• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾವಿನ ಸುಗ್ಗಿ ಆರಂಭ : ಇನ್ನೂ ಮೈಸೂರು ಮಾರುಕಟ್ಟೆಗೆ ಲಗ್ಗೆ ಇಡದ ಹಣ್ಣುಗಳ ರಾಜ

|

ಮೈಸೂರು, ಏಪ್ರಿಲ್ 20 : ಮಾವಿನ ಸುಗ್ಗಿ. ಮಾರುಕಟ್ಟೆಯಲ್ಲಿ 'ಹಣ್ಣುಗಳ ರಾಜ'ನದ್ದೇ ದರ್ಬಾರ್. ಬೇಸಿಗೆ ಬಂದು, ಯುಗಾದಿ ಹಬ್ಬ ಕಳೆದರೆ ಸಾಕು ಮಾವಿನ ಸುಗ್ಗಿ ಆರಂಭವಾಗುತ್ತದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಪ್ರಿಲ್ ಮಧ್ಯಭಾಗದಿಂದ ಜೂನ್ ಅಂತ್ಯದವರೆಗೆ ಎಲ್ಲಿ ನೋಡಿದರೂ ರಸಭರಿತ ಮಾವಿನ ಸುವಾಸನೆ. ನಗರದ ಮಾರುಕಟ್ಟೆಗೂ ಮಾವು ಲಗ್ಗೆ ಈಗ ತಾನೇ ಇಟ್ಟಿದೆ. ಈಗ ಆರಂಭ ಕಾಲವಾದ್ದರಿಂದ ಅಷ್ಟಾಗಿ ಪೂರೈಕೆ ಇಲ್ಲ. ಆದರೆ, ತಿಂಗಳು ಕಳೆಯುವುದರ ಒಳಗೆ ಮಾವಿನ ಹವಾ ಜೋರಾಗುತ್ತದೆ.

ಅಕ್ಕರೆಯನ್ನು ನನ್ನ ಬಾಯಿಗೆ ಸುರಿಯುತ್ತಿದ್ದ ಗುಳಂಬದ ಆಯಿ

ಮಾವಿನ ಹಣ್ಣಿಗೆ ಇರುವ ಬೇಡಿಕೆಯೇ ಅಂತಹದ್ದು. ವರ್ಷದಲ್ಲಿ ಕೇವಲ ಎರಡು- ಮೂರು ತಿಂಗಳು ಜನರ ನಾಲಿಗೆ ರುಚಿ ತಣಿಸಿ, ಸಿಹಿವುಣಿಸಿ ಮರೆಯಾಗುತ್ತದೆ. ಮತ್ತೆ ಬರುವುದೇ ವರ್ಷದ ನಂತರ. ಹೀಗಾಗಿ, ಮಾರುಕಟ್ಟೆಗೆ ಭರ್ಜರಿ ಬೇಡಿಕೆಯ ಮೂಟೆ ಹೊತ್ತೇ ಬರುತ್ತದೆ. ಈಗಲೂ ಅಷ್ಟೇ, ಸೇಬಿಗಿಂತಲೂ ಇದರ ಬೆಲೆ ಮುಂದಿದೆ. ಮಾವು ಪ್ರಿಯರಿಗೆ ಬೆಲೆ ಕಹಿಯಾದರೂ ಹಣ್ಣಿನ ರುಚಿ ಸಿಹಿ ನೀಡುತ್ತದೆ.

ಮೈಸೂರು ಜಿಲ್ಲೆಯಲ್ಲಿ ಮಾವಿನ ತೋಟಗಳು ವಿರಳ. ಹೆಚ್ಚು ಭಾಗ ನೀರಾವರಿ ಪ್ರದೇಶವಾದ್ದರಿಂದ ಮಾವು ಬೆಳೆಗಾರರು ಕಡಿಮೆ. ಹೀಗಾಗಿ, ಪ್ರತಿವರ್ಷ ರಾಮನಗರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಯಿಂದ ಬರುತ್ತದೆ. ಆದರೆ, ಈ ಬಾರಿ ಎಲ್ಲ ಕಡೆಯೂ ಫಸಲು ಕಡಿಮೆ. ಹವಾಮಾನದ ವೈಪರೀತ್ಯ ಹಾಗೂ 15-20 ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆ ನೆಲಕಚ್ಚಿದೆ. ಇದು ರೈತರ ಆರ್ಥಿಕ ಪರಿಸ್ಥಿತಿ ಮೇಲಷ್ಟೇ ಅಲ್ಲ.

