ಕೇಂದ್ರ ಸರಕಾರ ಹೆಚ್ಚಿನ ಬಲ ತುಂಬಿದೆ. ಗುರುವಾರದಂದು ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಕಾರ್ಯದರ್ಶಿ ಆದೇಶಕ್ಕೆ ಸಹಿ ಹಾಕಿದ್ದಾರೆ.

ಹತ್ತು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಈ ವಿಶೇಷ ಅಧಿಕಾರ ನೀಡಲಾಗಿದೆ. ಯಾವುದೇ ಕಂಪ್ಯೂಟರ್ ನಲ್ಲಿ ಸಂಗ್ರಹಿಸಿದ, ಪಡೆದ, ಸೃಷ್ಟಿಸಿದ ಹಾಗೂ ಕಳುಹಿಸಿದ ಮಾಹಿತಿ ಮೇಲೆ ನಿಗಾ ಇಡಲು, ಭೇದಿಸಲು ಅಧಿಕಾರ ಲಭಿಸಿದಂತಾಗಿದೆ. ಆ ಹತ್ತು ಸಂಸ್ಥೆಗಳು ಯಾವುದು ಎಂಬುದನ್ನು ಕೂಡ ಪಟ್ಟಿ ಮಾಡಲಾಗಿದೆ.

* ಗುಪ್ತಚರ ಇಲಾಖೆ (ಇಂಟೆಲಿಜೆನ್ಸಿ ಬ್ಯೂರೋ)

* ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೋ

*ಜಾರಿ ನಿರ್ದೇಶನಾಲಯ (ಇಡಿ)

* ರಾಷ್ಟ್ರೀಯ ತನಿಖಾ ದಳ (ಎನ್ ಐಎ)

* ಕ್ಯಾಬಿನೆಟ್ ಸೆಕ್ರೆಟರಿಯೇಟ್

* ಡೆರೆಕ್ಟೊರೇಟ್ ಆಫ್ ಸಿಗ್ನಲ್ ಇಂಟೆಲಿಜೆನ್ಸ್ ( ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಹಾಗೂ ಅಸ್ಸಾಂನಲ್ಲಿ ಮಾತ್ರ)

* ದೆಹಲಿ ಪೊಲೀಸ್ ಕಮಿಷನರ್

"ಇದೇ ಮೊದಲ ಬಾರಿಗೆ ದತ್ತಾಂಶವನ್ನು ಸ್ಕ್ಯಾನಿಂಗ್ ಮಾಡುವ ಅಧಿಕಾರವನ್ನು ವಿವಿಧ ಸಂಸ್ಥೆಗಳಿಗೆ ನೀಡಲಾಗಿದೆ. ಇದಕ್ಕೂ ದತ್ತಾಂಶಗಳು ಹಾಗೆ ನಿಗಾ ಮಾಡುವಂಥ ಅಧಿಕಾರ ಇರಲಿಲ್ಲ. ಆದರೆ ಈಗ ದತ್ತಾಂಶವನ್ನು ಪರಿಶೀಲಿಸಬಹುದು. ಈಗಾಗಲೇ ಸಂಗ್ರಹಿಸಿದ ಹಾಗೂ ಸೃಷ್ಟಿಸಿದ ಮಾಹಿತಿಯನ್ನು ಕೂಡ ತನಿಖೆ ಮಾಡುವಂಥ, ವಶಕ್ಕೆ ಪಡೆಯುವಂಥ ಅಧಿಕಾರ ಕೂಡ ನೀಡಲಾಗಿದೆ" ಎಂದು ಈ ವಿಶೇಷ ಅಧಿಕಾರದ ಬಗ್ಗೆ ಹಿರಿಯ ಅಧಿಕಾರಿ ವಿವರಿಸಿದ್ದಾರೆ.

ಗೃಹ ಇಲಾಖೆ ಆದೇಶದ ಅನ್ವಯ, ಕರೆಗಳು ಅಥವಾ ಇಮೇಲ್ ಮಾತ್ರವಲ್ಲ, ಕಂಪ್ಯೂಟರ್ ನಲ್ಲಿ ಕಂಡುಬರುವ ಯಾವ ದತ್ತಾಂಶವನ್ನಾದರೂ ಪರೀಕ್ಷಿಸಬಹುದು. ಇದರ ಜತೆಗೆ ಆ ಉಪಕರಣವನ್ನು ವಶಕ್ಕೆ ಪಡೆಯುವ ಅಧಿಕಾರ ಕೂಡ ತನಿಖಾ ಸಂಸ್ಥೆಗಳಿಗೆ ನೀಡಲಾಗಿದೆ.

English summary
Investigating agencies will have more sweeping powers to intercept and monitor information on computer devices after a new home ministry order signed by Home Secretary Rajiv Gauba. Ten central agencies have been equipped with powers of "interception, monitoring and decryption of any information generated, transmitted, received or stored in any computer".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X