ಮೈಸೂರು ಮೃಗಾಲಯದ ಪ್ರವೇಶ ಶುಲ್ಕ ಏರಿಕೆ

ಮೈಸೂರು, ಜೂನ್ 25: ಶತಮಾನದ ಇತಿಹಾಸವಿರುವ ಮೈಸೂರು ಮೃಗಾಲಯದ ಪ್ರವೇಶ ದರವನ್ನು ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿಗೆ ಏರಿಸಲಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಿರ್ವಹಣೆ ಖರ್ಚು, ಪ್ರಾಣಿಗಳ ಆರೈಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದರೊಂದಿಗೆ ನಿರ್ವಹಣೆಯ ವೆಚ್ಚವನ್ನು ಸರಿದೂಗಿಸಲು ಮುಂದಾಗಿದೆ. ಈ ಕಾರಣಕ್ಕಾಗಿ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದ ಪ್ರವೇಶ ಶುಲ್ಕವನ್ನು ಇದೇ ಜುಲೈ 1ರಿಂದಲೇ ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಹೊಸ ಪ್ರಾಣಿಗಳನ್ನು ತರುವುದರೊಂದಿಗೆ ಮೃಗಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ನಡೆಸುವ ಸಲುವಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದೆ. ಇದಕ್ಕಾಗಿ ಮೃಗಾಲಯದ ಪ್ರವೇಶ ಶುಲ್ಕವನ್ನು ಹೆಚ್ಚಿಸಿದೆ. ವಾರದ ದಿನಗಳಲ್ಲಿ ವಯಸ್ಕರಿಗೆ 60 ರಿಂದ 80ರೂಗಳಿಗೆ, ಮಕ್ಕಳಿಗೆ (5ರಿಂದ 12 ವರ್ಷ) 30ರಿಂದ 40 ರೂಪಾಯಿಗೆ ಮತ್ತು ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿ ವಯಸ್ಕರಿಗೆ 80ರಿಂದ 100 ರೂಪಾಯಿಗೆ, ಮಕ್ಕಳಿಗೆ 40ರಿಂದ 50 ರೂಪಾಯಿಗೆ ಶುಲ್ಕವನ್ನು ಏರಿಸಲಾಗಿದೆ. ಒಟ್ಟಾರೆ 20 ರೂಪಾಯಿ ಹೆಚ್ಚಳ ಮಾಡಿದ್ದು, ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಲಿದೆ.

ಸಿಬ್ಬಂದಿ, ಕಾರ್ಮಿಕರ ವೇತನ ಹೆಚ್ಚಳ, ಪ್ರಾಣಿಗಳ ಆಹಾರ ಪದಾರ್ಥಗಳ ಬೆಲೆ ಹೆ‌ಚ್ಚಳ, ಅಭಿವೃದ್ಧಿ ಕಾಮಗಾರಿಗಳು, ಹೊಸ ಪ್ರಾಣಿಗಳನ್ನು ತರುವುದು, ನಿರ್ವಹಣಾ ವೆಚ್ಚಗಳ ಹೊರೆ... ಈ ಕಾರಣಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

second time Hike in Mysuru zoo entry fees

ಮೃಗಾಲಯಕ್ಕೆ ಬೇರೆಡೆಯಿಂದ ಅನುದಾನ ಬರುವುದಿಲ್ಲ. ನಮ್ಮ ಖರ್ಚನ್ನು ನಾವೇ ಭರಿಸಬೇಕು ಎನ್ನುತ್ತಾರೆ ಮೃಗಾಲಯದ ಅಧಿಕಾರಿಗಳು. 2018ರ ಜುಲೈ 1ರಿಂದ ಪ್ರವೇಶ ಶುಲ್ಕದಲ್ಲಿ 10ರೂ ಹೆಚ್ಚಿಸಲಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ಒಟ್ಟು 40 ರೂಪಾಯಿ ಹೆಚ್ಚಳವಾದಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+