Mysuru: ಮೈಸೂರಿನಲ್ಲಿ ಫಾಸ್ಟ್ ಫುಡ್ ಮಾಲೀಕರಿಗೆ ವಿಶೇಷ ತರಬೇತಿ: ಯಾಕೆ?

ಮೈಸೂರು, ಜನವರಿ 14: ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಬೀದಿ ಬದಿಯಲ್ಲಿ ಆಹಾರ ತಯಾರಿಸುವ ಫಾಸ್ಟ್ ಫುಡ್‌ಗಳ ಕೊಡುಗೆಯೂ ಅಪಾರವಾಗಿದೆ. ಇವುಗಳನ್ನು ಉತ್ತೇಜಿಸುವ ಮತ್ತು ಸ್ವಚ್ಛತೆ ಹಾಗೂ ಶುದ್ಧತೆಗೆ ಒತ್ತು ನೀಡಿ ಬೀದಿ ಆಹಾರ ಸಂಸ್ಕೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಕರ್ನಾಟಕ ಪ್ರವಾಸೋದ್ಯಮ ಮತ್ತು ಕೆಎಸ್‌ಟಿಡಿಸಿ ಸಹಯೋಗದಲ್ಲಿ ಬೀದಿ ಬದಿ ಮತ್ತು ಡಾಬಾ ಆಹಾರ ವ್ಯಾಪಾರಿಗಳಿಗೆ ಮೈಸೂರಿನಲ್ಲಿ ವಿಶೇಷ ತರಬೇತಿ ನೀಡಲಾಗಿದೆ.

ಸದ್ಯದ ಪರಿಸ್ಥಿತಿಯನ್ನು ಹೋಟೆಲ್‌ಗಿಂತ ಫಾಸ್ಟ್ ಫುಡ್ ಗಳನ್ನು ಆಶ್ರಯಿಸುವರ ಸಂಖ್ಯೆ ದೊಡ್ಡಮಟ್ಟದಲ್ಲಿವೆ. ಇಲ್ಲಿ ವಿವಿಧ ಬಗೆಯ ತಿಂಡಿ, ಊಟ, ಇನ್ನಿತರ ವಿಶೇಷ ತಿನಿಸುಗಳು ಕೈಗೆಟುಕುವ ದರದಲ್ಲಿ ದೊರೆಯುತ್ತವೆ. ಹೀಗಾಗಿಯೇ ಇಲ್ಲಿ ಗ್ರಾಹಕರು ಸದಾ ತುಂಬಿ ತುಳುಕುತ್ತಿರುತ್ತಾರೆ. ಇವುಗಳನ್ನು ಇನ್ನಷ್ಟು ಆಕರ್ಷಕಗೊಳಿಸಿ ಪ್ರವಾಸಿಗರು ಕೂಡ ಇತ್ತ ಬರುವಂತೆ ಮಾಡುವ ನಿಟ್ಟಿನಲ್ಲಿ ಫಾಸ್ಟ್ ಫುಡ್ ಮಾಲೀಕರಿಗೆ ಒಂದಷ್ಟು ತರಬೇತಿಯೂ ಅಗತ್ಯವಿದ್ದು ಅದನ್ನು ನೀಡುವ ಮೂಲಕ ಇನ್ನಷ್ಟು ಕಾರ್ಯಕ್ಷಮತೆ ಹೆಚ್ಚಿಸುವ ಕೆಲಸವನ್ನು ಮಾಡಲಾಗುತ್ತಿದೆ.

Special Training For Fast Food Owners In MysuruEnhances Street Food Culture

ಸದ್ಯ ಪ್ರವಾಸೋದ್ಯಮ ಇಲಾಖೆ ರಸ್ತೆ ಬದಿಗಳಲ್ಲಿ ಫಾಸ್ಟ್ ಫುಡ್ ನಡೆಸುವ ಮಾಲೀಕರಲ್ಲಿ ಆಹಾರದ ಸುರಕ್ಷತೆ ಮತ್ತು ನೈರ್ಮಲ್ಯತೆಗೆ ಸಂಬಂಧಿಸಿದಂತೆ ಬೀದಿ ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆ, ಪ್ರವಾಸಿಗರೊಂದಿಗೆ ವ್ಯವಹರಿಸುವ ವಿಧಾನ ಮತ್ತು ಉತ್ತಮ ಸೇವೆ ನೀಡುವ ಬಗ್ಗೆ ಅತಿಥಿ ಸತ್ಕಾರದ ಮಾರ್ಗದರ್ಶನ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ಪರಿಸರ ಸ್ನೇಹಿ ಆಚರಣೆಗಳ ಜಾಗೃತಿ ಮತ್ತು ಆಹಾರ ಗುಣಮಟ್ಟ ಕಾಪಾಡುವ ವಿಧಾನಗಳು ಮತ್ತು ನಿಯಮಗಳ ಬಗ್ಗೆ ಕುರಿತು ವಿಶೇಷ ತರಬೇತಿಯನ್ನು ನೀಡುತ್ತಿದೆ.

ಈ ಸಂಬಂಧ ನಡೆದ ವಿಶೇಷ ತರಬೇತಿಯಲ್ಲಿ ಪ್ರವಾಸೋದ್ಯಮದ ಜಂಟಿ ನಿರ್ದೇಶಕರಾದ ಸವಿತಾ ಎಂ.ಕೆ ಅವರು ಮಾತನಾಡಿ , ನಮ್ಮ ಬೀದಿ ಆಹಾರ ಸಂಸ್ಕೃತಿ ಕರ್ನಾಟಕದ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದೆ. ಈ ತರಬೇತಿ ಕಾರ್ಯಕ್ರಮದ ಮೂಲಕ ನಾವು ಪ್ರವಾಸಿಗರಿಗೆ ಸುರಕ್ಷಿತ ಮತ್ತು ನೈರ್ಮಲ್ಯ ವಿವಿಧ ಆಹಾರ ಸೇವೆಯನ್ನು ಖಾತ್ರಿ ಪಡಿಸುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ 48 ಬೀದಿ ಬದಿ ಮತ್ತು ಡಾಬಾ ಆಹಾರ ವ್ಯಾಪಾರಿಗಳು ಲಾಭ ಪಡೆದಿದ್ದಾರೆ. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ವ್ಯಾಪಾರಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದ್ದಾಗಿ ತಿಳಿಸಿದ್ದಾರೆ.

Special Training For Fast Food Owners In MysuruEnhances Street Food Culture

ಒಟ್ಟಾರೆಯಾಗಿ ಮೈಸೂರಿನಲ್ಲಿ ಎರಡು ದಿನಗಳ ಕಾಲ ಫಾಸ್ಟ್ ಫುಡ್ ಮಾಲೀಕರಿಗೆ ತರಬೇತಿ ನೀಡಿರುವುದು ಒಂದೊಳ್ಳೆಯ ಬೆಳವಣಿಗೆಯಾಗಿದ್ದು, ಶುಚಿತ್ವಕ್ಕೆ ಆದ್ಯತೆ ನೀಡುವಂತೆ ನೋಡಿಕೊಳ್ಳುವುದು ಮತ್ತು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಕೂಡ ಬಹು ಮುಖ್ಯವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮೈಸೂರಿನಲ್ಲಿ ಫಾಸ್ಟ್ ಫುಡ್‌ಗಳು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+