ಪ್ರವಾಸೋದ್ಯಮ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರಾ ಯದುವೀರ್?
Recommended Video

ಮೈಸೂರು, ಸೆಪ್ಟೆಂಬರ್ 20 : ಪ್ರವಾಸೋದ್ಯಮ ಇಲಾಖೆಗೆ ಹಳೆ ಮೈಸೂರು ಭಾಗದ ರಾಯಭಾರಿ ಆಗುವಂತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಮನವಿ ಮಾಡಿದ್ದಾರೆ.
ಇದೇ ವಿಚಾರವಾಗಿ ಸಚಿವರು, ಯದುವೀರ್ ಅವರ ಜತೆ ಮಾತುಕತೆ ನಡೆಸಿದ್ದಾರೆ. ಯದುವೀರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರೆಂದು ಹೇಳಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಪಸಿದ್ಧರನ್ನು ರಾಯಭಾರಿಗಳಾಗಿ ಬಳಸಿಕೊಳ್ಳಲು ಸಚಿವರು ಯೋಜಿಸಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯದುವೀರ್ ಅವರ ವರ್ಚಸ್ಸು ಬಳಸಿಕೊಳ್ಳಬೇಕೆಂಬುದು ಸಚಿವರ ಆಲೋಚನೆ. ಇನ್ನು ಯದುವೀರ್ ಕೂಡ ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ತಮ್ಮ ತಾಯಿಯವರನ್ನು ಕೇಳಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

"ಯದುವಂಶದ ಕೊನೆಯ ರಾಜ ಹಾಗೂ ರಾಜ್ಯದ ಮೊದಲ ರಾಜ್ಯಪಾಲ ಶ್ರೀ ಜಯಚಾಮರಾಜ ಒಡೆಯರ್ (ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ತಂದೆ) ಜನ್ಮಶತಮಾನೋತ್ಸವ ಅಂಗವಾಗಿ ಅವರ ಭಾವಚಿತ್ರವನ್ನು ಈ ಬಾರಿ ದಸರಾ ಮಹೋತ್ಸವದ ಎಲ್ಲಾ ಭಿತ್ತಿ ಪತ್ರ(ಪೋಸ್ಟರ್) ಗಳಲ್ಲೂ ಹಾಕಿಸಲಾಗುವುದು.
ಇದು ಸರ್ಕಾರ ಅವರಿಗೆ ಸಲ್ಲಿಸುವ ಗೌರವ" ಎಂದು ಸಚಿವರು ತಿಳಿಸಿದ್ದು ಇದಕ್ಕೆ ಯದುವೀರ್ ಅವರೂ ಒಪ್ಪಿಗೆ ಸೂಚಿಸಿದ್ದಾರೆ.












Click it and Unblock the Notifications