ಎಣ್ಣೆ ಏಟಿನಲ್ಲಿ ಮಹಿಳಾ ಪೊಲೀಸ್ ಕೈ ಎಳೆದಾಡಿದವನಿಗೆ ಗೂಸಾ
ಮೈಸೂರು, ಜೂನ್ 23 : ಕೆ.ಆರ್. ನಗರದ ಚುಂಚನಕಟ್ಟೆ ಜಲಪಾತದ ಬಳಿ ಸಾರ್ವಜನಿಕರ ಕಾವಲಿಗೆ ತೆರಳಿದ್ದ ಮಹಿಳಾ ಅರಣ್ಯ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಪುಂಡನಿಗೆ ಸಾರ್ವಜನಿಕರು ಹಾಗೂ ಸಿಬ್ಬಂದಿ ಗೂಸಾ ನೀಡಿದ ಘಟನೆ ನಡೆದಿದೆ.
ಗಾಂಜಾ ಮತ್ತು ಮದ್ಯದ ಅಮಲಿನಲ್ಲಿ ಅನುಚಿತವಾಗಿ ವರ್ತಿಸಿದ ಪುಂಡ ಯುವಕನಿಗೆ ಅರಣ್ಯ ಇಲಾಖೆ ಮಹಿಳಾ ಸಿಬ್ಬಂದಿ ನೀಡಿದ ಸಕತ್ ಗೂಸಾದ ವಿಡಿಯೋ ಈಗ ವೈರಲ್ ಆಗಿದೆ. ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಬಳಿ ಈ ಘಟನೆ ನಡೆದಿದೆ.
ಅರಣ್ಯ ಇಲಾಖೆ ಮಹಿಳಾ ಸಿಬ್ಬಂದಿ ಚಂದನಾ ಎಂಬುವವರ ಜೊತೆ ಅಸಭ್ಯವಾಗಿ ವರ್ತಿಸಿದವನು ಸಾಲೆಕೊಪ್ಪಲು ಗ್ರಾಮದ ಸುನೀಲ್ ಎಂದು ಗೊತ್ತಾಗಿದೆ. ಕಂಠಪೂರ್ತಿ ಕುಡಿದಿದ್ದ ಸುನೀಲ್ ಮಹಿಳಾ ಸಿಬ್ಬಂದಿ ಕೈ ಹಿಡಿದು ಎಳೆದಾಡಿದ್ದಾನೆ.

ಸುನೀಲ್ ಅಸಭ್ಯ ವರ್ತನೆ ಕಂಡು ಕುಪಿತರಾದ ಸಿಬ್ಬಂದಿ ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ಆತನನ್ನು ಪೊಲೀಸರು ಬೈಕಿನಲ್ಲಿ ಹತ್ತಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಕೆ.ಆರ್.ನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications