• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದೆಂದಿಗಿಂತಲೂ ರಂಗೇರಲಿದೆ ಯುವ ದಸರಾ: ಯಾರೆಲ್ಲಾ ಬರ್ತಾರೆ ಗೊತ್ತಾ?

|

ಮೈಸೂರು, ಸೆಪ್ಟೆಂಬರ್.26 : ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಯುವ ದಸರಾ ಹಿಂದೆಂದಿಗಿಂತಲೂ ಬಹಳ ರಂಗೇರಲಿದೆ. ವಿಶ್ವವಿಖ್ಯಾತ ಸಂಗೀತ ನಿರ್ದೇಶಕ, ಗಾಯಕ ಎ.ಆರ್.ರೆಹಮಾನ್ ಯುವ ದಸರಾ ವೇದಿಕೆಯಲ್ಲಿ ವಿಜೃಂಭಿಸಲಿದ್ದಾರೆ.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಯುವದಸರಾ ಸೆ.12ರಿಂದ 17 ರವರೆಗೆ ನಡೆಯಲಿದ್ದು, ಎ.ಆರ್. ರೆಹಮಾನ್ ಅಥವಾ ಅರ್ಜಿತ್ ಸಿಂಗ್ , ಸೋನು ನಿಗಮ್, ಅರ್ಮಾನ್ ಮಲ್ಲಿಕ್ ಅವರ ತಂಡ ಯುವ ಸಂಗೀತ ಪ್ರೇಮಿಗಳಿಗಾಗಿ ಅಬ್ಬರದ ನಾದ ಲೋಕವನ್ನು ಸೃಷ್ಟಿಸಲಿದ್ದಾರೆ. ಜತೆಗೆ ರಷ್ಯಾ ಕಲಾವಿದರ ನೃತ್ಯವೂ ಯುವ ಸಮೂಹವನ್ನು ರಂಜಿಸಲಿದೆ.

ಅಕ್ಟೋಬರ್.14ರಂದು ಓಪನ್ ಸ್ಟ್ರೀಟ್ ಫೆಸ್ಟಿವಲ್: ವಿಶೇಷತೆಗಳು ಏನು?

ದಸರಾ ವೇಳೆ ಯುವಸಮೂಹವನ್ನು ಸೆಳೆಯಬಲ್ಲ ಪ್ರಮುಖ ಕಾರ್ಯಕ್ರಮ ಎಂದರೆ ಯುವ ದಸರಾ' ಮಾತ್ರ ಎಂಬ ಮಾತಿದೆ. ಹಲವು ವರ್ಷಗಳಲ್ಲಿ ಯುವ ದಸರಾಗೆ ದೇಶದ ಖ್ಯಾತ ಕಲಾವಿದರನ್ನು ಕರೆಯಿಸುವ ಮೂಲಕ ಯುವ ಸಮೂಹವನ್ನು ದಸರಾ ಸಮಿತಿ ರೋಮಾಂಚನಗೊಳಿಸುತ್ತಿದೆ. ಈ ಬಾರಿ ಇನ್ನಷ್ಟು ರಂಗುಗೊಳಿಸಲಿದೆ.

ಈ ಬಾರಿ ಕೂಡ ದೇಶದ ನಾನಾ ಭಾಗಗಳಿಂದ ಖ್ಯಾತ ಸಂಗಿತಗಾರರು, ನಿರ್ದೇಶಕರು, ಪಾಪ್ ಗಾಯಕರು ದಸರಾ ಹಬ್ಬದಲ್ಲಿ ಭಾಗವಹಿಸುವ ಮೂಲಕ ಯುವ ಸಮೂಹವನ್ನು ಸೆಳೆಯಲಿದ್ದಾರೆ. ಯುವ ಸಂಭ್ರಮದಿಂದ ಆಯ್ಕೆಯಾದ ಉತ್ತಮ ತಂಡಗಳು ಪ್ರತಿ ದಿನ ಸಂಜೆ 6ರಿಂದ 7ರವರೆಗೆ ಕಾರ್ಯಕ್ರಮ ನೀಡುತ್ತವೆ.

ಬಳಿಕ ರಾತ್ರಿ 10.30ರವರೆಗೂ ಯುವ ದಸರಾ ಕಾರ್ಯಕ್ರಮಗಳು ನಡೆಯುತ್ತವೆ. ಜತೆಗೆ ರಾಜ್ಯದ ಪಖ್ಯಾತ ಕಲಾವಿದರೂ ಯುವ ದಸರಾದಲ್ಲಿ ಗಾನಸುಧೆ ಹರಿಸಲಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ, ನಟಿಯರಾದ ರಾಗಿಣಿ, ಹರಿಪ್ರಿಯ ಯುವ ದಸರಾಗೆ ಆಗಮಿಸುವರು.

ದಸರಾ ಉದ್ಘಾಟನೆಯಂದೇ ಚಲನಚಿತ್ರೋತ್ಸವ: ಈ ಸಲದ ವಿಶೇಷವೇನು?

ನಟ ಸುದೀಪ್ ಮತ್ತಿತರ ಹೆಸರಾಂತ ನಟರನ್ನು ಕರೆತರಲು ಯುವ ದಸರಾ ಸಮಿತಿ ಚಿಂತನೆ ನಡೆಸಿದೆ. ಅ.12ರಂದು ಉದ್ಘಾಟನೆಯೊಂದಿಗೆ ಚಂದನ್ ಶೆಟ್ಟಿ ಹಾಗೂ ತಂಡದ ಕಾರ್ಯಕ್ರಮವಿರಲಿದೆ. ಸೆ.13ರಂದು ಅಂತಾರಾಷ್ಟ್ರೀಯ ಖ್ಯಾತಿಯ ಎ.ಆರ್.ರೆಹಮಾನ್ ಅವರಿಂದ ಕಾರ್ಯಕಮ ಏರ್ಪಡಿಸಲು ಚಿಂತನೆ ನಡೆದಿದೆ.

ಅಂತಿಮವಾಗಿ ರೆಹಮಾನ್ ಅಥವಾ ಅರ್ಜಿತ್ ಸಿಂಗ್ ಅವರಲ್ಲಿ ಒಬ್ಬರು ಕಾರ್ಯಕ್ರಮ ನೀಡಲಿದ್ದಾರೆ. ಅ.14ರಂದು ಅರ್ಮಾನ್ ಮಲ್ಲಿಕ್, 15ರಂದು ಕೋಕ್ ಸ್ಟುಡಿಯೋ, ಅ17ರಂದು ಸೋನು ನಿಗಮ್ ಸಂಗೀತ ಸಂಜೆ ನಡೆಯಲಿದೆ. ಅ.16ರಂದು ರಾಜ್ಯದ ಖ್ಯಾತ ಕಲಾವಿದರ ತಂಡ ಕಾರ್ಯಕ್ರಮ ನಡೆಸಿಕೊಡಲಿದೆ.

ಈ ಬಾರಿ ಮೈಸೂರು ದಸರೆ ಕಾಮಗಾರಿಗೆ ಬೇಕು ಬರೋಬ್ಬರಿ 27 ಕೋಟಿ!

ಆದರೆ, ಕಲಾವಿದರ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ ಎಂದು ತಿಳಿದುಬಂದಿದೆ.

English summary
Yuva Dasara will be much bigger than ever before. Yuva Dasara will be held from 12th to 17th of September at Maharaja's college grounds, Music director and singer AR Rahman will be on the Yuva Dasara stage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X