ಮಾರುಕಟ್ಟೆಗೂ ಹೊಡೆತ ನೀಡಿದೆ. ಇದರಿಂದ ಬೆಲೆ ಗಗನಮುಖಿಯಾಗಿದೆ. ಮಾವಿನ ಕಾಯಿಯ ಹೂವು ಎಳ್ಳು ಅಮಾವಾಸ್ಯೆಗೆ ಎಳ್ಳು ಕಾಳಿನಷ್ಟು, ಭಾರತ ಹುಣ್ಣಿಮೆಗೆ ಬಾರಿ ಕಾಯಿಯಷ್ಟು, ಹೋಳಿ ಹುಣ್ಣಿಮೆ ಸುಮಾರಿಗೆ ಹೋಳಾಗುವಷ್ಟು ಇರುತ್ತದೆ ಎಂಬ ಮಾತಿದೆ.

ಹಬ್ಬಗಳಿಗೆ ತಳಿರುತೋರಣದಿ ಕಳೆತರುವ ಮಾಮರದ ಜೀವಸ್ವರ

ಈ ಮಾತು ಈ ವರ್ಷದ ಮಾವು ಫಸಲಿಗೆ ವಿರುದ್ಧವಾಗಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಿಗೆ ಮಾವಿನ ಚಿಗುರು ಕಾಣಿಸಿಕೊಂಡು, ಜನವರಿಯಲ್ಲಿ ಕಾಯಿಗಳು ಇರುತ್ತಿದ್ದವು. ಯುಗಾದಿ ವೇಳೆಗೆ ಮಾರುಕಟ್ಟೆ ಪ್ರವೇಶಿಸಬೇಕಿತ್ತು. ಆದರೆ, ಯುಗಾದಿ ಕಳೆದು ದಿನಗಳು ಉರುಳಿತ್ತದ್ದರೂ ಪೂರೈಕೆ ಅಷ್ಟಕಷ್ಟೇ ಎಂಬಂತಿದೆ.

ಪೂರ್ಣಪ್ರಮಾಣದಲ್ಲಿ ಮಾವು ಮಾರುಕಟ್ಟೆಗೆ ಬಂದಿಲ್ಲ. ರಸಪುರಿ ಹಾಗೂ ಬಾದಾಮಿ ಹಾಗೂ ಬಂಗೇನಪಲ್ಲಿ ಹಣ್ಣುಗಳನ್ನು ಮಾತ್ರ ಸವಿಯಬಹುದು. ಈ ತಿಂಗಳಾಂತ್ಯಕ್ಕೆ ಎಲ್ಲ ತಳಿಗಳು ಲಗ್ಗೆ ಇಡುತ್ತವೆ. ನಗರದಲ್ಲಿರುವ ಬಹುತೇಕ ಹಾಪ್ ಕಾಮ್ಸ್ ಮಳಿಗೆಯಲ್ಲೂ ಮಾವು ಇಲ್ಲ. ನಮಗೆ ನಿನ್ನೂ ಮಾವು ಸಿಕ್ಕಿಲ್ಲ.

ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ನೆರವಿಗೆ ಸರ್ಕಾರ, ಬೆಂಬಲ ಬೆಲೆ ಹೆಚ್ಚಳ

ರೈತ ಸಂಘದವರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತೇವೆ. ಇಲ್ಲಿ ದಲ್ಲಾಳಿ ಹಾವಳಿ ಇಲ್ಲ. ಇದರಿಂದ ರೈತರಿಗೂ ಲಾಭ ಗ್ರಾಹಕರಿಗೂ ಖುಷಿ. ಕೆಲವು ಹಣ್ಣಿನ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ. ಈಗಿನ ದರ ಕೇಳಿದರೆ ಜನರು ಅದರ ಹತ್ತಿರವೇ ಹೋಗುವುದಿಲ್ಲ.

