ವಿಡಿಯೋ; ಬಿಜೆಪಿ, ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ಬಿಚ್ಚಿಟ್ಟ ಜಮೀರ್!

ಮೈಸೂರು, ನವೆಂಬರ್ 24; " ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಮ್ಯಾಚ್‌ ಫಿಕ್ಸಿಂಗ್ ಮಾಡಿಕೊಂಡಿದೆ" ಎಂದು ಕಾಂಗ್ರೆಸ್ ನಾಯಕ, ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಟೀಕಿಸಿದರು.

ಬುಧವಾರ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ವಿಧಾನ‌ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಕೇವಲ 7 ಸ್ಥಾನದಲ್ಲಿ ಸ್ಪರ್ಧಿಸಿರುವುದನ್ನು ಗಮನಿಸಿದರೆ, ಜೆಡಿಎಸ್, ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಸಾಧ್ಯತೆ ಇದೆ" ಎಂದರು.

"ಎಲ್ಲಾ 25 ಸ್ಥಾನದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿ ಹಾಕಬೇಕಿತ್ತು. ಆದರೆ ಕೇವಲ 7 ಸ್ಥಾನದಲ್ಲಿ ಸ್ಪರ್ಧೆ ಮಾಡಿರುವುದು ಅನುಮಾನಸ್ಪದವಾಗಿ ಕಾಣುತ್ತಿದೆ. ಅವರಿಗೆ ಅಭ್ಯರ್ಥಿಗಳು ಇಲ್ಲವಾ?, ಅಭ್ಯರ್ಥಿ ಇಲ್ಲದಿದ್ದರೆ ಇಲ್ಲ ಅಂತ ಸ್ಪಷ್ಟಪಡಿಸಲಿ" ಎಂದು ಸವಾಲು ಹಾಕಿದರು.

Zameer Ahmed Khan Comment Against BJP And JDS

"ಬಿಜೆಪಿಗೆ ಲಾಭ ಮಾಡಿಕೊಡಲು ಜೆಡಿಎಸ್ ಈ ರೀತಿ ತಂತ್ರ ಮಾಡಿದೆ ಎಂದು ಅನ್ನಿಸುತ್ತಿದೆ. ಅಲ್ಲದೇ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸಿಂಗಲ್ ಡಿಜಿಟ್ ಪಡೆಯುತ್ತೆ ಜೆಡಿಎಸ್‌ಗೆ ಯಾವಾಗಲೂ ಕಾಂಗ್ರೆಸ್‌ ಟಾರ್ಗೆಟ್ ಆಗಿದ್ದು, ಹಳೇ ಮೈಸೂರು ಭಾಗದಲ್ಲೂ ಕಾಂಗ್ರೆಸ್‌ಗೆ ಒಳ್ಳೆಯ ವಾತಾವರಣವಿದೆ" ಎಂದು ಹೇಳಿದರು.

ನಮ್ಮ ಸಂಬಂಧ ಕೆಡುವುದಿಲ್ಲ; ತಮ್ಮ ಹಾಗೂ ಸಿದ್ದರಾಮಯ್ಯ ನಡುವಿನ ಸಂಬಂಧದ ಕುರಿತು ಪ್ರತಿಕ್ರಿಯೆ ನೀಡಿದ ಜಮೀರ್ ಅಹ್ಮದ್ ಖಾನ್, "ನನ್ನ ಹಾಗೂ ಸಿದ್ದರಾಮಯ್ಯ ಸಂಬಂಧ ಸಾಯುವವರೆಗು ಕೆಡುವುದಿಲ್ಲ, ಕೆಡಲು ಸಾಧ್ಯವೂ ಇಲ್ಲ" ಎಂದರು.

"ಅಂದು ಸಿದ್ದರಾಮಯ್ಯ ಭಾಷಣಕ್ಕೆ ನಮ್ಮ ಬೆಂಬಲಿಗರು ಅಡ್ಡಿ ಮಾಡಿಲ್ಲ. ಸಿದ್ದರಾಮಯ್ಯ ಭಾಷಣ ಮೊಟಕುಗೊಳಿಸಿಲ್ಲ. ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮಕ್ಕೆ ಹೋಗಬೇಕಿದ್ದ ಕಾರಣ 5 ನಿಮಿಷ ಮಾತನಾಡಿ ಹೋಗಿದ್ದಾರೆ. ನನ್ನ ಅನುಪಸ್ಥಿತಿಯಲ್ಲಿ ನನ್ನ ಅಭಿಮಾನಿಗಳು ಜೈಕಾರ ಕೂಗಿದ್ದು ಕಂಡು ಸಿದ್ದರಾಮಯ್ಯ ಖುಷಿಯಾಗಿದ್ದು, ಈ ಬಗ್ಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಸಿದ್ದರಾಮಯ್ಯ ಈ ರೀತಿ ಹೊಟ್ಟೆ ಕಿಚ್ಚುಪಡುವ ಮನುಷ್ಯ ಅಲ್ಲ" ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರದ ಬಗ್ಗೆ ಮಾತನಾಡಿದ ಅವರು, "ಸಿಎಂ ನೆಪಮಾತ್ರಕ್ಕೆ ನಗರ ಪ್ರದಕ್ಷಿಣೆ ಮಾಡಿದ್ದಾರೆ ಹೊರತು, ಜನರ ಸಂಕಷ್ಟ ಕೇಳಿಲ್ಲ. ನೆರೆಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ಘೋಷಣೆ ಮಾಡಿಲ್ಲ. ನಿನ್ನೆ ಸಿಎಂ ನೆಪ‌ಮಾತ್ರಕ್ಕೆ ಕೆಲವು ರಸ್ತೆಗೆ ಹೋಗಿ ಬಂದಿದ್ದಾರೆ. ಇದರಿಂದ ಯಾವ ಪ್ರಯೋಜನ ಇಲ್ಲ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+