ದೆಹಲಿಯಲ್ಲಿ ಪ್ರತಿ ನಾಲ್ಕರಲ್ಲಿ ಒಬ್ಬರಿಗೆ ಕೊರೊನಾ ಸೋಂಕು:ಸೆರೋ

ನವದೆಹಲಿ, ನವೆಂಬರ್ 12: ನವದೆಹಲಿಯಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ಶುರುವಾಗಿದೆ.
ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಸೆರೋ ಸಮೀಕ್ಷೆಯ ವರದಿಯಲ್ಲಿ ತಿಳಿದುಬಂದಿದೆ.

ದೆಹಲಿಯಲ್ಲಿ ನಿತ್ಯ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಪರೀಕ್ಷೆ ನಡೆಸಿದ ಕೇವಲ 25ರಷ್ಟು ಮಂದಿಯಲ್ಲಿ ಮಾತ್ರ ಪ್ರತಿಕಾಯಗಳು ಪತ್ತೆಯಾಗಿವೆ.

ಯಾವುದೇ ಮನೆಯನ್ನು ಕೊರೊನಾ ಸೋಂಕು ಪ್ರವೇಶಿಸಿಲ್ಲ ಎನ್ನುವ ಮನೆಗಳೇ ಇಲ್ಲ, ಯಾವ ಮನೆಯನ್ನೂ ಬಿಟ್ಟಿಲ್ಲ, ಕೊರೊನಾ ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕ ಮತ್ತಷ್ಟು ಸೋಂಕು ಹೆಚ್ಚಾಗಿದೆ.

1 In 4 Appears To Be Covid Infected, Almost Every Delhi Home Hit

ಮಧ್ಯದಲ್ಲಿ ಸ್ವಲ್ಪ ದಿನಗಳ ಕಾಲ ನಿಯಂತ್ರಣದಲ್ಲಿತ್ತು. ಇದೀಗ ವಾಯುಮಾಲಿನ್ಯವೂ ಹೆಚ್ಚಾಗಿರುವುದರಿಂದ ಉಸಿರಾಟದ ತೊಂದರೆಗಳು ಕೂಡ ಹೆಚ್ಚಾಗುತ್ತಿವೆ.

ರಾಷ್ಟ್ರ ರಾಜಧಾನಿಯಲ್ಲಿ ಕೊವಿಡ್ 19 ಪ್ರಕರಣಗಳು ಏರಿಕೆಯಾಗುತ್ತಿರುವುದರ ಕುರಿತು ದೆಹಲಿ ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ.

ನಗರವು ಶೀಘ್ರ ರಾಷ್ಟ್ರದ ಕೊರೊನಾ ರಾಜಧಾನಿಯಾಗುವ ಸಾಧ್ಯತೆ ಇದೆ.ದೆಹಲಿ ಸರ್ಕಾರವು ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಪಿಡುಗು ನಿಯಂತ್ರಣ ತಪ್ಪಿದೆ ಎಂದು ನ್ಯಾ. ಹಿಮಾ ಕೋಹ್ಲಿ ಮತ್ತು ಸುಬ್ರಹ್ಮಣಿಯಂ ಪ್ರಸಾದ್ ಅವರಿದ್ದ ಪೀಠ ಹೇಳಿದೆ.

ಕೊವಿಡ್ 19 ಪ್ರಕರಣಗಳು ಏರಿಕೆಯಾಗುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಹೆಚ್ಚಿನ ಕೊವಿಡ್ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ದೆಹಲಿ ಸರ್ಕಾರ ಪ್ರತಿಪಾದಿಸುತ್ತಿದೆ.

ಸಮೀಕ್ಷೆಯಲ್ಲಿ ಅಕ್ಟೋಬರ್ 15ರಿಂದ ಅಕ್ಟೋಬರ್ 21ರವರೆಗೆ 15,015ಮಂದಿಯನ್ನು ಪರೀಕ್ಷೆಗೊಳಪಡಿಸಿದೆ. ಅದರಲ್ಲಿ ಬಹಳಷ್ಟು ಮಂದಿ 50 ವರ್ಷಕ್ಕಿಂತ ಹೆಚ್ಚಿನವರಿದ್ದಾರೆ.

Recommended Video

      Donald Trump ನಾನೇ ಅಮೆರಿಕ ಅಧ್ಯಕ್ಷ!! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+