ಕೆ.ಜಿ ಮಾವು 150ರಿಂದ 170ರವರೆಗೂ ಮಾರಾಟವಾಗುತ್ತಿದೆ. ಈಗ ಅದರ ಸೀಜನ್ ಆರಂಭವಾಗಿರುವುದರಿಂದ ಇಷ್ಟು ದರ ಇದೆ. ಈ ತಿಂಗಳು ಕಳೆದರೆ ಬೆಲೆ ಒಂದು ಹಂತಕ್ಕೆ ಬರುತ್ತದೆ. ಈ ಭಾರಿ ಫಸಲು ಕಡಿಮೆ ಇರುವುದು ಬೆಲೆ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ಮಾವಿನ ವ್ಯಾಪಾರಿ ಮೂರ್ತಿ.

ನಗರದ ವಿವಿಧೆಡೆ ಸುತ್ತಾಡಿ ಸೈಕೆಲ್ ಮೇಲೆ ಮಾವು ಮಾರಾಟ ಮಾಡುವ ಮಾರಸ್ವಾಮಿಯದ್ದೂ ಇದೇ ಮಾತು. ಈಗಿರುವ ದರ ಕೇಳಿಯೇ ಗ್ರಾಹಕರು ಬೆಚ್ಚಿಬೀಳುತ್ತಾರೆ. ಖರೀದಿಸಲು ಮುಂದೆ ಬರುವುದಿಲ್ಲ. ಇನ್ನೂ 15-20 ದಿನ ಕಳೆದರೆ ಬೆಲೆ ಕಡಿಮೆಯಾಗುತ್ತದೆ ಎಂಬ ಚಿಂತನೆ ಅವರದ್ದು.

ಇದರಿಂದ ಬೀದಿಸುತ್ತಿ ಮಾವು ಮಾರಾಟ ಮಾಡುವುದು ಕಷ್ಟವಾಗಿದೆ. ಯಾರೋ ಅಲ್ಲೊಬ್ಬರು, ಇಲ್ಲೊ ಬ್ಬರು ಖರೀದಿಸುತ್ತಾರೆ. ಆದರೆ, ಈ ಬಾರಿ ಪೂರ್ಣ ಪ್ರಮಾಣದಲ್ಲಿ ಫಸಲು ಇಲ್ಲದಿರುವುದರಿಂದ ದರದಲ್ಲಿ ಹೆಚ್ಚೇನೂ ವ್ಯಾತ್ಯಾಸವಾಗುವುದಿಲ್ಲ. ಈಗ ತೋತಾಪುರಿ ಕಾಯಿಗೇ ಕೆ.ಜಿಗೆ 60 ರೂ ದರ ಇದೆ. ಇನ್ನೂ ಇತರೆ ತಳಿಯ ಬೆಲೆ ಕೇಳುವಂತೆಯೇ ಇಲ್ಲ ಎಂದು ಹೇಳುತ್ತಾರೆ

ಮಾವಿಗೆ ಈಗಿರುವ ದರ ಕೇಳಿದರೆ ಬೆಚ್ಚಿಬೀಳುವಂತಾಗುತ್ತದೆ. ಕೆ.ಜಿಗೆ 150ರಿಂದ 200 ರೂವರೆಗೂ ಇದೆ. ಆದರೂ, ವರ್ಷದಲ್ಲಿ ಎರಡು ಮೂರು ತಿಂಗಳು ಫಸಲಿನ ಮಾವಿನ ರುಚಿ ಸವಿಯಲೇ ಬೇಕು ಎನ್ನುತ್ತಾರೆ ಗ್ರಾಹಕ ಬಲರಾಮ್.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
So many Mangoes breeds are not came in Mysuru APMC market. Due to temperature variation Mangoes price are so high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more