"ಎರಡೂವರೆ ವರ್ಷದಲ್ಲಿ ಎಲ್ಲಾ ಕೆಲಸ ಮಾಡಿ ಮುಗಿಸುವ ಅಪೇಕ್ಷೆ''

ಮೈಸೂರು, ನವೆಂಬರ್ 25: ಮುಂದಿನ ಎರಡೂವರೆ ವರ್ಷ ನನಗೆ ಅವಕಾಶ ಇದೆ. ಅಷ್ಟರಲ್ಲಿ ಎಲ್ಲಾ ಕೆಲಸ ಮಾಡಿ ಮುಗಿಸುವ ಅಪೇಕ್ಷೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮುಡುಕುತೊರೆ ಗ್ರಾಮದಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿ, ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗೆ 10 ಕೋಟಿ ಬಿಡುಗಡೆ ಮಾಡುತ್ತೇನೆ ಎಂದು ಘೋಷಿಸಿದರು.

ಒಂದೇ ಬಾರಿಗೆ 10 ಕೋಟಿ ಬಿಡುಗಡೆ ಮಾಡುತ್ತೇನೆ. ಎರಡು ವರ್ಷದಲ್ಲಿ ಕೆಲಸ ಮುಗಿಸಬೇಕು ಎಂದ ಅವರು, ಪರೋಕ್ಷವಾಗಿ ಮುಂದಿನ ಎರಡೂವರೆ ವರ್ಷ ತಾವೇ ಸಿಎಂ ಆಗಿರುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

Mysuru: Rs 10 Crore Release For Development Of Mudukutore Temple: CM Yediyurappa

ದೇವಸ್ಥಾನ ಅಭಿವೃದ್ಧಿಗೆ ಹಣದ ಕೊರತೆ ಬರಲ್ಲ. ದೇವರೆ ಹಣ ಕೊಡುತ್ತಾನೆ, ದೇವಸ್ಥಾನಕ್ಕೆ ಕೊಡಲು ಯಾಕೆ ತೊಂದರೆ. 136 ದೇವಸ್ಥಾನಗಳಿಗೆ 136 ಕೋಟಿ‌ ರುಪಾಯಿ ಹಣ ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು.

ಒಬ್ಬ ಮನುಷ್ಯನ ಸಾಧನೆ ಮಾತನಾಡಬೇಕು, ಮಾತೇ ಸಾಧನೆ ಆಗಬಾರದು. ಇನ್ನೂ ಎರಡೂವರೆ ವರ್ಷ ನನ್ನ ಅಧಿಕಾರ ಇದೆ. ಈ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇನೆ. ಈ ಮೂಲಕ ಸಾಧನೆ ಮಾತನಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Mysuru: Rs 10 Crore Release For Development Of Mudukutore Temple: CM Yediyurappa

ಮುಡುಕುತೊರೆಯ ಬೆಟ್ಟದ ಮೇಲೆ ಇರುವ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು. ಜೀರ್ಣೋದ್ಧಾರದ ಅಡಿಗಲ್ಲಿಗೆ ಯಡಿಯೂರಪ್ಪ ಪೂಜೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ, ಎಸ್.ಟಿ ಸೋಮಶೇಖರ್ ಸೇರಿದಂತೆ ಇತರರು ಭಾಗಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+