ಪ್ರೇಮಿಗಳ ದಿನ ಆಚರಿಸದಂತೆ ಕರಪತ್ರ ಹಂಚಿದ ಶ್ರೀರಾಮ ಸೇನೆ

Recommended Video

      ಪ್ರೇಮಿಗಳ ದಿನ ಆಚರಿಸದಂತೆ ಕರಪತ್ರ ಹಂಚಿದ ಶ್ರೀರಾಮ ಸೇನೆ | Oneindia Kannada

      ಮೈಸೂರು, ಫೆಬ್ರವರಿ 14: ಶ್ರೀರಾಮ ಸೇನೆ, ಮೈಸೂರು ಘಟಕದ ವತಿಯಿಂದ ಈ ದಿನಾಚರಣೆ ನಮಗೆ ಬೇಡ ಎಂದು ಜಾಗೃತಿ ಮೂಡಿಸುವ ಕರಪತ್ರ ಹಂಚಲಾಯಿತು.

      ನಗರದ ಜೆಎಲ್ಬಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಮುಂಭಾಗ ಶ್ರೀರಾಮಸೇನೆ ಕಾರ್ಯಕರ್ತರು ವಿದ್ಯಾರ್ಥಿನಿಯರಿಗೆ ಕರಪತ್ರ ಹಂಚುವ ಮೂಲಕ ದೇಶದ ಸಂಸ್ಕೃತಿ ಉಳಿಸಿ ಎಂದು ಮನವಿ ಮಾಡಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಸಂಚಾಲಕ ಸಂಜಯ್, ನಾವು ಪ್ರೀತಿಯನ್ನು ವಿರೋಧಿಸುವುದಿಲ್ಲ. ಆದರೆ ವಿದೇಶಿಯರು ನಿರ್ಧರಿಸಿದ ದಿನಾಂಕದಂದು ಆಚರಿಸಲು ಮುಂದಾದರೆ ಅದು ಪ್ರೇಮಿಗಳ ದಿನವಲ್ಲ. ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾ, ಮಲ್ಟಿನ್ಯಾಷನಲ್ ಕಂಪನಿಗಳ ಆಕ್ರಮಣದ ಮೂಲ ಪ್ರೇಮಿಗಳ ದಿನಾಚರಣೆ. ಈ ಮೂಲಕ ಯುವ ಜನತೆ ಎಚ್ಚರವಹಿಸಬೇಕು ಎಂದರು.

      Sri Rama Sene issued brochure to students

      ಇನ್ನು ಕಾಲೇಜು ಸುತ್ತ ಗೋಡೆಗಳ ಮೇಲೆ ಭಿತ್ತಿ ಪತ್ರವನ್ನು ಅಂಟಿಸಿದರು. ಪ್ರೇಮಿಗಳ ದಿನಾಚರಣೆಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಿ ಕಾಲೇಜಿನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+