• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಸಂಕ್ರಾಂತಿ ಸಂಭ್ರಮ

By ಮೈಸೂರು ಪ್ರತಿನಿಧಿ
|

ಮೈಸೂರು, ಜನವರಿ 15: ಕನ್ನಡ ನಟ, ಅಭಿಮಾನಿಗಳ ಪಾಲಿನ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತೋಟದ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಜೋರಾಗಿತ್ತು. ದರ್ಶನ್ ಸಹ ತೋಟಕ್ಕೆ ಆಗಮಿಸಿ, ಹಸುಗಳಿಗೆ ಪೂಜೆ ಮಾಡಿ, ಸಂಭ್ರಮದಲ್ಲಿ ಪಾಲ್ಗೊಂಡರು.

ಸಂಕ್ರಾಂತಿ ಹಿನ್ನೆಲೆಯಲ್ಲಿ ಗುರುವಾರ ಮೈಸೂರಿನ ತಿ.ನರಸೀಪುರ ರಸ್ತೆಯಲ್ಲಿರುವ 'ತೂಗುದೀಪ ಫಾರ್ಮ್ ಹೌಸ್‌'ಗೆ ದರ್ಶನ್ ಆಗಮಿಸಿದ್ದರು. ತಮ್ಮ ಸ್ನೇಹಿತರು ಹಾಗೂ ಆಪ್ತರೊಂದಿಗೆ ಬೆರೆತು ತೋಟದ ಮನೆಯಲ್ಲಿ ಹಬ್ಬವನ್ನು ಆಚರಣೆ ಮಾಡಿದರು.

ಜಾನಪದ ಲೋಕದ ಸಂಕ್ರಾಂತಿ ಸಂಭ್ರಮ ಕಸಿದ ಕೊರೊನಾ ಭೀತಿ

ಪ್ರಾಣಿಗಳ ಅಭಿಮಾನಿಯಾಗಿರುವ ದರ್ಶನ್ ತೋಟದ ಮನೆಯಲ್ಲಿ ಅನೇಕ ಪ್ರಾಣಿಗಳನ್ನು ಸಾಕಿದ್ದಾರೆ. ಹಸುಗಳಿಗೆ ಪೂಜೆ ಮಾಡಲಾಯಿತು. ದರ್ಶನ್ ತಮ್ಮ ನೆಚ್ಚಿನ ಕುದುರೆಯನ್ನು ಕಿಚ್ಚು ಹಾಯಿಸುವ ಮೂಲಕ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.

ಉತ್ತರಾಯಣ ಪುಣ್ಯಕಾಲ: ತುಂಗಭದ್ರಾ ತಟದಲ್ಲಿ ಮಕರ ಸಂಕ್ರಾಂತಿ ಸಂಭ್ರಮ

ಸಂಕ್ರಾಂತಿ ದಿನ ಗ್ರಾಮೀಣ ಪ್ರದೇಶಗಳಲ್ಲಿ ಹಸುಗಳನ್ನು ಸಿಂಗಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ ಕಿಚ್ಚು(ಬೆಂಕಿ) ಹಾಯಿಸುವುದು ವಾಡಿಕೆಯಾಗಿದೆ. ದರ್ಶನ್ ತೋಟದ ಮನೆಯಲ್ಲಿ ಸಂಪ್ರದಾಯದಂತೆ ಸಂಕ್ರಾಂತಿ ಆಚರಣೆ ಮಾಡಲಾಯಿತು.

ಸಂಕ್ರಾಂತಿ ವಿಶೇಷ: ಉತ್ತರ ಕನ್ನಡದಲ್ಲಿ ಜಾತ್ರೋತ್ಸವಗಳ ಆರಂಭದ ಪುಣ್ಯಕಾಲ

ತೋಟದ ಮನೆಯಲ್ಲಿರುವ ಜಾನುವಾರುಗಳಿಗೆ ಸ್ನಾನ ಮಾಡಿಸಿ, ಪೂಜೆ ಮಾಡಲಾಯಿತು. ಸಂಜೆ ಜಾನುವಾರುಗಳಿಗೆ ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿಯನ್ನು ಆಚರಣೆ ಮಾಡಲಾಯಿತು. ತೋಟದ ಕೆಲಸಗಾರರು ಸಹ ಸಂಭ್ರಮದಿಂದ ಪಾಲ್ಗೊಂಡರು.

ಪ್ರಾಣಿಪ್ರಿಯರಾಗಿರುವ ದರ್ಶನ್‌ಗೆ ಕುದುರೆ ಎಂದರೆ ಬಹಳ ಪ್ರೀತಿ. ತಮ್ಮ ಪ್ರೀತಿಯ ಕುದುರೆಗೆ ದರ್ಶನ್ ಕಿಚ್ಚು ಹಾಯಿಸುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಇದನ್ನು ವಾಟ್ಸಪ್ ಸ್ಟೇಟಸ್‌ನಲ್ಲಿಯೂ ಹಾಕಿಕೊಂಡಿದ್ದಾರೆ.

English summary
Sankranti celebration in Kannada actor, challenging star Darshan farm house in Mysuru, Karnataka. Darshan participated at the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X