ಮೊಬೈಲ್‌ ಕಿತ್ತುಕೊಂಡ ಗಂಡ; ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

ಮೈಸೂರು, ಅಕ್ಟೋಬರ್ 17: ಮೊಬೈಲ್ ಕಿತ್ತುಕೊಂಡ ಪತಿಯ ವರ್ತನೆಗೆ ನೊಂದ ಮಹಿಳೆ, ತನ್ನ ಮಕ್ಕಳನ್ನು ಕೊಂದು ತಾನೂ ನೇಣಿಗೆ ಶರಣಾದ ದಾರುಣ ಘಟನೆ ಗಾಯತ್ರಿ ಪುರಂನಲ್ಲಿ ಇಂದು ನಡೆದಿದೆ.

ಖಾಸಗಿ ಕಂಪೆನಿಯ ಡಿಪ್ಲೊಮಾ ಎಂಜಿನಿಯರ್‌ ಮುಜಾಮಿಲ್ ಎಂಬಾತ ಸೂಫಿಯಾಳನ್ನು ಮದುವೆಯಾಗಿದ್ದನು. ಇವರಿಗೆ 3 ವರ್ಷದ ಮುನೇಜಾ ಮತ್ತು 1 ವರ್ಷದ ಇನಯಾ ಎಂಬ ಇಬ್ಬರು ಮಕ್ಕಳಿದ್ದರು.

ಸೂಫಿಯಾ ಅತಿಯಾಗಿ ಮೊಬೈಲ್ ಬಳಸುತ್ತಿದ್ದಳು. ಇದಕ್ಕೆ ಪತಿ ಮುಜಾಮಿಲ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದನು. ಇದೇ ವಿಚಾರವಾಗಿ ಪತಿ-ಪತ್ನಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಎರಡು ದಿನದ ಹಿಂದೆಯೂ ಮುಜಾಮಿಲ್ ಪತ್ನಿಯಿಂದ ಮೊಬೈಲ್ ಕಿತ್ತುಕೊಂಡಿದ್ದನು. ಮತ್ತೆ ಈ ಬಗ್ಗೆ ಇವರಿಬ್ಬರ ನಡುವೆ ಜಗಳ ಅತಿರೇಕಕ್ಕೆ ಹೋಗಿತ್ತು. ಇಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸೂಫಿಯಾ ತನ್ನ ಇಬ್ಬರು ಮಕ್ಕಳನ್ನು ಕೊಂದು, ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

Mysuru: Woman Killed Her Children And Committed Suicide

ಈ ಸಂಬಂಧ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+