ರಜೆ ದಿನಗಳಲ್ಲಿ ಮೈಸೂರು ಮೃಗಾಲಯ ಸ್ವಲ್ಪ ದುಬಾರಿ

ಮೈಸೂರು, ಜೂ. 26 : ವಾರದ ರಜೆ ದಿನಗಳಂದು ಮೈಸೂರು ಜಯಚಾಮರಾಜೇಂದ್ರ ಮೃಗಾಲಯಕ್ಕೆ ಹೋಗುವ ಜನರಿಗೆ ಇದು ಕಹಿ ಸುದ್ದಿ. ಮೃಗಾಲಯ ಅಭಿವೃದ್ಧಿ ಪ್ರಾಧಿಕಾರ ವಾರದ ರಜೆ ದಿನಗಳಾದ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜೆಗಳದಿನದಂದು ಮೃಗಾಲಯದ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿದೆ. ಜುಲೈ 1ರಿಂದ ಈ ಪರಿಷ್ಕೃತ ದರ ಜಾರಿಗೆ ಬರಲಿದೆ.

ಮೈಸೂರು ಮೃಗಾಲಯ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಕೆಲವು ದಿನಗಳ ಹಿಂದೆ ನಡೆದ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಾರಂಜಿ ಕೆರೆ ಮತ್ತು ಮೃಗಾಲಯದ ಪ್ರವೇಶ ಶುಲ್ಕವನ್ನು ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜೆ ದಿನಗಳಲ್ಲಿ ಏರಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದೆ.

Mysore

ಸಿಬ್ಬಂದಿ ವೇತನ, ಪ್ರಾಣಿಗಳ ಆಹಾರ, ನಿರ್ವಹಣೆ, ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಪ್ರವೇಶ ಶುಲ್ಕವನ್ನು ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದೆ. ರಜಾದಿನಗಳಲ್ಲಿ ಹೆಚ್ಚು ಜನರು ಆಗಮಿಸುವುದರಿಂದ ಆ ದಿನಗಳ ಶುಲ್ಕವನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. [ಮೈಸೂರು ಮೃಗಾಲಯಕ್ಕೆ ನಾಲ್ಕು ಹೊಸ ಅತಿಥಿಗಳು]

ವಾರದ ರಜಾ ದಿನ ಮತ್ತು ಸಾರ್ವತ್ರಿಕ ರಜಾ ದಿನಗಳನ್ನು ಹೊರತು ಪಡಿಸಿದರೆ, ಉಳಿದ ದಿನಗಳ ಪ್ರವೇಶ ಶುಲ್ಕದಲ್ಲಿ ಯಾವುದೇ ರೀತಿಯ ಏರಿಕೆ ಮಾಡಿಲ್ಲ. ಜುಲೈ 1ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ ಎಂದು ಮೃಗಾಲಯದ ಪ್ರಕಟಣೆಯಲ್ಲಿ ತಿಳಿಸಿದೆ. [ಮೈಸೂರು ಮೃಗಾಲಯದ ವೆಬ್ ಸೈಟ್ ]

ಎಷ್ಟು ಹೆಚ್ಚಳ : ಮೈಸೂರು ಮೃಗಾಲಯದಲ್ಲಿ ವಯಸ್ಕರಿಗೆ 50 ರೂ. ಇದ್ದ ದರವನ್ನು 60ಕ್ಕೆ ಏರಿಕೆ ಮಾಡಲಾಗಿದ್ದು, ಮಕ್ಕಳಿಗೆ 20 ರೂ. ಇದ್ದ ದರವನ್ನು 30 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಇದು ರಜಾದಿನಗಳಿಗೆ ಮಾತ್ರ ಅನ್ವಯವಾಗಲಿದೆ. ಇನ್ನು ಕಾರಂಜಿ ಕೆರೆಗೆ ಪ್ರವೇಶ ಪಡೆಯಲು ವಯಸ್ಕರು 25 ಮತ್ತು ಮಕ್ಕಳು 15 ರೂ. ಶುಲ್ಕ ಪಾವತಿ ಮಾಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+