ಎಚ್ಚರಿಕೆ! ಐಷಾರಾಮಿ ಕಾರುಗಳ ಲೋಗೊ ಮೇಲೆ ಈ ಕಳ್ಳರ ಕಣ್ಣು

ಮೈಸೂರು, ಅಕ್ಟೋಬರ್ 21: ಐಷಾರಾಮಿ ಕಾರುಗಳನ್ನು ಕದಿಯಲು ಹೊಂಚು ಹಾಕುವವರ ಕುರಿತು ಕೇಳಿರುತ್ತೇವೆ. ಆದರೆ ಈ ಕಳ್ಳರು ಕಾರುಗಳನ್ನಲ್ಲ, ಕಾರುಗಳ ಲೋಗೊಗಳನ್ನು ಕದಿಯುತ್ತಾರೆ.

ಅಂಥ ಕಳ್ಳರ ತಂಡವೊಂದು ಮೈಸೂರಿನಲ್ಲಿ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಿಎನ್ ಮಂಜೇಗೌಡ ಎಂಬುವವರಿಗೆ ಸೇರಿದ ಬಿಎಂಡಬ್ಲ್ಯೂ ಕಾರಿನ ಲೋಗೋ ಎಗರಿಸಿರುವ ಘಟನೆ ಭಾನುವಾರ ಮುಂಜಾನೆ ಶ್ರೀರಾಂಪುರದಲ್ಲಿ ನಡೆದಿದೆ.

ಶ್ರೀರಾಂಪುರ ಬೆಮೆಲ್ ಲೇಔಟಿನ ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಲೋಗೋ ಇಲ್ಲದ್ದನ್ನು ಕಂಡ ಚಾಲಕ ಮಾಲೀಕರಿಗೆ ತಿಳಿಸಿದ್ದಾನೆ. ಸಿಸಿ ಟಿವಿ ಪರಿಶೀಲಿಸಿದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಇಬ್ಬರು ಕಳ್ಳರು ಕಾರಿನ ಲೋಗೋ ಬಿಚ್ಚುತ್ತಿರುವ ದೃಶ್ಯ ಸೆರೆಯಾಗಿದೆ. ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Thieves Stealing Logos Of Luxury Cars In Mysuru

ಲೋಗೊ ಕದಿಯುವ ಪ್ರಕರಣ ಇದೇ ಮೊದಲಲ್ಲ, ಈ ಹಿಂದೆ ಕೂಡ ಬಿಎಂಡಬ್ಲ್ಯು, ಫೋಕ್ಸ್ ವ್ಯಾಗನ್, ಆಡಿ, ಸ್ಕೋಡ, ಮರ್ಸಿಡಿಸ್ ಬೆಂಜ್ ಕಾರುಗಳ ಲೋಗೋ ಕಳುವಾಗಿರುವ ಪ್ರಕರಣಗಳು ವರದಿ ಆಗಿದ್ದವು. ವಾಹನಗಳ ಮಾಲೀಕರು ಇದನ್ನು ಗಭೀರವಾಗಿ ಪರಿಗಣಿಸದೆ ದೂರು ನೀಡುವ ಗೋಜಿಗೇ ಹೋಗುತ್ತಿರಲಿಲ್ಲ. ಹೊಸ ಲೋಗೋ ಒಂದಕ್ಕೆ 7 ರಿಂದ 10 ಸಾವಿರ ರೂಪಾಯಿ ಬೆಲೆ ಇದೆಯಾದರೂ ಕಳ್ಳರು ಇವುಗಳನ್ನು 400-500 ರೂಪಾಯಿಗಳಿಗೆ ಮಾರುತ್ತಿದ್ದಾರೆ ಎಂದು ಪೋಲೀಸ್‌ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+