ನಾನು ಕಾಂಗ್ರೆಸ್‌ನಲ್ಲಿ ಏಕಾಂಗಿಯಲ್ಲ ಎಂದ ಸಿದ್ದರಾಮಯ್ಯ

ಮೈಸೂರು, ನವೆಂಬರ್ 20: ನಾನು ಕಾಂಗ್ರೆಸ್‌ನಲ್ಲಿ ಏಕಾಂಗಿಯಲ್ಲ, ಕಾಂಗ್ರೆಸ್ ಪಕ್ಷ ಯಾತ್ತೂ ಯಾರನ್ನೂ ಏಕಾಂಗಿ ಮಾಡಲ್ಲ ಎಂದು ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಯಾವತ್ತೂ ಯಾರನ್ನೂ ಏಕಾಂಗಿಯನ್ನಾಗಿ ಮಾಡುವುದಿಲ್ಲ, ಆದರೆ ಯಡಿಯೂರಪ್ಪ ಅವರಿಗೆ ನಾನು ಏಕಾಂಗಿಯಾಗಬೇಕು ಎಂದೆನಿಸಿರಬಹುದು ಎಂದು ಖಾರವಾಗಿ ನುಡಿದಿದ್ದಾರೆ.

ಎಂದಿಗೂ ಯಡಿಯೂರಪ್ಪ ಅವರ ಆಸೆ ಈಡೇರುವುದಿಲ್ಲ, ಬಿಜೆಪಿಯವರಿಗೂ ನಾನೇ ಟಾರ್ಗೆಟ್, ಜೆಡಿಎಸ್ ಅವರಿಗೂ ನಾನೇ ಟಾರ್ಗೆಟ್, ಅನರ್ಹರಿಗೂ ನಾನೇ ಟಾರ್ಗೆಟ್, ಇದನ್ನು ನೋಡಿದರೆ ಎಲ್ಲರಿಗೂ ನನ್ನ ಮೇಲೆ ಭಯ ಇದ್ದಂತೆ ಕಾಣುತ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Siddaramaiah Says I Am Not Alone In Congress

ಇವರೆಲ್ಲರೂ ಹತಾಶರಾಗಿರುವ ಕಾರಣ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್‌ನಲ್ಲಿ ಏಕಾಂಗಿಯಲ್ಲ ಎಂದು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.

ಇಂದಿನಿಂದ ನಾನು ಚುನಾವಣಾ ಪ್ರಚಾರ ಆರಂಭಿಸುತ್ತಿದ್ದೇನೆ. ನಾವು 15 ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ, 12 ಕ್ಷೇತ್ರ ನಮ್ಮ ಪಕ್ಷದವರೇ ಇದ್ದರು. ಅವರು ಪಕ್ಷಕ್ಕೆ ದ್ರೋಹ ಮಾಡಿ ಹೋದರು.ಮಹಾರಾಷ್ಟ್ರ ಹರಿಯಾಣದಲ್ಲಿ ಪಕ್ಷಾಂತರಿಗಳಿಗೆ ಪಾಠ ಕಲಿಸಿದ್ದಾರೆ.ಇಲ್ಲೂ ಪಕ್ಷಾಂತರ ಸಹಿಸಲ್ಲ ಜನ ಅವರನ್ನು ಸೋಲಿಸುತ್ತಾರೆ.

ಅವರೆಲ್ಲಾ ಅನರ್ಹ ಶಾಸಕ ಹಣೆಪಟ್ಟಿ ಹೊತ್ತಿದ್ದಾರೆ.ಅವರು ಅನರ್ಹರೇ ಇದು ನಾನು ಹೇಳಿದ್ದಲ್ಲ.ಸುಪ್ರೀಂಕೋರ್ಟ್ ಹೇಳಿದೆ ಅವರು ಅನರ್ಹರು ಅಂತಾ.ಸುಪ್ರೀಂಕೋರ್ಟ್ ಸ್ಪೀಕರ್ ಆದೇಶ ಎತ್ತಿ ಹಿಡಿದಿದೆ. ಅನರ್ಹರನ್ನು ರಾಜ್ಯದ ಜನ ಸೋಲಿಸುತ್ತಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+