ಖಾರಿಫ್ ಬೆಳೆಗಳಿಗೆ ಕಬಿನಿ ಜಲಾಶಯದಿಂದ ನಾಲೆಗಳಿಗೆ ನೀರು

ಮೈಸೂರು, ಸೆಪ್ಟೆಂಬರ್ 5: ಕಬಿನಿ ಜಲಾಶಯದಿಂದ ಕಟ್ಟು ನೀರಿನ ಪದ್ಧತಿಯ ಆಧಾರದಲ್ಲಿ ಖಾರೀಫ್ 2020ರ ಬೆಳೆಗಳಿಗಾಗಿ ಮುಖ್ಯ ನಾಲೆಗಳಿಗೆ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ, ಅಕ್ಟೋಬರ್ 19 ರಿಂದ ನವೆಂಬರ್ 8ರವರೆಗೆ ಹಾಗೂ ನವೆಂಬರ್ 20 ರಿಂದ ಡಿಸೆಂಬರ್ 06 ರವರೆಗೆ ನೀರನ್ನು ಹರಿಸಲಾಗುವುದು.

ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆಗಳ ಒಟ್ಟು 108060 ಎಕರೆಗಳ ಅಚ್ಚುಕಟ್ಟು ಪ್ರದೇಶಗಳಿಗೆ ಖಾರೀಫ್ ಬೆಳೆಯ ಅವಧಿಯಲ್ಲಿ ಕಬಿನಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹಾಗೂ ಕಬಿನಿ ಜಲಾಶಯದಲ್ಲಿ ಸಂಗ್ರಹವಾಗುವ ನೀರಿನ ಲಭ್ಯತೆ ಮೇರೆಗೆ ನಾಲೆಗಳಲ್ಲಿ ನೀರನ್ನು ಹರಿಸಲಾಗುವುದು ಎಂದು ತಿಳಿದುಬಂದಿದೆ.

ಕಬಿನಿ ಜಲಾಶಯದ ವ್ಯಾಪ್ತಿಗೆ ಬರುವ ಅಚ್ಚುಕಟ್ಟುದಾರರು ನೀರಾವರಿ ಅಧಿಕಾರಿಗಳೊಡನೆ ಸಹಕರಿಸಿ ನಾಲೆಯ ನೀರಿನ ಅವಲಂಬಿತ ಬೆಳೆಗಳನ್ನು ಬೆಳೆಯದೆ, ಮಳೆ ಅವಲಂಬಿತ ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯಲು ಸೂಚಿಸಲಾಗಿದೆ.

Mysuru: Water Releasing From Kabini Reservoir To Channels From September 17

ಒಂದು ವೇಳೆ ಪ್ರಕಟಣೆ ಉಲ್ಲಂಘಿಸಿ ನೀರಾವರಿ ಅವಲಂಬಿತ ಬೆಳೆಗಳನ್ನು ಬೆಳೆದಲ್ಲಿ ನೀರು ಹರಿಸುವುದರ ವಿಷಯವಾಗಿ ನೀರಾವರಿ ಇಲಾಖೆ ಯಾವುದೇ ರೀತಿಯಲ್ಲಿ ಜವಾಬ್ದಾರರಲ್ಲ ಎಂದು ಕಬಿನಿ ಹಾಗೂ ವರುಣಾ ನಾಲಾ ವೃತ್ತ ಅಧೀಕ್ಷಕ ಇಂಜಿನಿಯರ್ ಮತ್ತು ಕಬಿನಿ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+