• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಈ ಬಾರಿ ಮೈಸೂರಿನಲ್ಲಿ ಯೋಗ ವಿಶ್ವ ದಾಖಲೆಗೆ ಪ್ರಯತ್ನವಿಲ್ಲ'

|

ಮೈಸೂರು, ಜೂನ್ 4: ಈ ಬಾರಿ ಅಂತರಾಷ್ಟ್ರೀಯ ಯೋಗ ದಿನವನ್ನು ನಗರದಲ್ಲಿ ಯಶಸ್ವಿಯಾಗಿ ಆಚರಣೆ ಮಾಡಲಾಗುವುದು. ಆದರೆ ಗಿನ್ನಿಸ್ ವಿಶ್ವದಾಖಲೆಗೆ ಪ್ರಯತ್ನ ಮಾಡಲಾಗುವುದಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ತಿಳಿಸಿದರು.

ಈ ಕುರಿತಾಗಿ ಜಿಲ್ಲಾಡಳಿತ ಕಚೇರಿಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಕೇಂದ್ರ ಸಚಿವರನ್ನು ಯೋಗ ದಿನದಂದು ಕರೆತರುವ ಕೆಲಸ ಮಾಡಲಾಗುವುದು. ಕೆಲವು ಸಂಘಟನೆಗಳು ವಿಶ್ವ ದಾಖಲೆಗೆ ಪ್ರಯತ್ನ ಮಾಡಬೇಕು ಎಂದು ಕೇಳಿವೆ. ಆದರೆ ಈ ಬಾರಿ ಅಗತ್ಯ ತಯಾರಿಯಿಲ್ಲ. ಈ ಹಿನ್ನೆಲೆ ಗಿನ್ನಿಸ್ ದಾಖಲೆಗೆ ಪ್ರಯತ್ನಿಸುವುದಿಲ್ಲ. ಮುಂದಿನ ವರ್ಷ ಸೂಕ್ತ ತರಬೇತಿ ನೀಡಿ ನಂತರ ಪ್ರಯತ್ನ ಮಾಡಲಾಗುತ್ತದೆ. ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರು, ಸಂಘ ಸಂಸ್ಥೆಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ವಿವರಿಸಿದರು.

ಸಾಂಸ್ಕೃತಿಕ ನಗರಿ ಮೈಸೂರಿಗೆ ಈ ಬಾರಿಯೂ 'ಯೋಗ' ಇಲ್ಲ!

ಕಳೆದ ಬಾರಿಯೂ ಯಶಸ್ವಿಯಾಗಿ ಯೋಗದಿನವನ್ನು ರೇಸ್ ಕೋರ್ಸ್ ಆಯೋಜನೆ ಮಾಡಲಾಗಿತ್ತು. ಅದೇ ರೀತಿ ಈ ಬಾರಿಯೂ ಆಯೋಜಿಸಲಾಗುತ್ತದೆ. ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಯೋಗ ಪಟುಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜೂನ್ 21 ರಂದು ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆ ತಂದವರು ನರೇಂದ್ರ ಮೋದಿಯವರು. 2015 ರಿಂದ ಸತತವಾಗಿ ಯೋಗ ದಿನಾಚರಣೆ ಮಾಡಿಕೊಂಡು ಬರಲಾಗುತ್ತಿದೆ. 2015ರಲ್ಲಿ ಮೈಸೂರಿನ ಅರಮನೆ ಹತ್ತಿರ 10 ಸಾವಿರ ಜನರನ್ನು ಸೇರಿಸಿ ಯೋಗ ಆಚರಣೆ ಆರಂಭವಾಯಿತು. 2017ರಲ್ಲಿ 50 ಸಾವಿರ ಜನರನ್ನ ಸೇರಿಸಿ ಗಿನ್ನಿಸ್ ದಾಖಲೆ ಮಾಡಲಾಯಿತು. ಕಳೆದ ಬಾರಿ 60 ಸಾವಿರ ಜನರನ್ನ ಸೇರಿಸಲಾಗಿತ್ತು. ಈ ಬಾರಿ 1 ಲಕ್ಷ ಜನರನ್ನ ಸೇರಿಸಲಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಪೂರಕ ತಯಾರಿ ಮಾಡಲಾಗುತ್ತಿದೆ‌ ಎಂದು ತಿಳಿಸಿದರು.

English summary
Minister G T Devegowda conducted a meeting on World yoga day preparations. He said that, this time Mysuru district administration wont try for Yoga Guinness record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X