ಮುದುಕನಿಗ್ಯಾಕಪ್ಪ ಮತ್ತೊಂದು ಮದುವೆ ? ಚಿಮ್ಮನಕಟ್ಟಿಗೆ ಸಿದ್ದು ಚಿನಕುರಳಿ
Recommended Video

ಮೈಸೂರು, ಜೂನ್ 13 : "ಮುದುಕನಿಗ್ಯಾಕಪ್ಪಾ ಮತ್ತೊಂದು ಮದುವೆ ? ನನಗೆ 71 ವರ್ಷ ವಯಸ್ಸು. ಯಾರಾದರೂ ಹುಡುಗಿಯರು ಕೇಳಿಸಿಕೊಂಡರೆ ತಪ್ಪು ತಿಳ್ಕೋತಾರೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.
ಮೈಸೂರಿನ ಜೆಪಿ ಪ್ಯಾಲೇಸ್ ನಲ್ಲಿ ಸ್ನೇಹಿತರೊಂದಿಗೆ ಬುಧವಾರ ಇಡ್ಲಿ -ವಡೆ ಉಪಾಹಾರ ಸೇವಿಸುವ ವೇಳೆ ಈ ಘಟನೆ ನಡೆಯಿತು. ಮಂಗಳವಾರ ವರುಣಾ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುವ ಸಭೆಯಲ್ಲಿ ಮಾಜಿ ಶಾಸಕ ಚಿಮ್ಮನಕಟ್ಟಿ ಮಾತನಾಡುತ್ತ, ಸಿದ್ದರಾಮಯ್ಯನವರೇ ನಿಮಗೆ 71 ವರ್ಷ ಅಲ್ಲ, 21 ವರ್ಷ. ನಿಮಗೆ ಮತ್ತೊಂದು ಮದುವೆ ಮಾಡುವ ಉತ್ಸಾಹದಲ್ಲಿದ್ದೇವೆ. ನೀವು ಹೃದಯದಿಂದ ಸದಾ ಯುವಕರು ಎಂದು ಹೇಳಿದ್ದರು.
ಚಿಮ್ಮನಕಟ್ಟಿ ಮಾತಿಗೆ ಬುಧವಾರ ಹೋಟೆಲ್ ನಲ್ಲಿ ತಿಂಡಿ ಸೇವಿಸುತ್ತಾ ಮಾತನಾಡಿದ ಸಿದ್ದು, ಮುದುಕನಿಗೇಕೆ ಮತ್ತೊಂದು ಮದುವೆ? ನನಗೆ 71 ವರ್ಷ ಆಗಿದೆ. ಯಾರಾದರೂ ಹುಡುಗಿಯರು ಕೇಳಿಸಿಕೊಂಡರೆ ತಪ್ಪು ತಿಳಿದುಕೊಳ್ಳುತ್ತಾರೆ. ಹೃದಯದಲ್ಲಿ ಮಾತ್ರ ನಾನು ಯಂಗ್ ಎಂದು ಪ್ರತಿಕ್ರಿಯಿಸಿದರು.

"ನಾನು ಈ ಹಿಂದೆ ಪಾಪ್ಯುಲರ್ ಮೇಷ್ಟ್ರಾಗಿದ್ದೆ. ರಾಜಕೀಯಕ್ಕಿಂತ ಖುಷಿ ಕೊಟ್ಟಿದ್ದು ಶಿಕ್ಷಕ ವೃತ್ತಿ. ಮೂರು ವರ್ಷಗಳ ಕಾಲ ಶಿಕ್ಷಕ ವೃತ್ತಿ ನಿರ್ವಹಿಸಿದ್ದೆ. ವಿದ್ಯಾರ್ಥಿಗಳಿಗೆ ಪಾಠ ಮಾಡೋದು ಅತ್ಯಂತ ಸುಂದರ ಕೆಲಸ. ಈಗಲೂ ವಿದ್ಯಾರ್ಥಿಗಳಿಗೆ ಪಾಠ ಮಾಡೋದು ಇಷ್ಟ. ಆದರೆ ವಯಸ್ಸಾಗಿ, 71 ವರ್ಷಕ್ಕೆ ಕಾಲಿಡುತ್ತಿದ್ದೇನೆ. ಈಗ ನನಗ್ಯಾರಪ್ಪಾ ಅವಕಾಶ ಕೊಡುತ್ತಾರೆ?" ಎಂದು ಹೇಳಿದರು.











Click it and Unblock the Notifications