Monsoon Rain: ಕರ್ನಾಟಕ - ಭಾರತದಲ್ಲಿ ಈ ಬಾರಿ ಅವಧಿ ಪೂರ್ವ ಮುಂಗಾರು ಮಳೆ, ಭರ್ಜರಿ ಗುಡ್‌ನ್ಯೂಸ್

Monsoon Rain: ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಭಯಂಕ ಬಿಸಿಲು ಇದೆ. ಬಿಸಿಲಿನ ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲ್ಲೇ ಇದೆ. ಅಲ್ಲದೆ ಈ ಬಾರಿ ಮಳೆ ಕೊರತೆಯೂ ಇರಲಿದೆ ಎನ್ನುವ ಆತಂಕವೂ ಇತ್ತು. ಇದೀಗ ಭಾರತದಲ್ಲಿ ಮಳೆ ಆಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ.

2026ರ ಏಪ್ರಿಲ್ ಅಂತ್ಯವಾಗುತ್ತಿರುವಾಗಲೇ ಭಾರತದ ಹೆಚ್ಚಿನ ಪ್ರದೇಶಗಳಲ್ಲಿ ತೀವ್ರವಾದ ಶಾಖದ ಅಲೆ ಇದೆ. ಭಾರತದ ಉತ್ತರ, ಮಧ್ಯ ಮತ್ತು ಪೂರ್ವ ಭಾರತದ ಕೆಲವು ಭಾಗಗಳಲ್ಲಿ ತಾಪಮಾನವು ಶೇ. 43ರಿಂದ 44 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ತಾಪಮಾನ ಏರಿಕೆಯಾಗುವ ಬಗ್ಗೆ ಭಾರತ ಹವಾಮಾನ ಇಲಾಖೆ ಎಚ್ಚರಿಕೆ ಸಹ ನೀಡಿದೆ. ಅಲ್ಲದೆ ಇದೇ ಸಂದರ್ಭದಲ್ಲಿ ಮಳೆಯ ಬಗ್ಗೆಯೂ ಅಪ್ಡೇಟ್ಸ್‌ ಕೊಟ್ಟಿದೆ.

Rain Good News

ಇದೀಗ ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್ಕಾಸ್ಟ್ಸ್ (ECMWF)ನ ಪ್ರಕಾರ, ನೈಋತ್ಯ ಮಾನ್ಸೂನ್ ಮೊದಲೇ ಪ್ರಾರಂಭವಾಗಬಹುದು. ಮೇ ಅಂತ್ಯದ ವೇಳೆಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಮಳೆ ಆಗಲಿದೆ. 2025ರಲ್ಲಿ ಮುನ್ಸೂಚನೆಯ ಪ್ರಕಾರ, ಕೇರಳದಲ್ಲಿ ಇದೇ ರೀತಿಯ ಮಳೆಯ ಆರಂಭವನ್ನು ಸೂಚಿಸಿದ್ದವು. ಮೇ 27 ಮತ್ತು 29ರ ನಡುವೆ ಮಳೆ ಆಗಲಿದೆ ಎಂದು ಹೇಳಲಾಗಿತ್ತು. ಆದಾಗ್ಯೂ, ಮಾನ್ಸೂನ್ ನಿರೀಕ್ಷೆಗಿಂತ ಮುಂಚೆಯೇ ಬಂದಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಭಾಗದಲ್ಲೂ ಮಳೆ ಅವಧಿ ಪೂರ್ವವಾಗಿ ಬರಲಿದೆ ಎಂದು ಹೇಳಲಾಗಿದೆ.

Rain Good News: ಮುಂಗಾರು ಮಳೆ ಭಾರತದಲ್ಲಿ ಮೊದಲು ಎಲ್ಲಿ ಆಗಲಿದೆ

ಮೇ 18 ಮತ್ತು 25 ರ ನಡುವೆ ಮಾನ್ಸೂನ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಲುಪುವ ಸಾಧ್ಯತೆಯಿದೆ. ಪ್ರತಿ ವರ್ಷ ಹಿಂದೂ ಮಹಾಸಾಗರದಿಂದ ತೇವಾಂಶವುಳ್ಳ ಗಾಳಿಯು ಭಾರತಕ್ಕೆ ಮಳೆ ತರುತ್ತದೆ. ಇದೀಗ ದಕ್ಷಿಣ ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಮೇಲೆ ನೈಋತ್ಯದಿಂದ ಬಲವಾದ ಗಾಳಿ ಬೀಸುತ್ತಿದೆ. ಈ ಗಾಳಿಗಳು ಭಾರೀ ಮಳೆಯನ್ನು ಉಂಟುಮಾಡುವ ನಿರೀಕ್ಷೆಯಿದೆ, ಆ ವಾರದಲ್ಲಿ ದ್ವೀಪಗಳಲ್ಲಿ ಸಾಮಾನ್ಯಕ್ಕಿಂತ 30 ರಿಂದ 60 ಮಿಮೀ ಹೆಚ್ಚು ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಅಂಡಮಾನ್‌ನ ಉತ್ತರಕ್ಕೆ ಉಷ್ಣವಲಯದ ವ್ಯವಸ್ಥೆ ರೂಪುಗೊಳ್ಳುವ ಪ್ರಮಾಣವು ಶೇ 20ರಿಂದ ಶೇ40ರಷ್ಟು ಸಾಧ್ಯತೆಯೂ ಇದೆ. ಮುಂದಿನ ವಾರ ಮೇ 25 ರಿಂದ ಜೂನ್ 1 ರವರೆಗೆ, ಮಾನ್ಸೂನ್ ಮಳೆ ಪಶ್ಚಿಮ ಮತ್ತು ಉತ್ತರ ಭಾಗದಲ್ಲಿ ಆಗುವ ಸಾಧ್ಯತೆ ಇದೆ. ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಇದು ಕೇರಳ ಮತ್ತು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ತರಬಹುದು ಎಂದ ನಿರೀಕ್ಷಿಸಲಾಗಿದೆ. ಇದರಿಂದ ಕರ್ನಾಟಕದಲ್ಲೂ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+