ಇದನ್ನು ತಿಳಿಯಿರಿ; ಯಾರು ವಾಹನ ತಪಾಸಣೆ ಮಾಡಬಹುದು?

ಮೈಸೂರು, ಜನವರಿ 18; ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುವ ಕುರಿತು ಜನರು ಯಾವಾಗಲೂ ಆರೋಪ ಮಾಡುತ್ತಾರೆ. ದಂಡ ಕಟ್ಟುವ ವಿಚಾರದಲ್ಲಿ ಮಾತಿನ ಚಕಮಕಿ ಮಾಮೂಲು. ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತ ನಡೆದು ಮೃತಪಟ್ಟಿರುವ ಘಟನೆಗಳು ನಡೆದಿವೆ.

ಯಾರು ವಾಹನಗಳ ತಪಾಸಣೆ ಮಾಡಬಹುದು ಎಂಬುದು ಹಲವರ ಪ್ರಶ್ನೆ. ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾತನಾಡಿರುವ ವಿಡಿಯೋ ತುಣುಕು ಈಗ ವೈರಲ್ ಆಗಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ. ಚಂದ್ರಗುಪ್ತ ಯಾರು ವಾಹನ ತಪಾಸಣೆ ಮಾಡಬಹುದುದ ಎಂದು ಮಾತನಾಡಿದ್ದಾರೆ.

Traffic Police Constable Cant Impose Fine For Traffic Rules Violation

"ಕಾನ್ಸ್‌ಟೇಬಲ್ (ಪೇದೆ)ಗಳಿಗೆ ವಾಹನ ತಪಾಸಣೆ ಮಾಡುವ ಅಧಿಕಾರ ಇಲ್ಲ. ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಮತ್ತು ಇತರ ಮೇಲಿನ ದರ್ಜೆ ಅಧಿಕಾರಿಗಳಿಗೆ ಮಾತ್ರ ವಾಹನ ತಪಾಸಣೆ ಮಾಡಿ, ದಂಡ ಹಾಕುವ, ದಂಡವನ್ನು ಸ್ವೀಕಾರ ಮಾಡುವ ಅಧಿಕಾರವಿದೆ" ಎಂದು ಡಾ. ಚಂದ್ರಗುಪ್ತ ಹೇಳಿದ್ದಾರೆ.

"ಅಲ್ಲಿ ಕಾನ್ಸ್‌ಟೇಬಲ್ ನಿಂತಿದ್ದಾರೆ. ಯೂನಿಫಾರ್ಮ್ ಸಹ ಇರುವುದಿಲ್ಲ. ವಾಹನ ತಡೆದು ದಂಡ ಹಾಕುತ್ತಾರೆ ಎಂದು ನಮಗೆ ಸಹ ಕರೆಗಳು ಬರುತ್ತವೆ. ಕಾನ್ಸ್‌ಟೇಬಲ್‌ಗಳಿಗೆ ದಂಡ ಹಾಕುವ ಅಧಿಕಾರವಿಲ್ಲ. ಹಾಗೆ ಮಾಡಿದರೆ ದೂರು ಕೊಡಿ ನಾವು ಅವರನ್ನು ಅಮಾನತಿನಲ್ಲಿಡುತ್ತೇವೆ" ಎಂದರು.

"ಕಾನ್ಸ್‌ಟೇಬಲ್‌ಗಳು ದಂಡ ಹಾಕಿದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಅಧಿಕಾರ ದುರುಪಯೋಗ ಆಗುತ್ತದೆ ಎಂಬ ಕಾರಣಕ್ಕೆ ಎಲ್ಲರಿಗೂ ಈ ಅಧಿಕಾರ ನೀಡಿಲ್ಲ. ಇಂತಹ ಘಟನೆಗಳು ನಡೆದಾಗ ಜನರು ನಮ್ಮ ಗಮನಕ್ಕೆ ತಂದರೆ ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಡಾ. ಚಂದ್ರಗುಪ್ತ ಭರವಸೆ ನೀಡಿದ್ದಾರೆ.

ಯಾವಾಗ ವಾಹನ ತಪಾಸಣೆ ಮಾಡಬೇಕು?; ಡಾ. ಚಂದ್ರಗುಪ್ತ ಯಾವಾಗ ವಾಹನ ತಪಾಸಣೆ ಮಾಡಬೇಕು ಎಂದು ಸಹ ಹೇಳಿದ್ದಾರೆ. ಪೀಕ್ ಅವರ್ ಹೊರತುಪಡಿಸಿ ಬೇರೆ ಸಮಯದಲ್ಲಿ ವಾಹನ ತಪಾಸಣೆ ಮಾಡಬೇಕು. ಬೆಳಗ್ಗೆ 10.30 ರಿಂದ 11.30 ಹಾಗೂ ಮಧ್ಯಾಹ್ನ 3 ರಿಂದ 5ರ ತನಕ ತಪಾಸಣೆ ಮಾಡಬೇಕು.

ಅಪಘಾತ ವಲಯಗಳಿದ್ದರೆ ಮಾತ್ರ ಪೂರ್ಣ ಪ್ರಮಾಣ ತನಿಖೆ ಮಾಡಬೇಕು. ರಿಂಗ್ ರಸ್ತೆಯಲ್ಲಿ ವಾಹನಗಳ ವೇಗದ, ಡ್ರಿಂಕ್‌ & ಡ್ರೈವ್ ತಪಾಸಣೆಗಳನ್ನು ಮಾತ್ರ ನಡೆಸಬೇಕು. ಹೆಲ್ಮೆಟ್ ಇಲ್ಲ, ವಿಮೆ, ಆರ್‌ಸಿ ಬುಕ್‌ ತಪಾಸಣೆಗಳನ್ನು ಅಲ್ಲಿ ಮಾಡುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+