ಅರಮನೆಯಲ್ಲಿ ಯದುವೀರ್ ದಂಪತಿ ವಿವಾಹ ವಾರ್ಷಿಕೋತ್ಸವ ಸಂಭ್ರಮ
Recommended Video
ಅರಮನೆಯಲ್ಲಿ ಯದುವೀರ್ ದಂಪತಿಗೆ ಸಂಭ್ರಮ | Oneindia Kannada
ಮೈಸೂರು, ಜೂನ್ 28: ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಸ್ಥಾನದ ರಾಜವಂಶಸ್ಥೆ ತ್ರಿಷಿಕಾ ಅವರ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವ ಗುರುವಾರ ನಡೆಯಿತು.
2016ರಲ್ಲಿ ಮೈಸೂರಿನಲ್ಲಿ ಯದುವೀರ್ ತ್ರಿಷಿಕಾ ಮದುವೆಯಾಗಿತ್ತು. ಮೈಸೂರಿನ ಮಯೂರಿ ಕಲ್ಯಾಣ ಮಂಟಪದಲ್ಲಿ ತ್ರಿಷಿಕಾರವರನ್ನ ಯದುವೀರ್ ಕೈಹಿಡಿದಿದ್ದರು. 1976ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿವಾಹ ನಡೆದ 4 ದಶಕಗಳ ಬಳಿಕ ಅರಮನೆ ಆವರಣದಲ್ಲಿ ತ್ರಿಶಿಕಾ ಹಾಗೂ ಯದುವೀರ್ ವಿವಾಹ ಮಹೋತ್ಸವ ನಡೆದಿತ್ತು.

2016ರ ಜೂನ್ 27ರಂದು ನಡೆದ ಕಾರ್ಯಕ್ರಮದಲ್ಲಿ ಇಡೀ ರಾಜಮನೆತನವೇ ಭಾಗಿಯಾಗಿ ಸಂಭ್ರಮಿಸಿತ್ತು. ಈ ಬಾರಿ ಮೂರನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಯದುವೀರ್ ದಂಪತಿಗೆ ಪುತ್ರ ಆದ್ಯವೀರ್ ಜೊತೆಯಾಗಿರುವುದು ಮತ್ತಷ್ಟು ಸಂತಸ ಹೆಚ್ಚಿಸಿದೆ.












Click it and Unblock the Notifications