ಸೆಲ್ಫಿ ಹುಚ್ಚು: ನದಿಯಲ್ಲಿ ಮುಳುಗಿ ಮಹಿಳೆ ಸಾವು
ಮೈಸೂರು, ಮೇ 08: ಕಪಿಲಾ ನದಿಯ ದಡದಲ್ಲಿ ಮೊಬೈಲ್ ಮೂಲಕ ಸೆಲ್ಫಿ ಪೋಟೋ ತೆಗೆದುಕೊಳ್ಳಲು ಯತ್ನಿಸಿದ ಮಹಿಳೆ ನದಿಯೊಳಗೆ ಮುಳುಗಿ ಸಾವನ್ನಪ್ಪಿರುವ ಘಟನೆ ನಂಜನಗೂಡಿನ ಕಪಿಲಾ ನದಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಕವಿತಾ ಗಿರೀಶ (38) ಎಂದು ಗುರುತಿಸಲಾಗಿದ್ದು ಚಾಮರಾಜನಗರ ಜಿಲ್ಲೆಯ ನಂಜದೇವನಪುರದ ನಿವಾಸಿಯಾಗಿದ್ದಾರೆ.

ಕವಿತಾ ಅವರ ಗಂಡನಾದ ಗಿರೀಶ ಹಾಗೂ ತನ್ನ ಮಗಳೊಂದಿಗೆ ಪೂಜೆಗಾಗಿ ಕಪಿಲಾ ನದಿಯ ಹತ್ತಿರದ ದೇವಸ್ಥಾನಕ್ಕೆ ಬಂದಿದ್ದರು. ಆದರೆ, ಕವಿತಾ ನದಿ ಬಳಿ ಪೋಟೋ ಬೇಕೆಂದು ಸೆಲ್ಫಿ ತೆಗೆದುಕೊಳ್ಳುಲು ಪ್ರಯತ್ನಿಸಿದಾಗ ನದಿಗೆ ಜಾರಿ ಮುಳುಗಿದರು. ಬಳಿಕ ನೀರಿನ ರಭಸಕ್ಕೆ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ರಕ್ಷಣಾ ಕಾರ್ಯಚರಣೆಗೆ ಧಾವಿಸಿದ ಭದ್ರತಾ ಸಿಬ್ಬಂದಿಗಳು ಕಾರ್ಯಚರಣೆ ನಡಿಸಿ ಕವಿತಾ ಅವರ ಮೃತ ಶವವನ್ನು ಪತ್ತೆ ಹಚ್ಚಿದ್ದಾರೆ. ಶವವನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು ಈ ಪ್ರಕರಣ ಕುರಿತು ಸ್ಥಳೀಯ ಹುಲ್ಲಹಳ್ಳಿ ಪೋಲಿಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications