• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಂತ್‌ಕುಮಾರ್ ಹೆಗಡೆ ಒಬ್ಬ ರಾಕ್ಷಸ; ಪ್ರಕಾಶ್‌ ರೈ

By Manjunatha
|

ಮೈಸೂರು, ಫೆಬ್ರವರಿ 26: ಕೋಮುವಾದವನ್ನು ಹಾಗೂ ಅದರ ಪ್ರಸಾರಕರನ್ನು ಕಠು ಶಬ್ದಗಳಲ್ಲಿ ಖಂಡಿಸುತ್ತಿರುವ ನಟ ಪ್ರಕಾಶ್ ರೈ, ಬಿಜೆಪಿ ಸಂಸದ ಅನಂತ್‌ಕುಮಾರ್ ಹೆಗಡೆ ಅವರನ್ನು 'ರಾಕ್ಷಸ' ಎಂದು ಕರೆದಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರೈ ಅವರು, ಅಪ್ಪಟ ಕೋಮುವಾದಿ ಎಂದೇ ಗುರುತಿಸಲ್ಪಡುವ ಅನಂತ್‌ಕುಮಾರ್ ಹೆಗಡೆ ಅವರನ್ನು ರಾಕ್ಷಸರಿಗೆ ಹೋಲಿಸಿದ್ದಾರೆ.

ನಲಪಾಡ್‌ ಇಷ್ಟೋಂದು ಕ್ರೂರಿ ಎಂದು ಗೊತ್ತಿರಲಿಲ್ಲ: ಪ್ರಕಾಶ್ ರೈ

ಅನಂತ್‌ಕುಮಾರ್ ಹೆಗಡೆ ಮತ್ತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಹರಿಹಾಯ್ದ ಪ್ರಕಾಶ್ ರೈ ಅವರು 'ಅವರ ಮಾತು ಕೇಳಿದರೆ ಭಯವಾಗುತ್ತದೆ, ದೇಶದಲ್ಲಿ ಕೋಮುವಾದ ಬೆಳೆಸಲು ಸಂಸದ, ಶಾಸಕರಾಗಬೇಕಾ, ಇವರನ್ನು ನಾಯಕರು ಎನ್ನಲು ಸಾಧ್ಯವಾ' ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರತಾಪ್ ಸಿಂಹ ಅವರ ಬಗ್ಗೆಯೂ ಟೀಕಿಸಿದ ಅವರು, 'ನನ್ನ ಮಗನ ಸಾವಿನ ಸಂಧರ್ಭದಲ್ಲೂ ಸಂಸದ ಪ್ರತಾಪ್ ಸಿಂಹ ನನ್ನ ಬಗ್ಗೆ ತೀರಾ ಅಸಂಸ್ಕಾರದ ಮಾತನಾಡಿದ್ದರು' ಎಂದರು.

ದೇಶ ಒಡೆಯುವ, ಜನಗಳನ್ನು ಧರ್ಮದ ಆಧಾರದಲ್ಲಿ ಬೇರೆ ಮಾಡುವ ರೀತಿಯ ಹೇಳಿಕೆಗಳನ್ನು ಕೊಡುತ್ತಿರುವ ಇವರನ್ನು ಅವರ ಪಕ್ಷದ ನಾಯಕರೇ ಪ್ರಶ್ನೆ ಮಾಡುತ್ತಿಲ್ಲ, ಹಾಗಾಗಿ ಅವರುಗಳನ್ನು ನಾನು ಪ್ರಶ್ನಿಸುತ್ತಿದ್ದೇನೆ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actor Prakash Rai calls BJP MP Ananth kumar Hegde 'a monster'. He also lambasted on MP Prathap Simha and says 'he used very bad language against me'. He said 'BJP is not asking both of them so I started questioning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more