29 ಕ್ಷೇತ್ರದಲ್ಲಿ ಜೆಡಿಎಸ್- ಬಿಜೆಪಿ ಜತೆ ಒಳಒಪ್ಪಂದ; ಸಿದ್ದರಾಮಯ್ಯ ತಿರುಗೇಟು

ಮೈಸೂರು, ಡಿಸೆಂಬರ್ 19: ಕುಮಾರಸ್ವಾಮಿ ತಮ್ಮ ವಿರುದ್ಧ ಮಾಡಿರುವ ಒಳ ಒಪ್ಪಂದದ ಆರೋಪ ವಿಚಾರಕ್ಕೆ ತಿರುಗೇಟು ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಗೋಪಾಲಯ್ಯನಿಗೆ ಟಿಕೆಟ್ ಕೊಟ್ಟವರು ಯಾರು? ಅವರು ಹೇಳಿದ್ದಕ್ಕೆಲ್ಲ ಉತ್ತರ ಕೊಡೋಕೆ ಆಗಲ್ಲ. ಜೆಡಿಎಸ್ ಬಿಜೆಪಿಯವರು 29 ಕ್ಷೇತ್ರಗಳಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಅವರು ಮಾಡಿಕೊಂಡಿರಲಿಲ್ಲ. ನಿನ್ನೆ ನಾನು ಅದನ್ನೇ ಹೇಳಿದ್ದು ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ನವರು ನನ್ನನ್ನು ಸೋಲಿಸಿದರು ಅಂತ ಹೇಳಿದ್ದೆ. ನಾನು ಹೇಳಿದ್ದು ಚಾಮುಂಡೇಶ್ವರಿ ಕ್ಷೇತ್ರದ ಸ್ಥಳೀಯ ಮುಖಂಡರ ಬಗ್ಗೆ. ನಾನು ಯಾರ ಹೆಸರನ್ನೂ ಹೇಳಿಲ್ಲ. ಸ್ಥಳೀಯರ ಬಗ್ಗೆ ಅಷ್ಟೆ ಹೇಳಿದ್ದು ಎಂದರು. ನಾನು ಜನತಾ ಪರಿವಾರದಲ್ಲಿದ್ದಾಗ 60 ಸೀಟು ಗೆಲ್ಲುತ್ತಿದ್ದೆವು. ಈಗ ಅವರು 29 ಸೀಟಿಗೆ ಬಂದಿದ್ದಾರೆ. ಜೆ.ಡಿ.ಎಸ್ ಬಗ್ಗೆ ನಾನು ಹೇಳುವುದು ಇಷ್ಟೆ ಎಂದರು.

ಸಾರಾ ಮಹೇಶ್ ಪ್ರತಿಕ್ರಿಯೆ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ಅಧಿಕಾರ ನಡೆಸುತ್ತಿದ್ದರು. ಶಾಸಕರಿಗೆ ಸ್ಪಂದಿಸಲಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಶಾಸಕ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ.

Siddaramaiah Reaction To HD Kumaraswamy Allegation Of Betrayal

"ಕುಮಾರಸ್ವಾಮಿ ಹೋಟೆಲ್ ಗೆ ಹೋಗಲು ಸಿದ್ದರಾಮಯ್ಯನೇ ಕಾರಣ. ಸಿದ್ದರಾಮಯ್ಯ ಕಾವೇರಿ ನಿವಾಸ ಖಾಲಿ ಮಾಡಿರಲಿಲ್ಲ. ಹೀಗಾಗಿ ಕುಮಾರಸ್ವಾಮಿ ಹೋಟೆಲ್ ನಲ್ಲೇ ಉಳಿಯಬೇಕಾಯಿತು" ಎಂದಿದ್ದಾರೆ. ಕುಮಾರಸ್ವಾಮಿ ಅವರಿಗೆ ಜೆ.ಪಿ ನಗರದ ನಿವಾಸ ದೂರವಿತ್ತು. ಹೀಗಾಗಿ ಹೋಟೆಲ್ ಗೆ ಹೋದರು. ಯಾಕೆ ಎಚ್ ಡಿಕೆ ವಿಧಾನಸೌಧಕ್ಕೆ ಬರ್ತಿರಲಿಲ್ವಾ? ವಿಶ್ರಾಂತಿ ಪಡೆಯಲು ಹೋಟೆಲ್ ಗೆ ಹೋಗೋದು ತಪ್ಪಾ? ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+